ತ್ರಿ ಸೆಂಚುರಿ… ಸರ್ಫರಾಝ್ ಖಾನ್ ವಿಶ್ವ ದಾಖಲೆ – Kannada News | Sarfaraz Khan set a new record in cricket
ಸರ್ಫರಾಝ್ ಖಾನ್ (Sarfaraz Khan) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದೇಶೀಯ ಅಂಗಳದಲ್ಲಿ ಒಂದೇ ಸೀಸನ್ನಲ್ಲಿ ಮೂರು ಸೆಂಚುರಿ ಸಿಡಿಸುವ ಮೂಲಕ. ಈ ಸೆಂಚುರಿಗಳೊಂದಿಗೆ ವಿಶೇಷ ಸಾಧನೆಗೈದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಸರ್ಫರಾಝ್ ಖಾನ್ ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಹೈದರಾಬಾದ್ ವಿರುದ್ಧದ ರಣಜಿ ಪಂದ್ಯದಲ್ಲಿ ಮುಂಬೈ ಪರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ 219 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 19 ಫೋರ್ಗಳೊಂದಿಗೆ 227 ರನ್ ಬಾರಿಸಿ ಅಬ್ಬರಿಸಿದ್ದಾರೆ….