‘ಮದರ್ ಪ್ರಾಮಿಸ್’ ಸಿನಿಮಾ ನೋಡಿದ ಶಿವಣ್ಣ, ಹೇಳಿದ್ದೇನು? – Kannada News | Shiva Rajkumar watched and praised Mother Promise movie
ಡಾಲಿ ಧನಂಜಯ್ (Daali Dhananjaya) ನಿರ್ಮಿಸಿ, ನಟನೆ ಸಹ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಮರ್ಶಕರು ಸಹ ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ಆಗಿರುವ ‘ಮದರ್ ಪ್ರಾಮಿಸ್’ ಅನ್ನು ಕುಟುಂಬಗಳು ಒಟ್ಟಿಗೆ ಹೋಗಿ ವೀಕ್ಷಿಸುತ್ತಿವೆ. ಆದರೆ ಕೆಲವರು ಸಿನಿಮಾಕ್ಕೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವ ಯತ್ನಗಳನ್ನು ಮಾಡುತ್ತಿದ್ದಾರೆಂದು ಚಿತ್ರತಂಡ ಆರೋಪಿಸಿದೆ. ಇದರ ನಡುವೆ ಸಿನಿಮಾಕ್ಕೆ ಶಿವರಾಜ್ ಕುಮಾರ್ ಅವರ ಬೆಂಬಲ ದೊರೆತಿದೆ….