Headlines

KSRTC ಬಸ್​​-ಲಾರಿ ನಡುವೆ ಭೀಕರ ಅಪಘಾತ: ತುಂಡಾದ ಚಾಲಕನ ಕಾಲು; ಹಲವರು ಗಂಭೀರ – Kannada News | KSRTC Bus and Lorry Accident on the Outskirts of Lokapur, Bagalakot

ಬಾಗಲಕೋಟೆ, ಡಿಸೆಂಬರ್​​ 31: ಕೆಎಸ್​​ಆರ್​ಟಿಸಿ ಬಸ್​ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್​​ ಚಾಲಕನ ಕಾಲು ತುಂಡಾಗಿರುವ ಜೊತೆಗೆ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲೋಕಾಪುರ ಹೊರವಲಯದಲ್ಲಿ ನಡೆದಿದೆ. ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ನಡೆದಿರುವ ಈ ಅಪಘಾತದಲ್ಲಿ ಗಾಯಗೊಂಡವರನ್ನು ಲೋಕಾಪೂರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್​​ ಮತ್ತು ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​…

Read More

Video: ಸ್ಕೂಲ್ ಅಸೆಂಬ್ಲಿಯಲ್ಲಿ ಕಣ್ಣು ಮುಚ್ಚಿಕೊಂಡೇ ಲಾಲಿ ಪಾಪ್ ಸವಿಯುತ್ತಾ ನಿಂತ ಪುಟಾಣಿ

ಮುದ್ದು ಮಕ್ಕಳ (little kids) ಆಟ ತುಂಟಾಟಗಳನ್ನು ನೋಡುವುದೇ ಚಂದ. ಹೆತ್ತವರು ಕೂಡ ಮಕ್ಕಳ ಆಟ ಪಾಠಗಳನ್ನು ಕಣ್ಣು ತುಂಬಿಸಿಕೊಳ್ಳುತ್ತಾರೆ. ಈ ಪುಟ್ಟ ಮಕ್ಕಳ ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಮುದ್ದಾದ ಕ್ಲಿಪಿಂಗ್‌ ವೈರಲ್‌ ಆಗಿದ್ದು, ಸ್ಕೂಲ್ ಅಸೆಂಬ್ಲಿಯಲ್ಲಿ ಮಕ್ಕಳು ಕೈ ಜೋಡಿಸಿಕೊಂಡು ನಿಂತುಕೊಂಡರೆ, ಪುಟಾಣಿಯೊಂದು ಲಾಲಿಪಾಪ್ ತಿನ್ನೋದ್ರಲ್ಲಿ ಬ್ಯುಸಿಯಾಗಿದೆ. ಈ ಪುಟ್ಟ ಬಾಲಕನ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. Shubham_kr_rana ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ…

Read More

Video: ಬುರ್ಖಾ ಧರಿಸಿದ್ದ ಮಹಿಳೆಯ ಮೈಮುಟ್ಟಿ ಪರಾರಿಯಾಗಿದ್ದ ನೌಶಾದ್​ಗೆ ಪೊಲೀಸರ ಗುಂಡೇಟು – Kannada News | Caught on Camera: Moradabad Man Who Assaulted Woman in Burqa Arrested After Gunfight

ಮೊರಾದಾಬಾದ್, ಮೇ 1: ರಸ್ತೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ನೌಶಾದ್​ನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಕತ್ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ನೌಶಾದ್, ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬುರ್ಖಾ ಧರಿಸಿದ ಮಹಿಳೆಯನ್ನು ಹಿಂದಿನಿಂದ ತಬ್ಬಿಕೊಂಡು ಅಲ್ಲಿಂದ ಪರಾಋಇಯಾಗಿದ್ದ. ಕುರ್ತಾ-ಪೈಜಾಮ ಮತ್ತು ಟೋಪಿ ಧರಿಸಿದ್ದ ವ್ಯಕ್ತಿಯನ್ನು ಕಾಣಬಹುದು. ಆತನ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ತನಿಖೆ ಚುರುಕುಗೊಳಿಸಿದರು. ಆರೋಪಿಗಾಗಿ…

Read More

Video: ಇದೇನಿದು ವಿಚಿತ್ರ, ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ, ನಡೆದಿದ್ದೇನು?

ಗಾಜಿಯಾಬಾದ್, ಡಿಸೆಂಬರ್ 22: ಇದೇನಿದು ವಿಚಿತ್ರ, ಸಾಮಾನ್ಯವಾಗಿ ಯಾವುದೇ ಹುಡುಗಿಗೆ ಪ್ರೇಮ ನಿವೇದನೆ ಮಾಡುವಾಗ ಹುಡುಗರು ಉಂಗುರವನ್ನು ಹಿಡಿದು ಹೋಗುವುದನ್ನು ಕಂಡಿದ್ದೇವೆ. ಆದರೆ ಆತ ಸಿಂಧೂರ ಹಿಡಿದುಹೋಗಿದ್ದ. ಉತ್ತರ ಪ್ರದೇಶದ ಗಾಜಿಯಾಬಾದಿನಲ್ಲಿರುವ ಮಾಲ್​ನಲ್ಲಿ ಯುವಕ ಯುವತಿಯ ಎದುರು ಮಂಡಿಯೂರಿ ಕುಳಿತೇ ಬಿಟ್ಟ, ಆಕೆಯೂ ಪ್ರೀತಿಗೆ ಓಕೆ ಎಂದು ಉಂಗುರ ತೊಡಿಸುತ್ತಾನೆ ಎಂದು ಕೈ ಮುಂದೆ ಮಾಡಿದರೆ. ಆದರೆ ಸಿಂಧೂರವನ್ನು ಹಚ್ಚಿ ತಾಳಿ ಕಟ್ಟಿಯೇ ಬಿಟ್ಟ. ಆಕೆ ನೋಡ ನೋಡುತ್ತಿದ್ದಂತೆ ಮದುವೆಯೇ ನಡೆದುಹೋಗಿದೆ. ಆಕೆಗೆ ಇದು ಕನಸಾ ಅಥವಾ…

Read More

IPL 2026: ಐಪಿಎಲ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ ಆರ್​ಸಿಬಿ- ಎಸ್​ಆರ್​ಹೆಚ್

2026 ರ ಐಪಿಎಲ್ ವೇಳಾಪಟ್ಟಿಯ (IPL 2026 schedule) ಮೊದಲ 20 ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 28 ರಂದು ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ (RCB vs SRH) ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಮುಂಚೆಯೇ ಎರಡೂ ತಂಡಗಳು ದೊಡ್ಡ ಸಂಕಷ್ಟಕ್ಕೆ ಸಿಲುಕಿವೆ. ವಾಸ್ತವವಾಗಿ, ಎರಡೂ ತಂಡಗಳ ಇಬ್ಬರು ಸ್ಟಾರ್ ಆಟಗಾರರು ಮೊದಲ ಪಂದ್ಯದಲ್ಲಿ ಆಡುವುದು ಖಚಿತವಾಗಿಲ್ಲ. ಗಾಯಗಳಿಂದ ಬಳಲುತ್ತಿರುವ ಮತ್ತು ಇನ್ನೂ ಫಿಟ್‌ನೆಸ್ ಮರಳಿ ಪಡೆಯದ ಜೋಶ್…

Read More

ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆ ಇಟ್ಟು ನಟ ಕಮಲ್ ಹಾಸನ್; ಏನದು? – Kannada News | Kamal Haasan submits 6 demands to Tamil Nadu CM Vijay for cinema industry

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನಟ, ರಾಜಕಾರಣಿ ದಳಪತಿ ವಿಜಯ್ (CM Vijay) ಅವರನ್ನು ಹಿರಿಯ ನಟ ಕಮಲ್ ಹಾಸನ್ ಮೇ 16ರಂದು ಭೇಟಿಯಾಗಿದ್ದಾರೆ. ಈ ಸೌಜನ್ಯಯುತ ಭೇಟಿಯ ಚಿತ್ರಗಳನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಕಮಲ್ ಹಾಸನ್ (Kamal Haasan), ತಮಿಳು ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಿ, ಚಿತ್ರೋದ್ಯಮದ ಬೆಂಬಲಕ್ಕಾಗಿ 6 ಪ್ರಮುಖ ಬೇಡಿಕೆಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸಿಎಂ ವಿಜಯ್ ಅವರಿಗೆ ಸಲ್ಲಿಸಿದ್ದಾರೆ. ಸಿಎಂ ವಿಜಯ್ ಭೇಟಿಯ ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 22ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಯಾಕೆ ಒಪ್ಪಿಕೊಂಡೆ ಎಂದು ಹಲಬುವ ರೀತಿಯಲ್ಲಿ ಒಬ್ಬ ವ್ಯಕ್ತಿಯು ಕೆಲಸವೊಂದರ ಸಲುವಾಗಿ ನಿಮ್ಮ ಬೆನ್ನು ಹತ್ತಿ ಇನ್ನಿಲ್ಲದಂತೆ ಕಾಡಲಿದ್ದಾರೆ. ಕ್ರಿಯೇಟಿವ್ ಉದ್ಯೋಗ- ವೃತ್ತಿಯಲ್ಲಿ ಇರುವವರಿಗೆ ಡೆಡ್ ಲೈನ್ ಒಳಗಾಗಿ ಕೆಲಸ ಮುಗಿಸಲೇಬೇಕು ಎಂದು ಸೂಚನೆ ಬಂದು, ಬಹುತೇಕ ಇಡೀ ದಿನ ಕುಟುಂಬದ ವಿಚಾರಗಳಿಗೆ ಗಮನವೇ ನೀಡಲು ಸಾಧ್ಯವಿಲ್ಲದಂತೆ ಆಗಲಿದೆ. ಈ ಮಧ್ಯೆ ಕೆಲವರು ನಿಮಗೆ ಅಹಂಕಾರ ಎಂದು ಅಪಪ್ರಚಾರ ಮಾಡಿಕೊಂಡು…

Read More

ಪ್ರಕಾಶ್ ರಾಜ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ; 4 ಕಡೆ ವೋಟರ್ ಐಡಿ ಇರುವ ಆರೋಪ – Kannada News | Arrest warrant against actor Prakash Raj for having 4 voter ID card

ಬಹುಭಾಷ ನಟ ಪ್ರಕಾಶ್ ರಾಜ್ (Prakash Raj) ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. 4 ಬೇರೆ ಬೇರೆ ಕಡೆಗಳಲ್ಲಿ ವೋಟರ್ ಐಡಿ ಹೊಂದಿರುವ ಆರೋಪದ ಮೇಲೆ ಅವರ ವಿರುದ್ಧ ವಕೀಲ ದಿಲೀಪ್ ಕುಮಾರ್ ಎಂಬುವವರು ದೂರು ನೀಡಿದ್ದರು. 2019ರಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ನಂತರ ಪೊಲೀಸ್ ಆಯುಕ್ತರಿಗೆ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು. ಅಲ್ಲಿಯೂ ಕ್ರಮ ತೆಗೆದುಕೊಳ್ಳದ ಕಾರಣದಿಂದ ನ್ಯಾಯಾಲಯದಲ್ಲಿ ದಿಲೀಪ್ ಕುಮಾರ್ ಅವರು…

Read More

ಬಾಗಲಕೋಟೆ ಉಪಚುನಾವಣೆ ಮುನ್ನ ಅಕ್ರಮ ಮತದಾರರ ಸದ್ದು: ದಾಖಲೆ‌ ಸಮೇತ ಬಯಲು ಮಾಡಿದ ಮಾಜಿ ಶಾಸಕ – Kannada News | Bagalkote By Election: 7272 Double Voters Alleged by Ex MLA veeranna charantimath

ಡಿಸಿಗೆ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರುImage Credit source: tv9 kannada ಬಾಗಲಕೋಟೆ, ಫೆಬ್ರವರಿ 18: ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ ವೈ ಮೇಟಿ ನಿಧನ ಹಿನ್ನೆಲೆ ಉಪಚುನಾವಣೆಗೆ (by election) ಭರ್ಜರಿ ತಯಾರಿ ನಡೆದಿದೆ. ಈ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಚುನಾವಣೆ ಸಿದ್ದತೆ ಮಾಡಿಕೊಳ್ಳುತ್ತೀವೆ. ಈ ಮಧ್ಯೆ ಕ್ಷೇತ್ರದಲ್ಲಿ ಅಕ್ರಮ ವೋಟರ್​​​ಗಳ (voters) ಸದ್ದು ಜೋರಾಗಿದೆ. ಈ ಬಗ್ಗೆ ಬಿಜೆಪಿ‌ ಮಾಜಿ ಶಾಸಕ ವೀರಣ್ಣ ಚರಂತಿಮಠ ದಾಖಲೆ‌ ಸಮೇತ ಆರೋಪ ಮಾಡಿದ್ದಾರೆ. ಈ…

Read More

ದಿನ ಭವಿಷ್ಯ: ಇಂದು ಈ ರಾಶಿಯವರಲ್ಲಿ ಆಕರ್ಷಣೆ ಹೆಚ್ಚಾಗಲಿದ್ದು, ಎಲ್ಲ ಕಡೆ ಹೊಳೆಯುವರು – Kannada News | Horoscope April 16 Thursday 2026; Dina Rashi Bhavishya Today, Checkout the details here

ಮೇಷ ರಾಶಿ: ನಿಮ್ಮ ಉನ್ನತಸ್ಥಾನಕ್ಕೆ ಕಾರಣರಾದ ಎಲ್ಲರನ್ನೂ ಇಂದು ಸ್ಮರಿಸಿಕೊಳ್ಳುವಿರಿ. ಸಂತಾನದ ವಾರ್ತೆ ನಿಮಗೆ ಒಂದಿನ ಶುಭವಾರ್ತೆಯಾಗಲಿದೆ. ದುಡುಕುವುದು ನಿಮ್ಮ ಸ್ವಭಾವಕ್ಕೆ ವಿರುದ್ಧವಾದಂತೆ. ಹೊಸ ಮನೆಯನ್ನೋ ಜಾಗವನ್ನೋ ತೆಗದುಕೊಳ್ಳುವ ಪ್ರಸ್ತಾಪವಿರಲಿದೆ. ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದ್ದೆ. ಔಚಿತ್ಯ ಪೂರ್ಣವಾಗಿ ಮಾತನಾಡುವಿರಿ. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ಒಂದೇ ಆಯಾಮದ ಕಾರ್ಯಗಳಿಂದ ವಿಶ್ರಾಂತಿಯು ಬೇಕೆನಿಸಬಹುದು. ವೃಷಭ ರಾಶಿ: ಇಂದು ಸ್ಪರ್ಧಾತ್ಮಕ ವಿಚಾರಗಳಿಂದ ಸೋಲಾಗುವುದು. ಶತ್ರುಗಳು ನಿಮ್ಮ ಹಿಂದೇ ಇದ್ದು ನಿಮ್ಮನ್ನು…

Read More