Headlines

‘ಟಾಕ್ಸಿಕ್’ ಹೊಸ ದಾಖಲೆ: ವಿದೇಶಿ ವಿತರಣೆ ಹಕ್ಕು 105 ಕೋಟಿ ರೂಪಾಯಿಗೆ ಮಾರಾಟ – Kannada News | Yash starrer Toxic movie overseas distribution rights sold to Rs 105 Cr to Phars Films

‘ರಾಕಿಂಗ್ ಸ್ಟಾರ್’ ಯಶ್ (Yash) ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇತ್ತೀಚೆಗಷ್ಟೇ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿತರಣಾ ಹಕ್ಕುಗಳು 120 ಕೋಟಿ ರೂಪಾಯಿಗೆ ಮಾರಾಟ ಆಗಿದ್ದವು. ಈಗ ‘ಟಾಕ್ಸಿಕ್’ (Toxic) ಸಿನಿಮಾ ವಿದೇಶಿ ಮಾರುಕಟ್ಟೆಯಲ್ಲೂ ದೂಳೆಬ್ಬಿಸಿದೆ. ವಿಶ್ವದಾದ್ಯಂತ ಸಿನಿಮಾ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಫಾರ್ಸ್ ಫಿಲ್ಮ್ (Phars Film) ಸಂಸ್ಥೆಯು ‘ಟಾಕ್ಸಿಕ್’ ಚಿತ್ರದ ಓವರ್​ಸೀಸ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಐತಿಹಾಸಿಕ ಡೀಲ್…

Read More

ಅದು ನನಗೆ ಗೊತ್ತಿದೆ: ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ – Kannada News | CM economic adviser and Yelburga MLA Basavaraj Rayareddy Talks about two months gruha Lakshmi Money Pending

ಕೊಪ್ಪಳ, (ಡಿಸೆಂಬರ್ 19): ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಮತ್ತು ವಿವಾದ ಮುಂದುವರಿದಿದೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಹಾಕಿಲ್ಲ. ಆದ್ರೆ, ಆಗಸ್ಟ್​ ವರೆಗೂ ಹಾಕಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸದನದಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದು, ಇದನ್ನೇ ಅಸ್ತ್ರ ಮಾಡಿಕೊಂಡ ವಿಪಕ್ಷ ಬಿಜೆಪಿ, ಏಕೆ ಸದನಕ್ಕೆ ತಪ್ಪು ನೀಡಿದ್ರು? ಕೂಡಲೇ ಸಚಿವರು ಕ್ಷಮೆ ಕೇಳಿಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಎರಡು ತಿಂಗಳ 5 ಸಾವಿರ ಕೋಟಿ ರೂಪಾಯಿ ಹಣ ಎಲ್ಲಿ…

Read More

NEET UG 2026 Results: ನೀಟ್ ಯುಜಿ ಫಲಿತಾಂಶ ಪ್ರಕಟ; 11.21 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣ; ರಿಸಲ್ಟ್ ನೋಡುವುದು ಹೇಗೆ? – Kannada News | NEET UG 2026 Results declared by NTA at how to check scorecard

ನವದೆಹಲಿ, ಜುಲೈ 16: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಇಂದು ‘ನೀಟ್ ಯುಜಿ 2026’ (NEET UG 2026) ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಉತ್ತೀರ್ಣರಾದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 58ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 715 ಅಂಕಗಳೊಂದಿಗೆ ಇಬ್ಬರಿಗೆ ಪ್ರಥಮ ಸ್ಥಾನ ಲಭಿಸಿದೆ. ಒಟ್ಟು 720 ಅಂಕಗಳಿಗೆ 715 ಅಂಕಗಳನ್ನು ಪಡೆಯುವ ಮೂಲಕ ಪಂಜಾಬ್‌ನ ಆರ್ಯನ್ ಗುಪ್ತಾ ಮತ್ತು ಹರಿಯಾಣದ ಪನ್ಶುಲ್ ಬನ್ಸಾಲ್ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಜೂನ್ 21ರಂದು…

Read More

Train Accident: ಸ್ಪೇನ್​ನಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ, 21 ಮಂದಿ ಸಾವು – Kannada News | Train Tragedy in Southern Spain Claims Dozens of Lives

ಸ್ಪೇನ್, ಜನವರಿ 19: ಆಂಡಲೂಸಿಯಾದ ದಕ್ಷಿಣ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 21 ಜನರು ಸಾವನ್ನಪ್ಪಿ, 70 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್‌ಗೆ ಪ್ರಯಾಣಿಸುತ್ತಿದ್ದ ರೈಲು ಅಡಾಮುಜ್ ಬಳಿ ಹಳಿತಪ್ಪಿ, ಇನ್ನೊಂದು ಹಳಿ ದಾಟಿ, ಮುಂದೆ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಆ ರೈಲು ಕೂಡ ಹಳಿತಪ್ಪಿತ್ತು.ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.30 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾರಿಗೆ ಸಚಿವ ಆಸ್ಕರ್…

Read More

Agniveer Recruitment: ಅಗ್ನಿವೀರ್ ನೇಮಕಾತಿಯಲ್ಲಿ ಐಟಿಐ-ಡಿಪ್ಲೊಮಾ ಪಡೆದವರಿಗೆ ಆದ್ಯತೆ ಏಕೆ? ಕಾರಣ ತಿಳಿಯಿರಿ – Kannada News | Agniveer Recruitment: ITI Diploma Holders Preferred Amidst Key Changes

ಅಗ್ನಿವೀರ್ ಯೋಜನೆಯಡಿ ನೇಮಕಗೊಂಡ ಮೊದಲ ಬ್ಯಾಚ್ ಮುಂದಿನ ವರ್ಷ ನಿವೃತ್ತರಾಗಲಿದೆ. ಇದರ ಜೊತೆಗೆ, ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಅಗ್ನಿವೀರ್ ನೇಮಕಾತಿಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆಗಳು ನಡೆಯುತ್ತಿವೆ. ಅಗ್ನಿವೀರ್ ನೇಮಕಾತಿ ಯೋಜನೆಗೆ ಮಾಡಿದ ಬದಲಾವಣೆಗಳಿಗೆ ಸಂಬಂಧಿಸಿದಂತೆ, ಐಟಿಐ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳಿಗಿಂತ ಆದ್ಯತೆಯನ್ನು ಪಡೆಯುತ್ತಿದ್ದಾರೆ. ಇದಕ್ಕೆ ಹಲವಾರು ಪ್ರಮುಖ ಕಾರಣಗಳಿವೆ. ಅಗ್ನಿವೀರ್ ನೇಮಕಾತಿಯಲ್ಲಿ ಐಟಿಐ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ಏಕೆ ಸಿಗುತ್ತಿದೆ, ಇದಕ್ಕೆ ಕಾರಣಗಳೇನು? ಭಾರತೀಯ ವಾಯುಪಡೆ ಮತ್ತು ಭಾರತೀಯ…

Read More

ಕ್ರಿಕೆಟರ್ ಜೊತೆಗೆ ಶ್ರೀಲೀಲಾ ಹೆಸರು ಥಳುಕು: ಯಾರದು ಯುವಕ? – Kannada News | Sreeleela name linked with Cricketer Tilak Varma is the dating story true

ಕನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಮಲಯಾಳಂ ಹೊರತುಪಡಿಸಿ ಭಾರತದ ಇನ್ನುಳಿದ ಪ್ರಮುಖ ಸಿನಿಮಾ ರಂಗಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್​​ಗೆ ಕಾಲಿಟ್ಟಿರುವ ಶ್ರೀಲೀಲಾಗೆ ಅಲ್ಲಿಯೂ ಸಹ ಭರ್ಜರಿ ಬೇಡಿಕೆ ಶುರುವಾಗಿದೆ. ಅದ್ಭುತ ಸೌಂದರ್ಯ, ನೃತ್ಯ ಮತ್ತು ನಟನಾ ಪ್ರತಿಭೆ ಇರುವ ಶ್ರೀಲೀಲಾ ಜೊತೆಗೆ ಕೆಲಸ ಮಾಡಲು ನಿರ್ದೇಶಕರು, ನಟರು ಕಾಯುತ್ತಿದ್ದಾರೆ. ಅಂದಹಾಗೆ ಇದೀಗ ಶ್ರೀಲೀಲಾ ಹೆಸರು ಗಾಸಿಪ್​​ ಕಾಲಂನಲ್ಲಿ ಕೇಳಿ ಬಂದಿದೆ. ಕ್ರಿಕೆಟರ್ ಒಬ್ಬರ ಜೊತೆಗೆ ಶ್ರೀಲೀಲಾ…

Read More

ನಾನು ಹೇಳಿದ್ದು ಹಂಗಲ್ಲ, ಹಿಂಗೆ: ಎಸ್​. ಬದರಿನಾಥ್ ಸ್ಪಷ್ಟನೆ! – Kannada News | S badrinath clarification about krunal pandya commentary

IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯದ ವೇಳೆ ತಮಿಳು ಕಾಮೆಂಟರಿಯಲ್ಲಿ ಮಾಜಿ ಕ್ರಿಕೆಟಿಗ ಎಸ್. ಬದರಿನಾಥ್ ಅವರು ಕೃನಾಲ್ ಪಾಂಡ್ಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ವಿವಾದ ತಾರಕ್ಕೇರುತ್ತಿದ್ದಂತೆ ಬದರಿನಾಥ್ ಅವರು ತಮ್ಮ ಮಾತಿನ ಹಿಂದಿನ ಅಸಲಿ ಉದ್ದೇಶವನ್ನು ವಿವರಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ವಿವಾದದ ಹಿನ್ನೆಲೆ: ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾಗ …

Read More

ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು

ಕಾರವಾರ, ಮಾರ್ಚ್​ 13: ಯುಎಇಯಿಂದ ಡಾಂಬರು ಹೊತ್ತು ಕಾರವಾರ ಬಂದರಿಗೆ ಚೆಂಗ್ ಎಕ್ಸ್ ಎಂಬ ಹಡಗು ಆಗಮಿಸಿದೆ. ಮಧ್ಯಪ್ರಾಚ್ಯದಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಹರ್ಮುಜ್ ಜಲಸಂಧಿಯಲ್ಲಿನ ನಿರ್ಬಂಧಗಳ ಕಾರಣದಿಂದ ಪೆಟ್ರೋಲಿಯಂ ಮತ್ತು ಕಚ್ಚಾ ಡಾಂಬರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈ ನಿರ್ಬಂಧದ ನಡುವೆಯೂ, ಮಾರ್ಚ್ 3ರಂದು ಯುಎಇಯಿಂದ ಹೊರಟಿದ್ದ ಈ ಹಡಗು ಮತ್ತೊಂದು ಮಾರ್ಗದ ಮೂಲಕ ಸುರಕ್ಷಿತವಾಗಿ ಬಂದರನ್ನು ತಲುಪಿದೆ. ಸರಿಸುಮಾರು 5,500 ಟನ್ ಸಾಮರ್ಥ್ಯದ ಈ ಹಡಗು 3,100 ಟನ್ ಡಾಂಬರನ್ನು ಹೊತ್ತು ಬಂದಿದೆ. ಮತ್ತಷ್ಟು…

Read More