Budget 2026: ಟ್ಯಾಕ್ಸ್ ಡಿಡಕ್ಷನ್, ಡೆವಲಪರ್ಸ್ಗೆ ಕಡಿಮೆ ದರದಲ್ಲಿ ಭೂಮಿ ಇತ್ಯಾದಿ ಕ್ರಮಗಳ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ – Kannada News | Tax breaks, incentives, affordable land for developers, here are few expectations of Real Estate sector from Budget
ನವದೆಹಲಿ, ಜನವರಿ 30: ಕಳೆದ ಕೆಲ ವರ್ಷಗಳಿಂದ ಸರ್ಕಾರ ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರಕ್ಕೆ ಮುತುವರ್ಜಿ ತೋರುತ್ತಾ ಬರುತ್ತಿದೆ. ವಸತಿ ಪ್ರಾಜೆಕ್ಟ್ಗಳು, ಕೈಗಾರಿಕಾ ಕಾರಿಡಾರ್ಗಳು ಸಾಕಷ್ಟು ನಿರ್ಮಾಣ ಆಗಿವೆ, ಆಗುತ್ತಿವೆ. ಇನ್ಫ್ರಾಸ್ಟ್ರಕ್ಚರ್ ಉತ್ತಮಗೊಂಡಂತೆ ರಿಯಲ್ ಎಸ್ಟೇಟ್ (Real Estate sector) ಉದ್ಯಮವೂ ಗರಿಗೆದರುತ್ತಾ ಬಂದಿದೆ. ಸರ್ಕಾರದ ಈ ಸುಧಾರಣಾ ಕ್ರಮಗಳು ಸ್ಥಗಿತಗೊಳ್ಳದೆ ಮುಂದುವರಿಯುತ್ತಾ ಹೋಗಲಿ ಎಂಬುದು ಈ ಉದ್ಯಮವು ಬಜೆಟ್ನಿಂದ ಮಾಡುತ್ತಿರುವ ನಿರೀಕ್ಷೆ. ಉದ್ಯೋಗ ಸೃಷ್ಟಿ, ಯೋಜಿತ ನಗರೀಕರಣ, ದೀರ್ಘಕಾಲೀನ ಆರ್ಥಿಕ ಕ್ಷಮತೆ ಇವುಗಳಿಗೆ ರಿಯಲ್ ಎಸ್ಟೇಟ್ ಸೆಕ್ಟರ್ ಶಕ್ತಿ…