Headlines

ಕೊಲಂಬಿಯಾದಲ್ಲಿ ಭಾರೀ ದುರಂತ; 110 ಸೈನಿಕರಿದ್ದ ಮಿಲಿಟರಿ ವಿಮಾನ ಪತನ

ಬೊಗೋಟಾ (ಕೊಲಂಬಿಯಾ), ಮಾರ್ಚ್ 23: ಕೊಲಂಬಿಯಾದಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಕೊಲಂಬಿಯಾದ ಮಿಲಿಟರಿಯ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಾಯುಪಡೆಯ ಈ ಹರ್ಕ್ಯುಲಸ್ ಸಿ -130 ವಿಮಾನವು 110 ಸೈನಿಕರನ್ನು ಹೊತ್ತೊಯ್ಯುತ್ತಿತ್ತು. ಈ ಘಟನೆಯಲ್ಲಿ ಕೊಲಂಬಿಯಾದ ವಿಮಾನದಲ್ಲಿದ್ದ ಎಲ್ಲ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಕೊಲಂಬಿಯಾದ ಮಿಲಿಟರಿ ಇನ್ನೂ ಈ ಘಟನೆಯ ಸಾವಿನ ಪ್ರಮಾಣದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ …

Read More

ಬಿಹಾರದ ಕತಿಹಾರ್‌ನಲ್ಲಿ ಹಲವು ವಾಹನಗಳ ನಡುವೆ ಡಿಕ್ಕಿ; 10 ಜನ ಸಾವು, 25 ಮಂದಿಗೆ ಗಾಯ

ನವದೆಹಲಿ, ಏಪ್ರಿಲ್ 11: ಬಿಹಾರದ ಕೊರ್ಹಾ ಪೊಲೀಸ್ ಠಾಣೆ ವ್ಯಾಪ್ತಿಯ ಗೆರಾಬರಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಂದು 10 ಜನರು ಸಾವನ್ನಪ್ಪಿದ್ದಾರೆ. 25 ಜನರು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ (Accident) ಬಸ್ ಮತ್ತು ಪಿಕಪ್ ವಾಹನವು ಡಿಕ್ಕಿ ಹೊಡೆದಿದೆ. ಗಾಯಾಳುಗಳಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ. ಅಪಘಾತದ ನಂತರ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಗಾಯಗೊಂಡ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಸುಮಾರು…

Read More

‘ಧುರಂಧರ್ 2’ ಬಗ್ಗೆ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡ ನಟ ರಾಮ್ ಚರಣ್ – Kannada News | Ram Charan being trolled for talking about Dhurandhar movie

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಮೂರು ವಾರದ ಹಿಂದೆ ಬಿಡುಗಡೆ ಆಗಿದ್ದು ಹಿಟ್ ಎನಿಸಿಕೊಂಡಿದೆ. ಬಿಡುಗಡೆ ಆದ 18 ದಿನಗಳಲ್ಲಿ ಸುಮಾರು 350 ಕೋಟಿಗೂ ಹೆಚ್ಚು ಮೊತ್ತವನ್ನು ಈ ಸಿನಿಮಾ ಗಳಿಕೆ ಮಾಡಿದೆ. ‘ಆರ್​​ಆರ್​​ಆರ್’ ಬಳಿಕ ಸತತ ಸೋಲಿನಿಂದ ಕಂಗೆಟ್ಟಿದ್ದ ನಟ ರಾಮ್ ಚರಣ್, ‘ಪೆದ್ದಿ’ ಸಿನಿಮಾ ಮೂಲಕ ಗೆಲುವು ಸಾಧಿಸಿದ್ದಾರೆ. ಆದರೆ ಇತ್ತೀಚೆಗೆ ರಾಮ್ ಚರಣ್, ತಮ್ಮ ಮಾತುಗಳಿಂದ ಟ್ರೋಲ್​​ಗೆ ಗುರಿ ಆಗುತ್ತಿದ್ದಾರೆ. ‘ಪೆದ್ದಿ’ ಪ್ರಚಾರದ ಸಮಯದಲ್ಲಿ ಜಸ್ಪೀತ್ ಬುಮ್ರಾ ಅವರನ್ನು…

Read More

ಪದೇ ಪದೇ ಗಂಟಲು ನೋವು ಬರುವುದಕ್ಕೆ ಕಾರಣವೇನು? ಇದು ಯಾವ ರೋಗದ ಮುನ್ಸೂಚನೆ ತಿಳಿದುಕೊಳ್ಳಿ – Kannada News | Why Does Throat Pain Occur? Know the Reasons

ಕೆಲವರಿಗೆ ಗಂಟಲು ನೋವು (Throat Pain) ಪದೇ ಪದೇ ಕಂಡುಬರುತ್ತದೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿ ಇದರಿಂದ ಮುಕ್ತಿ ಪಡೆಯುವುದಕ್ಕಿಂತ ನಿರ್ಲಕ್ಷಿಸುವವರ ಸಂಖ್ಯೆಯೇ ಜಾಸ್ತಿ. ಆದರೆ ಆರೋಗ್ಯ ತಜ್ಞರು ಈ ಸಮಸ್ಯೆಯನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು ಎನ್ನುತ್ತಾರೆ. ಏಕೆಂದರೆ ಇದು ಕೆಲವೊಮ್ಮೆ ರೋಗದ ಲಕ್ಷಣವಾಗಿರಬಹುದು. ಗಂಟಲು ನೋವು ಅಥವಾ ತುರಿಕೆ ಹಲವಾರು ಕಾರಣಗಳಿಂದ ಉಂಟಾಗಬಹುದು. ಶೀತ, ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನ ಜೊತೆಗೆ, ಅಲರ್ಜಿ, ಧೂಳು, ಹೊಗೆ, ಮಾಲಿನ್ಯ, ತುಂಬಾ ಬಿಸಿ ಅಥವಾ ತಣ್ಣನೆಯ ವಸ್ತುಗಳ ಸೇವನೆ…

Read More

ತಪ್ಪಿಯೂ ಚಹಾದೊಂದಿಗೆ ಈ ಆಹಾರಗಳನ್ನು ಸೇವನೆ ಮಾಡಬಾರದಂತೆ – Kannada News | The habit of eating these foods with tea can have a negative impact on health

ಚಹಾ (tea) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯರಿಗಂತೂ ಬಿಸಿ ಬಿಸಿ ಚಹಾ ಹಾಟ್‌ ಫೇವರೇಟ್‌. ಅದೆಷ್ಟೋ ಜನಕ್ಕೆ ಒಂದು ಕಪ್‌ ಚಹಾ ಕುಡಿಯದೆ ದಿನವೇ ಆರಂಭವಾಗುವುದಿಲ್ಲ, ಇನ್ನೂ ಕೆಲವರಿಗೆ ದಿನಕ್ಕೆ ನಾಲ್ಕೈದು ಬಾರಿ ಚಹಾ ಕುಡಿಯದಿದ್ದರೇ ತಲೆಯೇ ಓಡುವುದಿಲ್ಲ. ಹೆಚ್ಚಾಗಿ ಟೀ, ಬಿಸ್ಕೆಟ್‌, ಪಕೋಡಾ ಇತ್ಯಾದಿ ತಿನಿಸುಗಳೊಂದಿಗೆ ಸವಿಯಲಾಗುತ್ತದೆ. ಇದು ಬಾಯಿ ರುಚಿ ಹೆಚ್ಚಿಸಬಹುದು. ಆದರೆ ಕೆಲವು ಆಹಾರಗಳನ್ನು ಚಹಾದೊಂದಿಗೆ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಹಾಗಿದ್ದರೆ ಯಾವೆಲ್ಲಾ ಆಹಾರಗಳನ್ನು…

Read More

ರಹಸ್ಯವಾಗಿ ಮದುವೆಯಾದರೇ ನಟಿ ಕಂಗನಾ ರಣಾವತ್? ವೈರಲ್ ವಿಡಿಯೋದ ಅಸಲಿಯತ್ತೇನು? – Kannada News | Kangana Ranaut’s ‘Secret Marriage’ Viral Video: Truth Revealed About Queen 2 Look

ಬಾಲಿವುಡ್‌ನ ವಿವಾದಾತ್ಮಕ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಇತ್ತೀಚೆಗೆ ಕಂಗನಾ ಅವರ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರು ಕುತ್ತಿಗೆಗೆ ಮಂಗಲಸೂತ್ರ ಮತ್ತು ಕೈಗಳಲ್ಲಿ ಹಸಿರು ಬಳೆಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಯೊಂದಿಗೆ ನಡೆದು ಹೋಗುತ್ತಿರುವ ಅವರ ಈ ‘ಮದುಮಗಳ’ ಲುಕ್ ಕಂಡ ಅಭಿಮಾನಿಗಳು, ಕಂಗನಾ (Kangana) ಯಾರಿಗೂ ತಿಳಿಯದಂತೆ ಸಪ್ತಪದಿ ತುಳಿದಿದ್ದಾರಾ? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ವೈರಲ್ ವಿಡಿಯೋದ ಹಿಂದಿನ ಸತ್ಯ…

Read More

ಪಾತ್ರ ಕೊಟ್ಟಿಲ್ಲವೆಂದು ನಿರ್ಮಾಪಕರ ಮೇಲೆ ಮುನಿಸಿಕೊಂಡಿದ್ದ ತ್ರಿಷಾ – Kannada News | Producer MS Raju said Trisha was disappointed with him for not giving role in his movie

ತಮಿಳಿನ ಸ್ಟಾರ್ ನಟ ವಿಜಯ್ (Vijay) ಸಿಎಂ ಆಗುತ್ತಲೇ ಇತ್ತ ತ್ರಿಷಾ ಕೃಷ್ಣನ್ ಮಾರುಕಟ್ಟೆ ಹೆಚ್ಚಾಗಿದೆ. ವಿಜಯ್​​​ಗೆ ಬಲು ಆಪ್ತವಾಗಿರುವ ತ್ರಿಷಾ, ತಮ್ಮ 43ನೇ ವಯಸ್ಸಿನಲ್ಲೂ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಈಗಲೂ ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದು, ಬಿಡುವಿಲ್ಲದೆ ಚಿತ್ರೀಕರಣಗಳಲ್ಲಿ ಭಾಗಿ ಆಗುತ್ತಿದ್ದಾರೆ. ತ್ರಿಷಾ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು 24 ವರ್ಷಗಳಾಗಿವೆ. ಹಲವಾರು ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ತ್ರಿಷಾ ನಟಿಸಿದ್ದಾರೆ. ಒಟ್ಟೊಟ್ಟಿಗೆ ನಾಲ್ಕೈದು ಸಿನಿಮಾಗಳಲ್ಲಿಯೂ ನಟಿಸಿದ್ದರು ತ್ರಿಷಾ. ಆದರೆ ಒಮ್ಮೆ ಒಂದು ಫ್ಲಾಪ್ ಸಿನಿಮಾನಲ್ಲಿ ಪಾತ್ರ ಕೊಡದೇ ಇದ್ದಿದ್ದಕ್ಕೆ…

Read More

ವಿಸ್ಫೋಟಕ ಸೆಂಚುರಿ ಸಿಡಿಸಿದ ನಿಕಿನ್ ಜೋಸ್: ಪಾಂಡೆ ಪಡೆಗೆ ಸೋಲು! – Kannada News | Nikin Jose Smashed Century in Maharaja Trophy 2026

ಮೈಸೂರಿನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 6ನೇ ಪಂದ್ಯದಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಿಕಿನ್ ಜೋಸ್ ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕ ಕರುಣ್ ನಾಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಮನೀಶ್ ಪಾಂಡೆ 34 ಎಸೆತಗಳಲ್ಲಿ 3…

Read More

Home Protection: ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆ ಅಂತಾ ಅನಿಸುತ್ತಿದೆಯಾ? ಗುರುವಾರ ಈ ಸರಳ ಪರಿಹಾರ ಮಾಡಿ

ಕೆಲವೊಮ್ಮೆ ನಾವು ಎಷ್ಟೇ ಕಷ್ಟಪಟ್ಟರೂ ಅಂದುಕೊಂಡ ಕೆಲಸಗಳು ಕೈಗೂಡುವುದಿಲ್ಲ. ಕುಟುಂಬದ ಸುಖಕ್ಕಾಗಿ ಹಗಲಿರುಳು ದುಡಿದರೂ, ನಿರೀಕ್ಷಿತ ಫಲಿತಾಂಶ ಮಾತ್ರ ಮರೀಚಿಕೆಯಾಗುತ್ತದೆ. ಇಂತಹ ಸಮಯದಲ್ಲಿ ನಮ್ಮ ಅರಿವಿಗೆ ಬಾರದಂತೆ ಯಾವುದೋ ಒಂದು ಅದೃಶ್ಯ ಶಕ್ತಿ ನಮ್ಮ ಏಳಿಗೆಯನ್ನು ತಡೆಯುತ್ತಿದೆ ಎಂಬ ಭಾವನೆ ಮೂಡುವುದು ಸಹಜ. ಸಮಾಜದಲ್ಲಿ ಬೆಳೆಯುತ್ತಿರುವಾಗ ನಮ್ಮನ್ನು ಸುತ್ತುವರೆದಿರುವ ಎಲ್ಲರೂ ನಮ್ಮ ಪ್ರಗತಿಯನ್ನು ಕಂಡು ಸಂತೋಷಪಡುವುದಿಲ್ಲ ಎಂಬುದು ಕಹಿ ಸತ್ಯ. ನಕಾರಾತ್ಮಕ ದೃಷ್ಟಿ ಮತ್ತು ಅದರ ಪರಿಣಾಮ: ನಮ್ಮ ಮನೆಗೆ ಅನೇಕರು ಬರುತ್ತಾರೆ, ಹೋಗುತ್ತಾರೆ. ಅವರಲ್ಲಿ ಕೆಲವರು…

Read More

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್ – Kannada News | Ashika Ranganath to attend Rashmika Mandanna Vijay Deverakonda Marriage

ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಅವರು ಸಪ್ತಪದಿ ತುಳಿಯಲಿದ್ದಾರೆ. ಈ ಹೈ-ಪ್ರೊಫೈಲ್ ಮದುವೆಗೆ ಯಾರೆಲ್ಲ ಬರಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಇದೆ. ಮೂಲಗಳ ಪ್ರಕಾರ ಕೇವಲ 100 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ವಿಶೇಷ ಏನೆಂದರೆ, ಕನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath) ಅವರಿಗೆ ಆಹ್ವಾನ ಬಂದಿದೆ. ಈಗಾಗಲೇ ಅವರು ಮದುವೆಗೆ ತೆರಳಿದ್ದಾರೆ. ಫೆಬ್ರವರಿ 26ರಂದು ಉದಯಪುರದಲ್ಲಿ ರಶ್ಮಿಕಾ ಮಂದಣ್ಣ…

Read More