Headlines

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ಲೆದರ್ ಶೂ, ಬೆಲ್ಟ್-ಬ್ಯಾಗ್ ದರ ಹೆಚ್ಚಳ

ಬೆಂಗಳೂರು, ಮೇ 27: ಇಂಧನ ದರ ಏರಿಕೆಯ ಬಿಸಿ ಇದೀಗ ಲೆದರ್ (Leather) ವಸ್ತುಗಳಿಗೂ ತಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ನಿರಂತರ ಏರಿಕೆ ಬೆನ್ನಲ್ಲೇ ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಲೆದರ್ ಶೂ, ಬೆಲ್ಟ್ ಹಾಗೂ ಶಾಲಾ ಬ್ಯಾಗ್ ಬೆಲೆ ಕೂಡ ಏರಿಕೆ ಆಗಿದೆ. ಶಾಲೆ ಆರಂಭದ ಹೊತ್ತಲ್ಲೇ ಹೀಗೆ ಏರಿಕೆ ಆಗುತ್ತಿರುವುದು ಸದ್ಯ ಪೋಷಕರಿಗೆ ಶಾಕ್ ಎದುರಾಗಿದ್ದು, ಮಧ್ಯಮ ವರ್ಗದ ಜನರಿಗೆ ಇದು ಮತ್ತೆ ಹೊರೆಯಾಗುವ ಸಾಧ್ಯತೆ ಇದೆ. ಮುಖ್ಯಾಂಶಗಳು ಇನ್ನು ಮುಂದೆ…

Read More

ಅಂಬಿಗರ ಚೌಡಯ್ಯ ಭವ್ಯ ಮೆರವಣಿಗೆಗೆ ಹೆಲಿಕಾಪ್ಟರ್​​ನಿಂದ ಪುಷ್ಪವೃಷ್ಟಿ – Kannada News | Ambigara Chowdaiya Jayantotsava: Massive Procession and Floral Tribute Held in Kalaburagi

ಕಲಬುರಗಿ, ಜ.21: ಜಿಲ್ಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವವನ್ನು ಭಕ್ತಿ, ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಇದು ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವವಾಗಿದ್ದು, ಈ ಸಂದರ್ಭದಲ್ಲಿ ಕಲಬುರಗಿ ನಗರವು ವಿಶೇಷ ಮೆರವಣಿಗೆ ಮತ್ತು ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಜಯಂತ್ಯೋತ್ಸವದ ಅಂಗವಾಗಿ, ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೂ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಮೆರವಣಿಗೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಕೊಂಡೊಯ್ಯಲಾಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದವು. ಒಂಟೆಗಳು, ಕುದುರೆಗಳು, ಹಾಗೆಯೇ ಪುರುಷ ಮತ್ತು ಮಹಿಳಾ…

Read More

ಬಿಯರ್ ಬಾಟಲಿಗಳಿದ್ದ ಲಾರಿ ಪಲ್ಟಿ; ರಸ್ತೆ ಪಾಲಾಯ್ತು ಲಕ್ಷಾಂತರ ರೂ. ಮೌಲ್ಯದ ಮದ್ಯ! – Kannada News | Hassan Beer Lorry Overturns: Thousands of Bottles Broken, Locals Rush to Grab Beer

ಹಾಸನ, ಜುಲೈ 24: ಹೊರವಲಯದ ದೊಡ್ಡಪುರ ಗ್ರಾಮದ ಬಳಿ ತಡರಾತ್ರಿ ಟಯರ್ ಬ್ಲಾಸ್ಟ್ ಆದ ಪರಿಣಾಮ 1,100 ಕೇಸ್ ಬಿಯರ್ ಹೊತ್ತೊಯ್ಯುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹಾಸನದ ವುಡ್ ಪಿಕರ್ ಡಿಸ್ಟಿಲರೀಸ್‌ನಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಲಾರಿ ಅಪಘಾತಕ್ಕೀಡಾಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಬಿಯರ್ ಬಾಟಲಿಗಳು ರಸ್ತೆ ಪಾಲಾಗಿವೆ. ಅಪಘಾತದ ಬೆನ್ನಲ್ಲೇ ಸ್ಥಳೀಯರು ನೂರಾರು ಬಿಯರ್ ಬಾಟಲಿಗಳನ್ನು ಹೊತ್ತೊಯ್ದಿದ್ದು, ಬಳಿಕ ಬಂದ ಪೊಲೀಸರು ಮಾರ್ಗವನ್ನು ಬಂದ್ ಮಾಡಿದ್ದಾರೆ. ಅಳಿದುಳಿದ ಬಾಟಲಿಗಳನ್ನು ಸಂಗ್ರಹಿಸಲು ಟ್ರಾನ್ಸ್‌ಪೋರ್ಟ್‌ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ….

Read More

IND vs WI: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ರಿಂಕು, ಕುಲ್ದೀಪ್​ಗೆ ಇಲ್ಲ ಅವಕಾಶ – Kannada News | IND vs WI T20 World Cup: Knockout Match for Semifinals; Playing XI and Head to Head

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಸೂಪರ್ 8 ಪಂದ್ಯ ನಡೆಯುತ್ತಿದೆ. ಈ ಪಂದ್ಯವು ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ಏಕೆಂದರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತದೆ. ಹೀಗಾಗಿ ಈ ಪಂದ್ಯ ಉಭಯ ತಂಡಗಳಿಗೂ ಒಂದು ರೀತಿಯ ನಾಕೌಟ್ ಪಂದ್ಯವಾಗಿದ್ದು ಸೋತ ತಂಡ ಟಿ20 ವಿಶ್ವಕಪ್​ನಿಂದ (T20 World Cup) ಹೊರಬೀಳಲಿದೆ. ಟಾಸ್ ಗೆದ್ದ ಭಾರತ…

Read More

ಕುಟುಂಬದ ಜೊತೆ ‘ಜನ ನಾಯಗನ್’ ಸಿನಿಮಾ ನೋಡಿ ಎಂಜಾಯ್ ಮಾಡಿದ ತ್ರಿಷಾ ಕೃಷ್ಣನ್ – Kannada News | Trisha Watches CM Vijay Last Movie Jana Nayagan with Family Video from Theatre Goes Viral

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ (Jana Nayagan) ಜುಲೈ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಮೊದಲ ದಿನವೇ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಕಲೆಕ್ಷನ್ ಮಾಡಿದೆ. ಸಿಎಂ ವಿಜಯ್ ಅವರು ತಮ್ಮ ಅಧಿಕಾರಿಗಳೊಂದಿಗೆ ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಇನ್ನು ಕಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಸಹ ಮೊದಲ ದಿನವೇ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ನಟಿ ತ್ರಿಷಾ ಕೃಷ್ಣನ್ ಅವರು ‘ಜನ ನಾಯಗನ್’…

Read More

ಸೋದರಸಂಬಂಧಿಯನ್ನೇ ವರಿಸಿದ ಯುವತಿ! ಚಿಕ್ಕಬಳ್ಳಾಪುರದಲ್ಲೊಂದು ವಿಚಿತ್ರ ವಿವಾಹ – Kannada News | Chikkaballapura, A strange marriage: Woman Marries Her Cousin Brother Days Before Her Scheduled Wedding in Devanahalli

ಚಿಕ್ಕಬಳ್ಳಾಪುರ, ಮೇ 7: ಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿಯೆಂಬಂತೆ, ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಾದವರೇ ಪ್ರೀತಿಸಿ ಮದುವೆಯಾಗಿ ಪೋಷಕರಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ (Devanahalli) ತಾಲ್ಲೂಕಿನ ಸಾವಕನಹಳ್ಳಿಯ ಶಶಿಕಲಾ (29), ಹೊಸಕೋಟೆ ತಾಲ್ಲೂಕಿನ ಹಳೆಊರಿನ ಪ್ರವೀಣ್ (24) ಎಂಬಾತನನ್ನು ಮದುವೆಯಾಗುವ ಮೂಲಕ ಸಮಾಜ ಮತ್ತು ಕುಟುಂಬದ ವಿರೋಧದ ನಡುವೆಯೂ ಒಂದಾಗಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ರಕ್ಷಣೆ ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಮತ್ತು ಮಹಿಳಾ ಪೊಲೀಸ್ ಠಾಣೆಗೆ…

Read More

ಮುಂದಿನ 9 ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು; ಸಾವಿಲ್ಸ್ ವರದಿ – Kannada News | Bangalore’s Growth: IT Hub to Global Leader by 2035, says Savills Report

ಬೆಂಗಳೂರು, ಮೇ 5: ಭಾರತದ ಐಟಿ ಹಬ್ ಹಾಗೂ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರು ನಗರದ (Bengaluru city) ಕಿರೀಟಕ್ಕೆ ಮತ್ತೊಂದು ಐತಿಹಾಸಿಕ ಗರಿ ಸಿಕ್ಕಿದೆ. ಜಾಗತಿಕ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾದ ‘ಸಾವಿಲ್ಸ್’ (Savills) ನಡೆಸಿರುವ ಸಂಶೋಧನಾ ವರದಿಯ ಪ್ರಕಾರ, 2035ರ ವೇಳೆಗೆ ಬೆಂಗಳೂರು ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಪ್ರಮುಖ ಮಹಾನಗರವಾಗಿ (World’s Fastest-Growing Major City) ಹೊರಹೊಮ್ಮಲಿದೆ. ವಿಶ್ವದ ಪ್ರಮುಖ 245 ನಗರಗಳನ್ನು ವಿವಿಧ ಆರ್ಥಿಕ ಮತ್ತು ಸಾಮಾಜಿಕ ಮಾನದಂಡಗಳ ಆಧಾರದ…

Read More

ರೋಸ್​​ ಡೇ ದಿನ ಗಂಡನಿಗೆ ಗುಲಾಬಿ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಮಹಿಳೆ – Kannada News | Rose Day Reel Lands Bihar Woman in Legal Trouble, FIR Registered

ಪಾಟ್ನಾ, ಫೆಬ್ರವರಿ 13: ರೋಸ್​ ಡೇ(Rose Day) ದಿನ ಗಂಡನಿಗೆ ಗುಲಾಬಿ ಕೊಟ್ಟ ಮಹಿಳೆ ವಿರುದ್ಧ ಎಫ್​ಐಆರ್ ದಾಖಲಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಕೇವಲ ಪತ್ನಿ ಮಾತ್ರವಲ್ಲ ಪತಿ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅದಕ್ಕೊಂದು ಕಾರಣವಿದೆ. ಆಕೆ ಪತಿಗೆ ಗುಲಾಬಿ ನೀಡುವ ಮೊದಲು ಗಂಡನಿಗೆ ವೈನ್ ಬಾಟಲಿಯನ್ನು ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಬಿಹಾರದಲ್ಲಿ ಮದ್ಯಪಾನ ನಿಷೇಧವಿರುವ ಕಾರಣ ಅವರಿಬ್ಬರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಕಾಂಚನ್ ಬ್ಯೂಟಿ ಪಾರ್ಲರ್ ಒಳಗೆ ಪಿಸ್ತೂಲ್ ಹಿಡಿದು ಪೋಸ್ ನೀಡುತ್ತಿರುವ ಪ್ರತ್ಯೇಕ…

Read More

ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸಬೇಡಿ ಎಂದ ಕಾಂಗ್ರೆಸ್​​ನ ಮಾಜಿ ಸಚಿವ – Kannada News | Ex Minister Ramanath Rai on Saffron Flags in Temples: Udupi DC Incident and D.K. Backlash

ಮಂಗಳೂರು, ಜ.22: ಮಂಗಳೂರು ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಚಿವ ರಮಾನಾಥ ರೈ (Ramanath Rai) ವಿವಾದತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಅವರು ನೀಡಿರುವ ಹೇಳಿಕೆಯಿಂದ ದಕ್ಷಿಣ ಕನ್ನಡದಲ್ಲಿ ಹಿಂದೂ ನಾಯಕರನ್ನು ಕೇರಳಿಸಿದೆ. ದೇವಸ್ಥಾನದಲ್ಲಿ ಕೇಸರಿ ಬಾವುಟ ಸೇರಿ ಯಾವುದೇ ಧ್ವಜ ಹಾರಿಸಬೇಡಿ ಎಂದು ಹೇಳಿ, ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ನೀವು ಒಂದು ದೈವದ ಗುತ್ತು ಮನೆಯವರಾಗಿ (ದೈವದ ಮನೆಯವರು) ಹೀಗೆ ಮಾತನಾಡುವುದು…

Read More

ಪೊಲೀಸ್ ಕ್ವಾಟ್ರಸ್ ಜಾಗಕ್ಕೆ ಸ್ಕೆಚ್ ಹಾಕಿದ್ದ ಭೂಗಳ್ಳರು ಅಂದರ್: ಮೂವರು ಅರೆಸ್ಟ್​​

ಬೆಂಗಳೂರು, ಏಪ್ರಿಲ್​​ 05: ಮಲ್ಲೇಶ್ವರಂನಲ್ಲಿನ ಪೊಲೀಸ್ ಕ್ವಾಟ್ರಸ್ ಜಾಗ ಕಬಳಿಸಲು ಸ್ಕೆಚ್​​ ಹಾಕಿದ್ದ ಭೂಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 25 ಸಾವಿರ ಚದರಡಿ ಜಾಗವನ್ನು ಲಪಟಾಯಿಸಲು ಮುಂದಾಗಿದ್ದ ವಂಚಕರು, ಅದಕ್ಕೆ ಬೇಕಾದ ದಾಖಲೆಗಳನ್ನು ಕೂಡ ಸಿದ್ಧಪಡಿಸಿಕೊಂಡಿದ್ದರು. ಪ್ರಕರಣ ಸಂಬಂಧ ಕೃಷ್ಣ ಮೂರ್ತಿ, ಶ್ರೀನಾಥ್ ನಗರಗಡ್ಡೆ ಮತ್ತು ಕೃಷ್ಣ ಎಂಬವರನ್ನು ಅರೆಸ್ಟ್​​ ಮಾಡಲಾಗಿದ್ದು, ಇದೇ ರೀತಿ ನಗರದ ಹಲವು ಕಡೆ ಸರ್ಕಾರಿ ಜಾಗ ನುಂಗಿರುವ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಬಗ್ಗೆ ಮಲ್ಲೇಶ್ವರಂ…

Read More