Headlines

ಅಶ್ವಿನಿ ಗೌಡಗೆ ಓಪನ್ ಚಾಲೆಂಜ್ ಹಾಕಿದ ಗಿಲ್ಲಿ​; ಎರಡು ವಾರದಲ್ಲಿ ಇದು ಸಾಧ್ಯಾನಾ? – Kannada News | Bigg Boss Kannada 12: Ashwini Gowda vs Gilli Nata Captaincy Challenge

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಇರೋದು ಹಾವು ಮುಂಗುಸಿ ರೀತಿಯ ಸಂಬಂಧ. ಯಾವಾಗಲೂ ಕಿತ್ತಾಡಿಕೊಳ್ಳುತ್ತಲೇ ಇರುವ ಇವರು ಒಂದಾಗಿದ್ದು ತುಂಬಾನೇ ಕಡಿಮೆ. ಇತ್ತೀಚೆಗೆ ಇಬ್ಬರ ಮಧ್ಯೆ ಸಾಮರಸ್ಯ ಬೆಳೆದಿತ್ತು. ಆದರೆ, ಇವರ ಮಧ್ಯೆ ಮತ್ತೆ ಕಿರಿಕ್ ಉಂಟಾಗಿದೆ. ಅಶ್ವಿನಿ ಗೌಡ ಅವರಿಗೆ ಗಿಲ್ಲಿ ನಟ ಓಪನ್ ಚಾಲೆಂಜ್ ಹಾಕಿದ್ದಾರೆ. ಇದನ್ನು ಸಾಧಿಸೋಕೆ ಅಶ್ವಿನಿ ಬಳಿ ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ. ಗಿಲ್ಲಿ ನಟ ಅವರು…

Read More

GT vs RR: ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಗುಜರಾತ್; ರಾಜಸ್ಥಾನ್​ಗೆ 2ನೇ ಜಯ

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿನಡೆದ ಐಪಿಎಲ್ 2026 ರ 9ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಗುಜರಾತ್ ಟೈಟನ್ಸ್ ಲೀಗ್​ನಲ್ಲಿ ಸತತ ಎರಡನೇ ಪಂದ್ಯವನ್ನು ಸೋತರೆ, ಇತ್ತ ಸಾಂಘಿಕ ಪ್ರದರ್ಶನ ನೀಡಿದ ರಾಜಸ್ಥಾನ್ ಸತತ ಎರಡನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 210 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 204 ರನ್​ ಕಲೆಹಾಕಲಷ್ಟೇ ಶಕ್ತವಾಗಿ 7 ರನ್​ಗಳಿಂದ…

Read More

Bengaluru Air Quality: ಬೆಂಗಳೂರಿನ ಜೊತೆ ಬೆಳಗಾವಿಯ ವಾಯುಗುಣಮಟ್ಟದಲ್ಲೂ ಭಾರೀ ಸುಧಾರಣೆ – Kannada News | Bangalore Air Pollution Crisis: Bengaluru and Belagavi Air Quality gets better

ಬೆಂಗಳೂರಿನ ಜೊತೆ ಬೆಳಗಾವಿಯ ವಾಯುಗುಣಮಟ್ಟದಲ್ಲೂ ಭಾರೀ ಸುಧಾರಣೆ ಬೆಂಗಳೂರು, ಮೇ 11: ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿಯ ಏರ್ ಕ್ವಾಲಿಟಿ (Bengaluru Air Quality) ಭಾರಿ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಬೆಳಗಾವಿಯ ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ….

Read More

ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು! ಸಂಬಂಧಿಕರು ಹೇಳಿದ್ದೇನು ನೋಡಿ

ಧಾರವಾಡ, ಏಪ್ರಿಲ್ 11: ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ರನ್ನು ಧಾರವಾಡದ ಹಾಶ್ಮಿ ನಗರದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಇನ್ನೇನು 15 ದಿನಗಳಲ್ಲಿ ಅವರ ಮದುವೆಯೂ ನಿಗದಿಯಾಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಫೈರೋಜ್ ಪಠಾಣ್ ಆಪ್ತರೊಬ್ಬರು ‘ಟಿವಿ9’ ಜತೆ ಮಾತನಾಡಿದ್ದು, ಘಟನೆ ವೇಳೆ ಮನೆಗೆ ನುಗ್ಗಿದ್ದವರಲ್ಲಿ ಮೊಹಮ್ಮದ್ ಶಾ ಎಂಬಾತ ಇದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಕಾಣಿಸಿಕೊಂಡಿದ್ದಾನೆ. ಆತನೊಂದಿಗೆ ಇನ್ನೂ ನಾಲ್ವರು ಇದ್ದರು ಎಂದು ಆಪ್ತರು ತಿಳಿಸಿದ್ದಾರೆ. ಫೈರೋಜ್ ಮತ್ತು ಮೊಹಮ್ಮದ್ ಶಾ…

Read More

Daily Devotional: ಸಾಮಾನ್ಯ ಜನ ಗರ್ಭಗುಡಿ ಪ್ರವೇಶಿಸಿದರೆ ಏನಾಗುತ್ತೆ? – Kannada News | Daily Devotional: Understanding Garbhagudi Access

ಬೆಂಗಳೂರು, ಡಿಸೆಂಬರ್ 29: ದೇವಾಲಯವು ದೈವಿಕ ಶಕ್ತಿಯ ಆಧಾರ ಕೇಂದ್ರವಾಗಿದೆ. ಭಕ್ತರು ತಮ್ಮ ಆಶಯಗಳು, ದೋಷಗಳು ಮತ್ತು ಕರ್ಮಫಲಗಳನ್ನು ಭಗವಂತನಿಗೆ ನಿವೇದಿಸಿಕೊಳ್ಳುವ ಪವಿತ್ರ ಸ್ಥಳವಾಗಿದೆ. ಸಾಮಾನ್ಯ ಜನರು ಗರ್ಭಗುಡಿಯನ್ನು ಪ್ರವೇಶಿಸಬಹುದೇ? ಅದು ಶುಭಕರವೇ ಅಥವಾ ಅಶುಭಕರವೇ? ಎಂಬುದು ಅನೇಕರಿಗೆ ಕಾಡುವ ಪ್ರಶ್ನೆ. ಸಾಮಾನ್ಯವಾಗಿ ಶ್ರೀಮಂತರು, ಅಧಿಕಾರದಲ್ಲಿರುವ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಮತ್ತು ಜ್ಞಾನಿಗಳಿಗೆ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಧಾರ್ಮಿಕ ನಿಯಮಗಳ ಪ್ರಕಾರ, ಯಾವುದೇ ದೇವಸ್ಥಾನದಲ್ಲಿ ದೇವರನ್ನು ನೇರವಾಗಿ ಸ್ಪರ್ಶಿಸುವ ಹಕ್ಕು ಎಲ್ಲರಿಗೂ ಇರುವುದಿಲ್ಲ. ಜ್ಯೋತಿರ್ಲಿಂಗಗಳು…

Read More

ಮೊದಲ ಸಲ ಕಮಲಾಕರ ಜೊತೆ ಹೋಗಿದ್ದಕ್ಕೆ 10 ಸಾವಿರ ರೂ. ನಿರೀಕ್ಷಿಸಿದ್ದ ಸುಚಿತ್ರಾಗೆ ಸಿಕ್ಕಿದ್ದು 35 ಸಾವಿರ ರೂ. – Kannada News | Siddapura Vasanth Naik Murder Case: Suchitra gets Rs 35 Thousand From astrologer kamalakara bhat In First Meet

ಕಾರವಾರ, (ಫೆಬ್ರವರಿ 10): ರಾಜ್ಯವನ್ನೇ ಬೆಚ್ಚಿಬೀಳಿಸಿದ ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣದ (siddapura Vasanth Naik Murder Case) ತನಿಖೆ ಆಳಕ್ಕಿಳಿಯುತ್ತಿದ್ದಂತೆ, ಆರೋಪಿಗಳಾದ ಕಮಲಾಕರ ಭಟ್ (astrologer kamalakara bhat) ಮತ್ತು ಪ್ರೇಯಸಿ ಸುಚಿತ್ರಾಳ (Suchitra) ಅಕ್ರಮ ಸಂಬಂಧದ ಬಗ್ಗೆ ರೋಚಕ ಹಾಗೂ ಅಷ್ಟೇ ಆಘಾತಕಾರಿ ಸಂಗತಿಗಳು ಒಂದೊಂದೇ ಹೊರಬರುತ್ತಿವೆ. ಈ ಜೋಡಿಯ ಸಂಬಂಧ ಕೇವಲ ಪ್ರೀತಿಗೆ ಸೀಮಿತವಾಗಿರದೆ, ಅದರ ಹಿಂದೆ ದೊಡ್ಡದೊಂದು ‘ಬ್ಲ್ಯಾಕ್‌ಮೇಲ್’ (Blackmail) ಮತ್ತು ‘ಹನಿಟ್ರ್ಯಾಪ್’ (Honeytrap) ಜಾಲವಿತ್ತು ಎಂಬ ಸ್ಫೋಟಕ ಮಾಹಿತಿ…

Read More

‘ಗುಂಡಿನ ದಾಳಿ ನಡೆದಿಲ್ಲ, ಅಶ್ರುವಾಯು ಮಾತ್ರ ಬಳಸಲಾಗಿದೆ’; ರಾಹುಲ್ ಗಾಂಧಿ ಆರೋಪಕ್ಕೆ ಸರ್ಕಾರ ಸ್ಪಷ್ಟನೆ – Kannada News | No Shots Fired Only Tear Gas was Used; Minister Jitendra Singh Rejects Rahul Gandhi’s Shooting Claim

ನವದೆಹಲಿ, ಜುಲೈ 29: ಜುಲೈ 20ರಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸಿದ ಹೋರಾಟದ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಯಾವುದೇ ಗುಂಡಿನ ದಾಳಿ ನಡೆಸಲಾಗಿಲ್ಲ, ಕೇವಲ ಅಶ್ರುವಾಯುವನ್ನು ಮಾತ್ರ ಬಳಸಲಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಲೋಕಸಭೆಗೆ ತಿಳಿಸಿದೆ. ಪರೀಕ್ಷಾ ಅಕ್ರಮ ತಡೆ ವಿಧೇಯಕದ ಮೇಲಿನ ಚರ್ಚೆಯ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನುಮೋದನೆ ನೀಡಿದ್ದಾರೆ ಎಂಬ ರಾಹುಲ್…

Read More

‘ನಿನ್ನ ಜೀವನ ನಡೆಯೋದೇ ನಮ್ಮಿಂದ!’: ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ

ಬೆಂಗಳೂರು, ಮೇ,31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಥಳೀಯರು ಹಾಗೂ ಪರಭಾಷಿಕರ ನಡುವಿನ ಭಾಷಾ ಸಂಘರ್ಷ ಮತ್ತು ದರ್ಪದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದೀಗ ಆಟೋ ಪ್ರಯಾಣದ ವೇಳೆ ಹೆಚ್ಚಿನ ಲಗೇಜ್ ತಂದಿದ್ದನ್ನು ಪ್ರಶ್ನಿಸಿದ ಆಟೋ ಡ್ರೈವರ್ ಒಬ್ಬನ ಮೇಲೆ ಮಹಿಳೆ ಸೇರಿದಂತೆ ನಾಲ್ವರು ಹಿಂದಿ ಭಾಷೆಯಲ್ಲಿ ನಿಂದಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮಹಿಳೆ ಸೇರಿದಂತೆ ನಾಲ್ವರು ಪ್ರಯಾಣಿಕರು ಒಟ್ಟಾಗಿ ಪ್ರಯಾಣಿಸಲು ಆಟೋ ಬುಕ್ ಮಾಡಿದ್ದರು. ಆದರೆ, ಅವರು ನಿಯಮಕ್ಕಿಂತ ಅತಿ…

Read More

ಸಂಧಾನ ಯಶಸ್ವಿ: ಮುಷ್ಕರ ಹಿಂಪಡೆದ ವೈದ್ಯರು, ನಿಟ್ಟುಸಿರುಬಿಟ್ಟ ರೋಗಿಗಳು

ಬೆಂಗಳೂರುಮ (ಮಾರ್ಚ್ 11): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯಾಧಿಕಾರಿಗಳ ಸಂಘ (Karnataka Doctors association)  ನಾಳಿನ (ಮಾರ್ಚ್ 11)  ಮುಷ್ಕರವನ್ನು (Strike) ಹಿಂಪಡೆದುಕೊಂಡಿದೆ. ಖಾಲಿ ಹುದ್ದೆಗಳ ಭರ್ತಿ ಸೇರಿ 14 ಬೇಡಿಕೆಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಓಪಿಡಿ ಬಂದ್ ಮಾಡಿ ಸರ್ಕಾರಿ ವೈದ್ಯಾಧಿಕಾರಿಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಇದರಿಂದ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಉಂಟಾಗಬಹುದು ಎಂದು ಎಚ್ಚೆತ್ತ ರಾಜ್ಯ ಸರ್ಕಾರ, ವೈದ್ಯಾಧಿಕಾರಿಗಳ ಸಂಘದ ಜತೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ.  14 ಬೇಡಿಕೆಗಳ ಪೈಕಿ 13…

Read More

ಅಮ್ಮಾ ನೀನು ಅಷ್ಟು ವರ್ಷ ನನ್ನ ಹೊತ್ತಿಲ್ವಾ, ಈಗ ನನ್ನ ಸರದಿ

ವಯಸ್ಸಾದ ಮೇಲೆ ದೊಡ್ಡವರು ಕೂಡ ಮಕ್ಕಳ ರೀತಿ ಎಂಬುದು ಸುಳ್ಳಲ್ಲ, ಹೇಗೆ ಚಿಕ್ಕವರಿದ್ದಾಗ ಸ್ವಲ್ಪ ದೂರ ನಡೆದಾಕ್ಷಣ ಅಮ್ಮಾ ಎತ್ಕೋ ನಡಿಯೋಕೆ ಆಗ್ತಿಲ್ಲ ಎಂದು ಮಕ್ಕಳು ಹೇಳ್ತಾರೋ ಹಾಗೆಯೇ ವೃದ್ಧಾಪ್ಯದಲ್ಲಿ ಕೂಡ ಪೋಷಕರಿಗೆ ಹಾಗೆಯೇ ಆಗುತ್ತೆ. ಆಗ ಮಕ್ಕಳು ಕೂಡ ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ವ್ಯಕ್ತಿಯೊಬ್ಬರು ರೈಲ್ವೆ ನಿಲ್ದಾಣದಲ್ಲಿ ತಾಯಿಯನ್ನು ಬೆನ್ನ ಮೇಲೆ ಹೊತ್ತು ನಡೆಯುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  Source link

Read More