Headlines

ಬಿಎಂಸಿ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ; ಭರ್ಜರಿ ಗೆಲುವಿನತ್ತ ಬಿಜೆಪಿ ಮೈತ್ರಿಕೂಟ; ಠಾಕ್ರೆ ಸಹೋದರರಿಗೆ ಹಿನ್ನಡೆ – Kannada News | BMC Election Results BJP led Mahayuti inches towards big win Thackerays Lose Grip On Mumbai

ಮುಂಬೈ, ಜನವರಿ 16: ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಸಂಗತಿಯಾಗಿರುವ ಬಿಎಂಸಿ ಚುನಾವಣೆಯ ಫಲಿತಾಂಶ ಹೊರಬೀಳಲು ಕೆಲವೇ ಕ್ಷಣಗಳು ಬಾಕಿ ಇದೆ. ಈಗಾಗಲೇ ಎಕ್ಸಿಟ್ ಪೋಲ್ (Exit Polls) ಊಹಿಸಿರುವಂತೆ ಬಿಜೆಪಿ ಮೈತ್ರಿಕೂಟ ಭರ್ಜರಿ ಜಯ ಗಳಿಸುವುದು ಖಚಿತವಾಗಿದೆ. ಈ ಮೂಲಕ 25 ವರ್ಷಗಳಿಂದ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (BMC) ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಉದ್ಧವ್ ಠಾಕ್ರೆಗೆ ಈ ಬಾರಿ ಭಾರೀ ಮುಖಭಂಗವಾಗಲಿದೆ. ಇಂದು ಸಂಜೆ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಇಲ್ಲಿಯವರೆಗಿನ ಮತ ಎಣಿಕೆಯಲ್ಲಿ ಯಾರು ಮುಂದಿದ್ದಾರೆ…

Read More

ಎಲ್ ನಿನೊ ಎಫೆಕ್ಟ್, ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನೆಗೆ ಪ್ರಧಾನಿ ಕಚೇರಿಯಿಂದ ಉನ್ನತ ಮಟ್ಟದ ಸಭೆ – Kannada News | PMO holds High Level meeting to review impact of El Nino and preparedness measures

ನವದೆಹಲಿ, ಜುಲೈ 7: ದೇಶಾದ್ಯಂತ ಮುಂಗಾರು ಮಳೆಯ (Monsoon 2026) ಆರ್ಭಟ ಜೋರಾಗಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ, ಭೂಕುಸಿತ ಕೂಡ ಉಂಟಾಗಿದೆ. ‘ಎಲ್ ನಿನೊ’ ಹವಾಮಾನ ವೈಪರೀತ್ಯದಿಂದ ದೇಶದ ಆರ್ಥಿಕತೆಯ ಮೇಲಾಗುವ ಸಂಭಾವ್ಯ ಪರಿಣಾಮಗಳನ್ನು ತಡೆಗಟ್ಟಲು ಪ್ರಧಾನ ಮಂತ್ರಿ ಕಚೇರಿಯು (PMO) ಇಂದು ‘ಸೇವಾ ತೀರ್ಥ’ದಲ್ಲಿ ವಿವಿಧ ಸಚಿವಾಲಯಗಳ ಜಂಟಿ ಪರಿಶೀಲನಾ ಸಭೆಯನ್ನು ನಡೆಸಿತು. ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಕೃಷಿ, ವಿದ್ಯುತ್, ಜಲಸಂಪನ್ಮೂಲ,…

Read More

ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ – Kannada News | Kartik Aaryan Dating Underage Girl? Age Gap Controversy Explodes

ಡೇಟಿಂಗ್ ವಿಷಯದಲ್ಲಿ ಕಾರ್ತಿಕ್ ಆರ್ಯನ್ (Karthik Aryan) ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಈ ಮೊದಲು ಅವರು ಅನನ್ಯಾ ಪಾಂಡೆ ಜೊತೆ ಸುತ್ತಿದ್ದರು ಎನ್ನಲಾಗಿತ್ತು. ಸಾರಾ ಅಲಿ ಖಾನ್ ಕೂಡ ಆರ್ಯನ್ ಜೊತೆ ಡೇಟಿಂಗ್ ನಡೆಸಿದ್ದರು. ಕನ್ನಡದ ಶ್ರೀಲೀಲಾ ಕೂಡ ಕೆಲ ಸಮಯ ಕಾರ್ತಿಕ್ ಜೊತೆ ಕಾಣಿಸಿಕೊಂಡಿದ್ದರು. ಇದಕ್ಕೆ ಕಾರಣ ಸಿನಿಮಾ ಎಂಬುದು ಬಳಿಕ ಸ್ಪಷ್ಟವಾಯಿತು. ಈಗ ಕಾರ್ತಿಕ್ ಅವರು ಡೇಟಿಂಗ್ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ಅವರು ಅಪ್ರಾಪ್ತೆ ಜೊತೆ ಸುತ್ತಾಟ ನಡೆಸಿರುವುದು ಚರ್ಚೆಗೆ ಕಾರಣ ಆಗಿದೆ….

Read More

ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!: ಸತ್ಯ ತಿಳಿಯಲು ಈ ವಿಡಿಯೋ ನೋಡಿ – Kannada News | BJP Member Sadanandan Master Placed His Artificial Legs on the Bench During His First Speech in Rajya Sabha Session

ನವದೆಹಲಿ, ಫೆಬ್ರವರಿ 03: ರಾಜ್ಯಸಭೆಯಲ್ಲಿ ಚೊಚ್ಚಲ ಭಾಷಣದ ವೇಳೆ ಬಿಜೆಪಿ ಸದಸ್ಯ ಸಿ. ಸದಾನಂದನ್ ಮಾಸ್ಟರ್  ತಮ್ಮ ಕೃತಕ ಕಾಲುಗಳನ್ನು ಸದನದ ಬೆಂಚ್​​ ಮೇಲೆ ಪ್ರದರ್ಶಿಸಿ, ತಾವು ಕಾಲುಗಳನ್ನು ಕಳೆದುಕೊಂಡಿದ್ದೇಗೆ ಎಂಬ ಬಗ್ಗೆ ವಿವರಣೆ ನೀಡಿದ ಪ್ರಸಂಗ ನಡೆದಿದೆ. ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ, ಸಹಿಷ್ಣುತೆಯ ಬಗ್ಗೆ ಮಾತನಾಡುವ ಎಡಪಂಥೀಯ ರಾಜಕೀಯ ಪಕ್ಷಗಳು ತಮ್ಮ ಸೈದಾಂತಿಕ ವಿರೋಧಿಗಳಿಗೆ ಎಂತಾ ಹಿಂಸೆ ನೀಡಿವೆ ನೋಡಿ ಎಂದು ಅವರು ಹೇಳಿರೋದು ರಾಜ್ಯ ಸಭೆಯಲ್ಲಿ ಕೆಲ ಕಾಲ ಗದ್ದಲಕ್ಕೂ ಕಾರಣವಾಗಿದೆ. 1994ರ ಜನವರಿ…

Read More

ಯುವ ರೈತ ಚೇತನ್ ನಟನೆಯ ‘ದೇವಿ’ ಸಿನಿಮಾಗೆ ಸಿಕ್ತು ಹಿರಿಯರ ಆಶೀರ್ವಾದ – Kannada News | Yuva Raitha Chetan starrer Devi Kannada Movie Press Meet Bigg Boss Bhavya Gowda Heroine

‘ದೇವಿ’ ಸಿನಿಮಾ ಮೂಲಕ ಯುವ ರೈತ ಚೇತನ್ ಅವರು ಹೀರೋ ಆಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ಚಿತ್ರಕ್ಕೆ ಶುಭ ಹಾರೈಸಲು ರೈತರನ್ನೇ ವೇದಿಕೆಗೆ ಕರೆಸಿದ್ದು ವಿಶೇಷವಾಗಿತ್ತು. ‘ದೇಶದ ಬೆನ್ನೆಲುಬು ರೈತ ಅಂತ ಹೇಳುತ್ತಾರೆ. ಆದರೆ ಯುವ ರೈತರು ಇಂದು ವ್ಯವಸಾಯಕ್ಕೆ ಬರುತ್ತಿಲ್ಲ. ಇಂದು ನಮ್ಮ ಚೇತನ್ ಅವರು ಯುವ ರೈತ ಎಂಬ ಬಿರುದಿನೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಎಲ್ಲ ರೀತಿಯ ಶೋಷಣೆಗೆ ಒಳಪಡುವವನೇ ರೈತ. ಚೇತನ್ ಅವರು ಎಲ್ಲ ರೈತನಿಗೆ ಮಾದರಿ ಆಗಲಿ….

Read More

ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿಕೊಂಡಿದ್ದರು; ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪ್ರಧಾನಿ – Kannada News | Donald Trump Claims Meloni Begged For A Photo with him At G7 Summit Italian PM fights back

ನವದೆಹಲಿ, ಜೂನ್ 19: ಜೂನ್ 15ರಿಂದ 17ರವರೆಗೆ ಫ್ರಾನ್ಸ್‌ನ ಎವಿಯಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಅಮೆರಿಕ ಮತ್ತು ಇಟಲಿಯ ನಾಯಕರು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಇಟಲಿಯ ‘La7 ಟಿವಿ’ ವಾಹಿನಿಗೆ ನೀಡಿದ ವಿಶೇಷ ಫೋನ್ ಸಂದರ್ಶನದಲ್ಲಿ ಟ್ರಂಪ್ (Donald Trump) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಮೆಲೋನಿ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಅಕ್ಷರಶಃ ಬೇಡಿಕೊಂಡರು. ಆಕೆಗೆ ನನ್ನೊಂದಿಗೆ ಫೋಟೋ ಬೇಕೇ ಬೇಕಿತ್ತು. ನನಗೇನೂ ಆಕೆಯೊಂದಿಗೆ ಫೋಟೋ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಆದರೆ, ಆಕೆಯನ್ನು ನೋಡಿ ಪಾಪ ಅನಿಸಿದ್ದರಿಂದ…

Read More

Ugadi 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ಆರೋಗ್ಯಕರ, ರುಚಿಕರ ಕಾಯಿ ಹೋಳಿಗೆ

ನಾಡಿನೆಲ್ಲೆಡೆ ಯುಗಾದಿ (Ugadi) ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬ ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ.  ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಮನೆಯನ್ನು ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿ, ಪ್ರತಿಯೊಬ್ಬರೂ ಬೇವು ಬೆಲ್ಲವನ್ನು ಹಂಚುತ್ತಾರೆ. ಬೇವು ಬೆಲ್ಲದ ಜೊತೆ ರುಚಿ ರುಚಿಯಾದ ಬಗೆಬಗೆ ಅಡುಗೆಗಳನ್ನೂ ಮಾಡಲಾಗುತ್ತದೆ. ಅದರಲ್ಲೂ ಯುಗಾದಿ ಹಬ್ಬಕ್ಕೆ ಒಬ್ಬಟ್ಟು ಇರಲೇಬೇಕು. ಸಾಮಾನ್ಯವಾಗಿ ಒಬ್ಬಟ್ಟನ್ನು ಮೈದಾ ಹಿಟ್ಟು ಬಳಸಿ…

Read More

ಅಮ್ಮಾ ಅವ್ನು ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡ ಎಂದು ದೂರು ಕೊಟ್ಟಿದ್ದಕ್ಕೆ, ಬಾಲಕಿಯನ್ನೇ ಕತ್ತು ಸೀಳಿ ಕೊಂದ ಅಪ್ರಾಪ್ತ – Kannada News | Bihar Minor Kills 9 Year Old Girl for Complaining About His Drug Fueled Misbehavior

ಪಾಟ್ನಾ, ಮಾರ್ಚ್​ 02: ಮಾದಕದ್ರವ್ಯ ಸೇವಿಸಿ ತನ್ನ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದ ಅಪ್ರಾಪ್ತನ ಬಗ್ಗೆ  ಮನೆಯಲ್ಲಿ ದೂರು ಕೊಟ್ಟಿದ್ದಕ್ಕೆ ಕೋಪಗೊಂಡ ಬಾಲಕ 9 ವರ್ಷದ ಬಾಲಕಿಯ ಕತ್ತು ಸೀಳಿ ಕೊಲೆ(Murder) ಮಾಡಿರುವ ಘಟನೆ ಬಿಹಾರದ ಕಟಿಹಾರ್​ನಲ್ಲಿ ನಡೆದಿದೆ. ಕರಣದ ಆರೋಪಿಯೂ ಅಪ್ರಾಪ್ತ ವಯಸ್ಕನಾಗಿದ್ದು, ಆತನನ್ನು ಬಂಧಿಸಲಾಗಿದೆ. ಕೊಲಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂದಲ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಒಂದು ದಿನ ಹಿಂದೆ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ನಂತರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು…

Read More