ಸೋಲಾರ್ ಪ್ಲಾಂಟ್ ಹೆಸರಲ್ಲಿ ಗುಡ್ಡ ಅಗೆದು ಮರಗಳ ಮಾರಣಹೋಮ: ಇದರ ಹಿಂದೆ ‘ಲಕ್ಷ್ಮೀ’ ಕೃಪಾಕಟಾಕ್ಷ? – Kannada News | Belagavi Forest Destruction: Illegal Sandalwood Felling for Solar Plant Outrages Locals
ಬೆಳಗಾವಿ, ಫೆಬ್ರವರಿ 02: ಅದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ತವರು ಕ್ಷೇತ್ರ. ಸಂಗೊಳ್ಳಿ ರಾಯಣ್ಣ ಕೂಡ ಈ ಕೌರಿ ಗುಡ್ಡದಲ್ಲಿ ಉಳಿದಿದ್ದ ಅನ್ನೋದು ಇತಿಹಾಸ. ಈ ಗುಡ್ಡದಲ್ಲಿ ಶ್ರೀಗಂಧದ ಮರ ಸೇರಿದಂತೆ ಹಲವು ಬಗೆಯ ಗಿಡಗಳು, ಪ್ರಾಣಿ-ಪಕ್ಷಿಗಳು ವಾಸವಾಗಿವೆ. ಆದರೆ ಇದೀಗ ಸೋಲಾರ್ ಪ್ಲಾಂಟ್ ಹೆಸರಿನಲ್ಲಿ ಗುಡ್ಡವನ್ನೇ ಅಗೆಯಲಾಗಿದ್ದು, ಸಾವಿರಾರು ಮರಗಳ (tree) ಮಾರಣಹೋಮವೇ ನಡೆದಿದೆ. ಸದ್ಯ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ತಾಲೂಕಿನ ಬಡಲಾ ಅಂಕಲಗಿ ಗ್ರಾಮದಲ್ಲಿ ಕಳೆದ ಒಂದೂವರೆ…