Headlines

ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ: DFO ಹೇಳಿದ್ದೇನು? – Kannada News | Chikmagalur: Illegal Resort Construction in Bhadra Tiger Reserve Buffer Zone Ignites Row

ಚಿಕ್ಕಮಗಳೂರು, ಜನವರಿ 23: ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ನಡೆಯುತ್ತಿರುವ ಆರೋಪ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನ ಪ್ರಭಾವಿ ಮುಖಂಡನೊಬ್ಬರು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದ ಸರ್ವೆ ನಂಬರ್ 58ರಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ಪ್ರದೇಶವನ್ನು 2011ರಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಎಂದು…

Read More

12 ವರ್ಷಗಳ ಅಭಿವೃದ್ಧಿ, ವಿಶ್ವಾಸ ಮತ್ತು ಸಾರ್ವಜನಿಕ ಕಲ್ಯಾಣ: ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ – Kannada News

ನವದೆಹಲಿ, ಜೂನ್ 09: ಭಾರತದ ಪ್ರಧಾನಿಯಾಗಿ ಅತ್ಯಂತ ಯಶಸ್ವಿಯಾಗಿ ಮತ್ತು ಗೌರವಾನ್ವಿತವಾಗಿ 12 ವರ್ಷಗಳ ಸುದೀರ್ಘ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಐತಿಹಾಸಿಕ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದೇಶದ ಜನತೆಗೆ ಭಾವುಕ ಹಾಗೂ ಕೃತಜ್ಞತೆಯ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಭಾರತದ ಇತಿಹಾಸದಲ್ಲೇ ಸತತವಾಗಿ ಅತಿ ದೀರ್ಘ ಅವಧಿಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ಮುಂಬರುವ ದಿನಗಳಲ್ಲೂ ದೇಶವನ್ನು ಸಮೃದ್ಧಿಯ ಪಥದಲ್ಲಿ ಮುನ್ನಡೆಸುವ ಅಚಲ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ. ಮಂಗಳವಾರ (ಜೂನ್ 9, 2026) ಸಾಮಾಜಿಕ…

Read More

ಸ್ಪಷ್ಟ ತೆಲುಗಿನಲ್ಲಿ ಮಾತನಾಡಿದ ಜಪಾನ್ ವ್ಯಕ್ತಿ; ಶಾಕ್ ಆದ ಅಲ್ಲು-ರಶ್ಮಿಕಾ – Kannada News | Japanese Fan’s Fluent Telugu Shocks Allu Arjun and Rashmika at Pushpa 2 Japan Event

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಜಪಾನ್​​ಗೆ ತೆರಳಿದರು. ಅಲ್ಲಿ ‘ಪುಷ್ಪ 2’ ಸಿನಿಮಾ ರಿಲೀಸ್ ಆಯಿತು. ಜಪಾನ್ ಭಾಷೆಯಲ್ಲಿ ಜನರು ಸಿನಿಮಾ ನೋಡಿದರು. ಜಪಾನ್‌ನಲ್ಲಿ ಚಿತ್ರದ ಪ್ರಚಾರ ನಡೆಯುತ್ತಿದ್ದಾಗ, ಅನಿರೀಕ್ಷಿತ ಘಟನೆ ಸಂಭವಿಸಿತು. ತನ್ನ ನೆಚ್ಚಿನ ನಾಯಕನನ್ನು ನೋಡಲು ಬಂದಿದ್ದ ಜಪಾನಿನ ಅಭಿಮಾನಿಯೊಬ್ಬರು ಇದ್ದಕ್ಕಿದ್ದಂತೆ ತೆಲುಗಿನಲ್ಲಿ ಮಾತನಾಡಿದರು. ಇದರಿಂದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ದಿಗ್ಭ್ರಮೆಗೊಂಡಿದರು. ವಿಶ್ವಾದ್ಯಂತ ಬ್ಲಾಕ್‌ಬಸ್ಟರ್ ಯಶಸ್ಸನ್ನು ಕಂಡ ‘ಪುಷ್ಪ 2’ ಚಿತ್ರ ಇತ್ತೀಚೆಗೆ ಜಪಾನ್‌ನಲ್ಲಿ ಬಿಡುಗಡೆಯಾಯಿತು. ಐಕಾನ್ ಸ್ಟಾರ್…

Read More

ಟ್ರಂಪ್ ಸಂಧಾನ ಯಶಸ್ವಿ: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಶಾಂತಿ ಒಪ್ಪಂದ, ಮಿಲಿಟರಿ ಕಾರ್ಯಾಚರಣೆ ಸ್ಥಗಿತ

ವಾಷಿಂಗ್ಟನ್, ಜೂನ್ 02: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ರಾಜತಾಂತ್ರಿಕ ಯಶಸ್ಸು ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತೀವ್ರ ಪ್ರಯತ್ನಗಳ ಫಲವಾಗಿ, ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘಟನೆಗಳು ಪರಸ್ಪರ ದಾಳಿಗಳನ್ನು ನಿಲ್ಲಿಸಲು ಒಪ್ಪಿಕೊಂಡಿವೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಸರಣಿ ಮಿಲಿಟರಿ ದಾಳಿಗಳು ಮತ್ತು ನಾಗರಿಕ ಸಾವುನೋವುಗಳ ಕುರಿತು ಅಮೆರಿಕದ ಅಧಿಕಾರಿಗಳು ಆರಂಭದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇಸ್ರೇಲ್ ಕ್ರಮಗಳು ಇರಾನ್ ಜೊತೆಗಿನ ಅಮೆರಿಕದ ಮಾತುಕತೆಗಳಿಗೆ ಅಡ್ಡಿಪಡಿಸುತ್ತವೆ ಎಂದು ಟ್ರಂಪ್ ಅವರು ಇಸ್ರೇಲ್…

Read More

ಬೇಗ ಡೀಲ್ ಆಗದಿದ್ದರೆ ಇರಾನ್​ನ ಇಂಧನ ಘಟಕಗಳು, ಖರ್ಗ್ ದ್ವೀಪವನ್ನು ಉಡಾಯಿಸುತ್ತೇವೆ: ಡೊನಾಲ್ಡ್ ಟ್ರಂಪ್ ಕಟ್ಟೆಚ್ಚರಿಕೆ

ನವದೆಹಲಿ, ಮಾರ್ಚ್ 30: ಇರಾನ್​ನ ಹೆಚ್ಚು ಉದಾರಿ ಆಡಳಿತದ ಜೊತೆ ಅಮೆರಿಕದ ಸಂಧಾನ (Negotiations) ನಡೆಸುತ್ತಿದೆ. ಒಂದು ವೇಳೆ, ಈ ಮಾತುಕತೆ ವಿಫಲವಾಗಿ ಶೀಘ್ರದಲ್ಲೇ ಒಪ್ಪಂದಕ್ಕೆ ಬರಲಾಗದಿದ್ದರೆ ಮತ್ತು ಹಾರ್ಮುಜ್ ಜಲಸಂಧಿ ಮುಕ್ತವಾಗದಿದ್ದರೆ ಇರಾನ್​ನ ಇಂಧನ ಮೂಲಸೌಕರ್ಯ (Energy infra), ತೈಲ ಬಾವಿಗಳು (oil wells) ಮತ್ತು ಖರ್ಗ್ ದ್ವೀಪವನ್ನು (Kharg island) ಉಡಾಯಿಸಿಬಿಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್​ಫಾರ್ಮ್​ನಲ್ಲಿ ಈ ಬಗ್ಗೆ ಒಂದು…

Read More

T20 World Cup: ಭಾರತವನ್ನು ದುಃಸ್ವಪ್ನದಂತೆ ಕಾಡಿದ ಪಾಕ್ ವಿರುದ್ಧದ ಸೋಲು ಯಾವುದು ಗೊತ್ತಾ?

ಭಾರತ ಮತ್ತು ಪಾಕಿಸ್ತಾನ ಇಲ್ಲಿಯವರೆಗೆ 8 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 7 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ಭಾರತವನ್ನು ಒಮ್ಮೆ ಮಾತ್ರ ಸೋಲಿಸಿದೆ. ಆ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಿತು ಎಂಬುದರ ವಿವರ ಇಲ್ಲಿದೆ. ಅಕ್ಟೋಬರ್ 24, 2021 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಈ…

Read More

ಹುಟ್ಟಹಬ್ಬವೆಂದು ಲೋಹಗಢ ಕೋಟೆಗೆ ಟ್ರೆಕ್ಕಿಂಗ್ ಹೋಗಿದ್ದ ವ್ಯಕ್ತಿ 350 ಅಡಿ ಆಳದ ಕಂದಕಕ್ಕೆ ಬಿದ್ದು ಸಾವು – Kannada News | Lohagad Fort Tragedy: Tourist Falls 350 Ft to Death While Trekking; Safety Warned

ಲೋನಾವಾಲಾ, ಜೂನ್ 19: ತನ್ನ  ಹುಟ್ಟುಹಬ್ಬವನ್ನು ಆಚರಿಸಲು ಸ್ನೇಹಿತರ ಜತೆ ಟ್ರೆಕ್ಕಿಂಗ್​ಗೆ ಹೋಗಿದ್ದ ಯುವಕನೊಬ್ಬ ಆಳವಾದ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ  ಘಟನೆ ಮಹಾರಾಷ್ಟ್ರ(Maharashtra)ದ ಲೋನಾವಾಲಾದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ ನಡೆದಿದೆ. ಮೃತರನ್ನು ಗಾಹುಂಜೆಯ ಲೋಧಾ ಬೆಲ್ಮಂಡೋ ಸೊಸೈಟಿಯ ನಿವಾಸಿ ಕೇತನ್ ವಿಶಾಲ್ ಅಗರ್ವಾಲ್ (24) ಎಂದು ಗುರುತಿಸಲಾಗಿದೆ. ಘಟನೆ ಹಿನ್ನೆಲೆ: ಕೇತನ್ ಅಗರ್ವಾಲ್ ತನ್ನ ಜನ್ಮದಿನದ ಅಂಗವಾಗಿ ಸ್ನೇಹಿತರೊಂದಿಗೆ ಲೋಹಗಢ ಕೋಟೆಗೆ ಚಾರಣ ಕೈಗೊಂಡಿದ್ದ. ಆದರೆ, ಕೋಟೆಯ ಮೇಲ್ಭಾಗದಲ್ಲಿ ತೇವ ಹಾಗೂ ಜಾರು ಮೇಲ್ಮೈ ಇದ್ದ ಕಾರಣ,…

Read More

‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ – Kannada News | Satish Neenasam shared video of Ayogya 2 movie behind the camera video

ಸತೀಶ್ ನೀನಾಸಂ (Satish Neenasam) ನಟನೆಯ ‘ಅಯೋಗ್ಯ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಬಹುತೇಕ ಅದೇ ತಂಡ ‘ಅಯೋಗ್ಯ 2’ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ರಂಜಿಸಲು ಬರುತ್ತಿದೆ. ‘ಅಯೋಗ್ಯ 2’ ಸಿನಿಮಾ ಇದೇ ಆಗಸ್ಟ್ 7ಕ್ಕೆ ರಿಲೀಸ್ ಆಗಲಿದೆ. ಚಿತ್ರತಂಡ ಒಟ್ಟಿಗೆ ಭರ್ಜರಿ ಭೋಜನ ಮಾಡಿರುವ ವಿಡಿಯೋವನ್ನು ಸತೀಶ್ ನೀನಾಸಂ ಹಂಚಿಕೊಂಡಿದ್ದಾರೆ. ಸತೀಶ್ ನೀನಾಸಂ, ನಟರಾದ ಶಿವರಾಜ್ ಕೆಆರ್ ಪೇಟೆ, ನಿರ್ದೇಶಕ ಮಹೇಶ್ ಇನ್ನೂ ಹಲವು ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ವಿಡಿಯೋ ನೋಡಿ….

Read More

ಪಿರಿಯಡ್ಸ್‌ ಸಮಯದಲ್ಲಿ ಎಷ್ಟು ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್‌ ಬದಲಾಯಿಸುತ್ತಿರಬೇಕು? – Kannada News | Menstrual Hygiene: How often should change sanitary pad during period?

ಪಿರಿಯಡ್ಸ್‌ ಅಥವಾ ಮುಟ್ಟು (period) ಪ್ರತಿ ಹೆಣ್ಣಿನಲ್ಲೂ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆಯಾಗಿದೆ.  ಈ ಮುಟ್ಟಿನ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆಯು ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸಮಯಕ್ಕೆ ಸರಿಯಾಗಿ ಪ್ಯಾಡ್‌ಗಳನ್ನು ಬದಲಾಯಿಸುವುದು ಕೂಡ ನೈರ್ಮಲ್ಯದ ಒಂದು ಭಾಗವಾಗಿದ್ದು, ಪೀರಿಯಡ್ಸ್‌ ಸಮಯದಲ್ಲಿ ಆಗಾಗ್ಗೆ ಪ್ಯಾಡ್‌ ಬದಲಾಯಿಸುವುದು ಬಹಳ ಮುಖ್ಯ.  ಆದರೆ ಅನೇಕ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು  ಎಂಬುದು ಗೊತ್ತಿಲ್ಲ. ದಿನವಿಡೀ ಒಂದೇ ಪ್ಯಾಡ್ ಬಳಸುತ್ತಾರೆ, ಹೀಗೆ ದೀರ್ಘಕಾಲದವರೆಗೆ ಪ್ಯಾಡ್‌ಗಳನ್ನು ಬದಲಾಯಿಸದಿರುವುದು ಮೂತ್ರದ ಸೋಂಕಿನ ಅಪಾಯವನ್ನು…

Read More

ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ ಅಶ್ವಿನಿ

ಬೆಂಗಳೂರಿನ ಸ್ಯಾಂಕಿ ಕೆರೆ (Sankey Tank) ಮುಂದೆ ಪುನೀತ್ ರಾಜ್​ಕುಮಾರ್ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಅವರು 800 ಕೆಜಿ ತೂಕದ ಪ್ರತಿಮೆಯನ್ನು ಅನಾವರಣ ಮಾಡಿದರು. ಈ ವೇಳೆ ಮಲ್ಲೇಶ್ವರದ ಶಾಸಕ ಡಾ. ಅಶ್ವತ್ಥ್​​ ನಾರಾಯಣ ಮತ್ತು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು ಅವರು ಭಾಗಿ ಆಗಿದ್ದರು. ‘ಪ್ರತಿಮೆ ಚೆನ್ನಾಗಿದೆ. ಅಭಿಮಾನಿಗಳಿಗೆ ಮತ್ತು ಅಶ್ವತ್ಥ್ ನಾರಾಯಣ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದರು ಅಶ್ವಿನಿ ಪುನೀತ್ ರಾಜ್​ಕುಮಾರ್….

Read More