ಪಹಲ್ಗಾಮ್ ದಾಳಿಯ ಈ ಭೀಕರ ವಿಡಿಯೋ ಎಂದಿಗೂ ಮರೆಯುವಂತಿಲ್ಲ: ಪ್ರವಾಸಿಗರನ್ನು ಸಾವಿನ ದವಡೆಗೆ ತಳ್ಳಿದ್ದು ಯಾರು? – Kannada News | Pahalgam Attack Video: ‘Allah Hu Akbar’ Chant Raises Serious Questions on Operator’s Intent
ಶ್ರೀನಗರ, ಏ.22: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಗೆ ಇಂದು (ಏ.22) ಒಂದು ವರ್ಷ. ಈ ಘಟನೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಆದರೆ ಈ ಭೀಕರ ಘಟನೆ ನಡೆಯುದಕ್ಕೂ ಮುನ್ನ ಏನಾಗಿತ್ತು ಎಂಬ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿನ ‘ಆಪರೇಟರ್’ ವರ್ತನೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರವಾಸಿಗರು ಸಂಚರಿಸುತ್ತಿದ್ದ ವೇಳೆ ಹಠಾತ್ ಗುಂಡಿನ ದಾಳಿ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಆಪರೇಟರ್ ಒಬ್ಬರು…