Headlines

ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಕೂದಲೆಳೆ ಅಂತರದಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಪಾರು – Kannada News | Haveri: minister Satish Jarkiholi Narrowly Escapes Pendal Collapse

ಹಾವೇರಿ, ಜನವರಿ 03: ಏಕಾಏಕಿ ಜೋರಾಗಿ ಬೀಸಿದ ಸುಂಟರಗಾಳಿಗೆ ಪೆಂಡಾಲ್​​ ಕುಸಿದಿದ್ದು, ಸಚಿವ ಸತೀಶ್ ಜಾರಕಿಹೊಳಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ನಡೆದಿದೆ. ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಹಿನ್ನೆಲೆ ಪೆಂಡಾಲ್ ಹಾಕಲಾಗಿತ್ತು. ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಮುಗಿಸಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ಬೀಸಿದ ಸುಂಟರಗಾಳಿಗೆ ಸತೀಶ್ ಜಾರಕಿಹೊಳಿ ಹಿಂದೆ ಇದ್ದ ಪೆಂಡಾಲ್ ಹಾರಿ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಜಾರಕಿಹೊಳಿ ಸೇರಿದಂತೆ ಕ್ಷಣ…

Read More

ಕಿರುತೆರೆಗೆ ಬಿ.ಸಿ. ಪಾಟೀಲ್ ಗ್ರ್ಯಾಂಡ್ ಎಂಟ್ರಿ; ರಾಯರ ಧಾರಾವಾಹಿಯಲ್ಲಿ ಮಹತ್ವದ ಪಾತ್ರ – Kannada News | BC Patil TV Debut: Sri Raghavendra Mahatme Welcomes Karatagiriya Desai

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಬಿ.ಸಿ. ಪಾಟೀಲ್ ಅವರು ಇದೇ ಮೊದಲ ಬಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಭಕ್ತಿ ಪ್ರಧಾನ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಮೂಲಕ ಅವರು ಹೊಚ್ಚಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ವೀಕ್ಷಕರ ಮನಗೆದ್ದಿರುವ ಈ ಸರಣಿಯಲ್ಲಿ ಬಿ.ಸಿ. ಪಾಟೀಲ್ ಅವರು ಅತ್ಯಂತ ಪ್ರಮುಖವಾದ ‘ಕರಟಗಿರಿಯ ದೇಸಾಯಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ವಿಭಿನ್ನ ಸಿನಿಮಾಗಳ ಮೂಲಕ ಅಬ್ಬರಿಸುತ್ತಿದ್ದ ‘ಕೌರವ’ ಬಿ.ಸಿ. ಪಾಟೀಲ್ ಅವರನ್ನು ಈಗ ರಾಯರ ಮಹಿಮೆಯ…

Read More

‘ಆಲ್ಫಾ’ ಬಾಕ್ಸ್ ಆಫೀಸ್ ಕಲೆಕ್ಷನ್; ಎರಡನೇ ದಿನವೂ ಮಂಕಾದ ಅಲಿಯಾ ಭಟ್ ಸಿನಿಮಾ – Kannada News | Alpha Box Office Collection Day 2 Alia bhatt Sharvari YRF Spy Universe Movie

ಯಶ್ ರಾಜ್ ಫಿಲ್ಮ್ಸ್ (YRF) ಸ್ಪೈ ಯೂನಿವರ್ಸ್‌ನ ಮೊದಲ ಮಹಿಳಾ ಪ್ರಧಾನ ಚಿತ್ರ ಎಂದೇ ಭಾರಿ ಸದ್ದು ಮಾಡಿದ್ದ ‘ಆಲ್ಫಾ’ (Alpha) ಸಿನಿಮಾ ಜುಲೈ 3ರಂದು ಅದ್ದೂರಿಯಾಗಿ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿತ್ತು. ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ (Alia Bhatt) ಮತ್ತು ಶರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಆ್ಯಕ್ಷನ್ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ನೇರ ಪರಿಣಾಮ ಈಗ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ಮೇಲೂ ಬೀರಿದೆ. ಸಾಮಾನ್ಯವಾಗಿ…

Read More

‘45 ಟೈಟಲ್ ಕೊಟ್ಟಿದ್ದು ನಾನು, ಸೌಜನ್ಯಕ್ಕೂ ನನ್ನ ಹೆಸರು ಹೇಳಿಲ್ಲ’; ನಟನ ಬೇಸರ – Kannada News | 45 Movie Title Controversy: Actor Mitra Claims Ownership, Expresses Disappointment

ಅರ್ಜುನ್ ಜನ್ಯ (Arjun Janya) ನಿರ್ದೇಶನದ, ಶಿವರಾಜ್​​ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಕೆಲವರಿಂದ ಮೆಚ್ಚುಗೆ ಪಡೆಯಿತು. ಈಗ ಚಿತ್ರ ಒಟಿಟಿಗೂ ಬಂದಿದೆ. ‘45’ ಅನ್ನೋದು ಸಿನಿಮಾದ ಕಥೆಗೆ ಹೆಚ್ಚು ಸೂಕ್ತ. ಹೀಗಾಗಿ, ಈ ಟೈಟಲ್ ಇಡಲಾಗಿದೆ. ಈಗ ಟೈಟಲ್ ವಿಷಯಕ್ಕೆ ಸಂಬಂಧಿಸಿದಂತೆ ಸಿನಿಮಾ ಹಾಗೂ ಕಿರುತೆರೆ ಕಲಾವಿದ ಮಿತ್ರ ಮಾತನಾಡಿದ್ದಾರೆ. ‘ಟೈಟಲ್ ನನ್ನದಾಗಿತ್ತು, ಅವರಿಗೆ ನೀಡಿದ್ದೇನೆ’ ಎಂದಿದ್ದಾರೆ. ಸಿನಿಮಾ ವೀಕ್ಷಿಸಿದವರಿಗೆ ‘45’ ಎಂಬ ಟೈಟಲ್ ಯಾಕೆ…

Read More

Karnataka Weather Update: ಬೆಂಗಳೂರಿಗರಿಗೆ ಕೊನೆಗೂ ತಂಪೆರೆದ ವರುಣ; ರಾಜ್ಯದ ಹಲವೆಡೆಯೂ ಮಳೆ ಮುನ್ಸೂಚನೆ – Kannada News | Weather Update: Bengaluru Witnesses Widespread Rainfall; More Rain Likely Across Karnataka

ಬೆಂಗಳೂರಲ್ಲಿ ಮಳೆImage Credit source: Farman Ali khan X Account ಬೆಂಗಳೂರು, ಜುಲೈ 16: ಜುಲೈ ತಿಂಗಳಿನಲ್ಲಿ ಶತಮಾನದ ಬಳಿಕ ದಾಖಲೆಯ ತಾಪಮಾನ ಕಂಡಿದ್ದ ಬೆಂಗಳೂರಿಗರ (Bengaluru) ಮೇಲೆ ಕೊನೆಗೂ ವರುಣ (Rain) ಕೊಂಚ ಕೃಪೆ ತೋರಿದ್ದಾನೆ. ಮಹಾನಗರದ ಹಲವೆಡೆ ಮಳೆಯಾಗಿದ್ದು, ಏಕಾಏಕಿ ವರ್ಷದಾರೆಯ ಪರಿಣಾಮ, ಸಾರ್ವಜನಿಕರು ಪರದಾಟ ನಡೆಸಿದ್ದಾರೆ. ರಾಜಾಜಿನಗರ, ಮಲ್ಲೇಶ್ವರಂ, ಕುರುಬರಹಳ್ಳಿ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ  ಜನರು ಬಸ್ ನಿಲ್ದಾಣ, ಅಂಡರ್​ಪಾಸ್​ಗಳಲ್ಲಿ ಆಶ್ರಯ ಪಡೆದ ದೃಶ್ಯಗಳು ಕಂಡುಬಂದಿವೆ. ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ…

Read More

ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ, ಇಂಧನ ಮಾರಾಟ ಶೇ.50ರಷ್ಟು ಕುಸಿತ – Kannada News | PM Modis Call for Economic Patriotism Sees Sharp Drop in Bengaluru Gold and Fuel Consumption

ಬೆಂಗಳೂರು, ಮೇ 17: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಹಿತಾಸಕ್ತಿ ಕಾಪಾಡಲು ನೀಡಿರುವ ಕರೆಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ ಮತ್ತು ಇಂಧನ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರಾಟವು ಶೇಕಡ 50ರಷ್ಟು ಕಡಿಮೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ಸಹ ಕೊಂಚ ಇಳಿಕೆಯನ್ನು ಕಂಡಿದೆ. ಬಂಕ್‌ಗಳಲ್ಲಿ ಪ್ರತಿದಿನ 150 ರಿಂದ 250 ಲೀಟರ್ ಇಂಧನ ಮಾರಾಟ ಕಡಿಮೆಯಾಗಿದ್ದು, ನಾಗರಿಕರು ತಮ್ಮ ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಮೆಟ್ರೋ…

Read More

ಜೂನ್ 30 ಡೈಡ್​ಲೈನ್: ಎಲ್​ಪಿಜಿ ಇಕೆವೈಸಿ, ಐಟಿಆರ್ ಪರಿಶೀಲನೆ ಇತ್ಯಾದಿ ಹಣಕಾಸು ಕಾರ್ಯಗಳಿಗೆ ನಾಳೆಯ ಗಡುವು – Kannada News | E KYC to ITR scrutiny, financial tasks to be done by 2026 June 30th

ಇನ್ಕಮ್ ಟ್ಯಾಕ್ಸ್ ರಿಟರ್ನ್Image Credit source: Getty Images ನವದೆಹಲಿ, ಜೂನ್ 29: ಈ ತಿಂಗಳ ಕೊನೆಯ ದಿನಾಂಕವು (ಜೂನ್ 30) ಸಾಮಾನ್ಯ ನಾಗರಿಕರಿಗೆ ಮತ್ತು ಉದ್ಯಮಿಗಳಿಗೆ ಪ್ರಮುಖವಾಗಿದೆ. ಈ ದಿನಾಂಕದೊಳಗೆ ಕೆಲವು ಪ್ರಮುಖ ಹಣಕಾಸು ಮತ್ತು ತೆರಿಗೆ ಸಂಬಂಧಿತ ಕೆಲಸಗಳನ್ನು (Financial tasks) ಮುಗಿಸದಿದ್ದರೆ, ಜುಲೈ 1ರಿಂದ ಆರ್ಥಿಕ ನಷ್ಟ ಅಥವಾ ಕಾನೂನು ತೊಂದರೆಗಳನ್ನು ಎದುರಿಸಬೇಕಾಗಬಹುದು. ಎಲ್​ಪಿಜಿ ಗ್ಯಾಸ್​ಗೆ ಸಬ್ಸಿಡಿ ಪಡೆಯುತ್ತಿರುವವರು, ಆ ಸೌಲಭ್ಯ ಮುಂದುವರಿಸಲು ಇಕೆವೈಸಿ ಮಾಡುವುದು ಸೇರಿದಂತೆ ಕೆಲ ಪ್ರಮುಖ ಹಣಕಾಸು ಕಾರ್ಯಗಳಿಗೆ…

Read More

CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು? – Kannada News | MC Sudhakar on CET Exam Janivara Issue

ಬೆಂಗಳೂರು, ಏಪ್ರಿಲ್ 24: ನಗರದ ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಲಾಗಿದೆ ಎಂಬ ಆರೋಪಗಳ ಕುರಿತು ಸಚಿವ ಎಂ.ಸಿ. ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಯಾವುದೇ ಅಧಿಕೃತ ವರದಿ ಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಆರೋಪಗಳು ನಿಜವೆಂದು ಸಾಬೀತಾದರೆ ತೀವ್ರ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಪರೀಕ್ಷೆಗಳನ್ನು ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ನಡೆಸಲಾಗುತ್ತದೆ, ಮತ್ತು ಸಿಬ್ಬಂದಿಯನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತದೆ….

Read More