ಇಡೀ ಇಂದೋರ್ಗೆ ನೀರು ಪೂರೈಸುತ್ತಿದ್ದ ಟ್ಯಾಂಕಿನಲ್ಲಿತ್ತು ವ್ಯಕ್ತಿಯ ಶವ, 30 ವರ್ಷಗಳ ಹಿಂದೆ ಏನಾಗಿತ್ತು? – Kannada News | Indore’s Bhagirathpura Recalls a Disturbing Water Tank Tragedy After 30 Years
ಇಂದೋರ್, ಜನವರಿ 05: ಇಂದೋರ್ನಲ್ಲಿ ಚರಂಡಿ ನೀರು( Sewage Water) ಕುಡಿಯುವ ನೀರಿನ ಜತೆ ಮಿಶ್ರಣವಾಗಿ ಹಲವು ಜನರ ಜೀವಕ್ಕೆ ಕುತ್ತು ತಂದಿದೆ. ಆದರೆ ಭಾಗೀರಥಪುರದಲ್ಲಿ ಈ ರೀತಿಯ ದುರಂತ ಹೊಸದೇನಲ್ಲ. ಇಂದೋರ್ 30 ವರ್ಷಗಳ ಹಿಂದೆ ನಡೆದಿರುವ ಘಟನೆಯನ್ನು ಅಲ್ಲಿನ ಜನತೆ ನೆನಪಿಸಿಕೊಂಡಿದ್ದಾರೆ. ಸುಭಾಷ್ ಚೌಕ್ ಟ್ಯಾಂಕ್‌ನಲ್ಲಿ ಕೊಳೆತ ಶವವೊಂದು ಪತ್ತೆಯಾಗಿತ್ತು. ಸಾವಿರಾರು ಜನರು ಆ ಟ್ಯಾಂಕಿನ ನೀರನ್ನೇ ಕುಡಿದಿದ್ದರು. ಪಶ್ಚಿಮ ಇಂದೋರ್‌ನ ಸಾವಿರಾರು ಮನೆಗಳಿಗೆ ವಾರಗಳವರೆಗೆ ನೀರು ಪೂರೈಸುತ್ತಿದ್ದ ಟ್ಯಾಂಕ್‌ನೊಳಗೆ ಮಾನವ ಅಸ್ಥಿಪಂಜರ ಪತ್ತೆಯಾಗಿತ್ತು….