ಅಸ್ಸಾಂ ಮೆಟಲ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ: ನಾಲ್ವರು ಕಾರ್ಮಿಕರ ಸಾವು, ಮಾಲೀಕ ಸೇರಿ ಐವರ ಬಂಧನ – Kannada News | Four Workers Lose Lives in Assam Metal Plant Blast, Factory Owner Among Five Held
ಕಚಾರ್,ಜುಲೈ 28: ಅಸ್ಸಾಂನ ಕಚಾರ್ ಜಿಲ್ಲೆಯ ಲೋಹ ಸಂಸ್ಕರಣಾ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಪ್ರಬಲ ಸ್ಫೋಟ(Blast)ದಲ್ಲಿ ನಾಲ್ವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರ್ಖಾನೆಯ ಮಾಲೀಕ ಹಾಗೂ ಮಂಡಳಿಯ ನಾಲ್ವರು ಸದಸ್ಯರು ಸೇರಿ ಐವರನ್ನು ಬಂಧಿಸಿದ್ದಾರೆ. ಕಾರ್ಖಾನೆಯ ಒಳಗೆ ಕೆಲಸ ನಡೆಯುತ್ತಿದ್ದಾಗ ಏಕಾಏಕಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕರಗಿದ ಬಿಸಿ ಲೋಹವು ಸುತ್ತಲೂ ಸಿಡಿದು ಹತ್ತಿರದಲ್ಲಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ನಾಲ್ವರು ಕಾರ್ಮಿಕರು…