‘ಕಡಲ ನಾಡಿಗೆ ಸ್ವಾಗತ’: ‘ಕರಾವಳಿ’ ಸಿನಿಮಾ ಟೈಟಲ್ ಸಾಂಗ್ ರಿಲೀಸ್ – Kannada News | Prajwal Devaraj starrer Karavali movie title song released
ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ ಶೆಟ್ಟ ನಟನೆಯ ‘ಕರಾವಳಿ’ ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಮನ ಸೆಳೆಯುತ್ತಲೇ ಬಂದಿದೆ. ಭಿನ್ನ ಕತೆಯ, ಭಿನ್ನ ನಿರೂಪಣೆಯ ಈ ಸಿನಿಮಾ ಇದೀಗ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಇತ್ತೀಚೆಗಷ್ಟೆ ಘೋಷಿಸಲಾಗಿದ್ದು, ಸಿನಿಮಾದ ಪ್ರಚಾರವೂ ಆರಂಭವಾಗಿದೆ. ಇದೀಗ ‘ಕರಾವಳಿ’ ಸಿನಿಮಾದ ಶೀರ್ಷಿಕೆ ಗೀತೆಯನ್ನು ಚಿತ್ರತಂಡ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದೆ. ‘ಕರಾವಳಿ’ ಸಿನಿಮಾದ ಕತೆಯಂತೆ ಈ ಹಾಡು ಸಹ ಕರಾವಳಿಯ ಭೌಗೋಳಿಕ ಭಿನ್ನತೆ, ಸಂಸ್ಕೃತಿ, ಜನರ ಆಚರಣೆ…