ಹೆಚ್‌ಎಂಟಿ ಜಮೀನು ತೆರವುಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಡೆ: ಮರ ಕತ್ತರಿಸದಂತೆ ಹೆಚ್‌ಎಂಟಿಗೂ ಸೂಚನೆ – Kannada News | Bengaluru HMT Land: High Court Bars Govt Acquisition, HMT Not to Cut Trees
ಬೆಂಗಳೂರು, ಜು.30: ರಾಜಧಾನಿ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಲಿಮಿಟೆಡ್‌ಗೆ (HMT Limited) ಸೇರಿದ ಜಮೀನನ್ನು ಸ್ವಾಧೀನಪಡಿಸಿಕೊಳ್ಳದಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ತಡೆ ನೀಡಿದೆ. ಅದೇ ಸಮಯದಲ್ಲಿ, ಈ ಜಮೀನಿನಲ್ಲಿ ಈಗಾಗಲೇ ಮೂರನೇ ವ್ಯಕ್ತಿಗಳಿಗೆ ಮಾರಾಟವಾದ ಜಾಗವನ್ನು ಹೊರತುಪಡಿಸಿ, ಉಳಿದ ಜಾಗದಲ್ಲಿ ಯಾವುದೇ ಮರಗಳನ್ನು ಕತ್ತರಿಸಬಾರದು ಎಂದು ಹೆಚ್‌ಎಂಟಿ ಸಂಸ್ಥೆಗೂ ನ್ಯಾಯಾಲಯ ನಿರ್ದೇಶಿಸಿದೆ. ಬೆಂಗಳೂರು ನಗರದ ಅರಣ್ಯ ಉಪ ಸಂರಕ್ಷಣಾಧಿಕಾರಿ (DCF) ಅವರು ಜೂನ್ 16 ರಂದು ಹೊರಡಿಸಿದ್ದ ಆದೇಶವನ್ನು…