ತಪ್ಪಿಯೂ ಚಹಾದೊಂದಿಗೆ ಈ ಆಹಾರಗಳನ್ನು ಸೇವನೆ ಮಾಡಬಾರದಂತೆ – Kannada News | The habit of eating these foods with tea can have a negative impact on health
ಚಹಾ (tea) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯರಿಗಂತೂ ಬಿಸಿ ಬಿಸಿ ಚಹಾ ಹಾಟ್ ಫೇವರೇಟ್. ಅದೆಷ್ಟೋ ಜನಕ್ಕೆ ಒಂದು ಕಪ್ ಚಹಾ ಕುಡಿಯದೆ ದಿನವೇ ಆರಂಭವಾಗುವುದಿಲ್ಲ, ಇನ್ನೂ ಕೆಲವರಿಗೆ ದಿನಕ್ಕೆ ನಾಲ್ಕೈದು ಬಾರಿ ಚಹಾ ಕುಡಿಯದಿದ್ದರೇ ತಲೆಯೇ ಓಡುವುದಿಲ್ಲ. ಹೆಚ್ಚಾಗಿ ಟೀ, ಬಿಸ್ಕೆಟ್, ಪಕೋಡಾ ಇತ್ಯಾದಿ ತಿನಿಸುಗಳೊಂದಿಗೆ ಸವಿಯಲಾಗುತ್ತದೆ. ಇದು ಬಾಯಿ ರುಚಿ ಹೆಚ್ಚಿಸಬಹುದು. ಆದರೆ ಕೆಲವು ಆಹಾರಗಳನ್ನು ಚಹಾದೊಂದಿಗೆ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಹಾಗಿದ್ದರೆ ಯಾವೆಲ್ಲಾ ಆಹಾರಗಳನ್ನು…