Headlines

ಬಾಕ್ಸ್ ಆಫೀಸ್‌ನಲ್ಲಿ ‘ಪೆದ್ದಿ’ ಹವಾ; ಎರಡನೇ ದಿನವೂ ಭರ್ಜರಿ ಗಳಿಕೆ

ಅಬ್ಬರದ ಪ್ರಚಾರದೊಂದಿಗೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ‘ಪೆದ್ದಿ’ ಸಿನಿಮಾ (Peddi Movie), ಈಗ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಮೊದಲ ದಿನದ ಬಂಪರ್ ಓಪನಿಂಗ್ ಬಳಿಕ, ಎರಡನೇ ದಿನವಾದ ಶುಕ್ರವಾರವೂ ಚಿತ್ರವು ಅತ್ಯುತ್ತಮ ಕಲೆಕ್ಷನ್ ಮಾಡುವ ಮೂಲಕ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ. ಪೆದ್ದಿಯ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ. ಬುಧವಾರ (ಜೂನ್ 3) ನಡೆದ ವಿಶೇಷ ಪ್ರೀಮಿಯರ್ ಶೋಗಳಿಂದಲೇ ‘ಪೆದ್ದಿ’ ಭರವಸೆಯ ಆರಂಭ ಪಡೆದುಕೊಂಡಿತ್ತು. ಕೇವಲ…

Read More

SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್ – Kannada News | Karnataka SSLC Board Blunder: Visually Impaired Student Fails Due to Result Error

ಕಾರವಾರ, ಏಪ್ರಿಲ್​ 23: ಇತ್ತೀಚೆಗೆ ಪಿಯುಸಿ ಫಲಿತಾಂಶ ಪ್ರಕಟಣೆ ವೇಳೆ 600 ಅಂಕಗಳ ಪರೀಕ್ಷೆಗೆ 683 ಅಂಕಗಳನ್ನು ನೀಡಿದ ಬೋರ್ಡ್​ನ ಎಡವಟ್ಟು ಬೆಳಕಿಗೆ ಬಂದಿತ್ತು. ಇದೀಗ ಇಂತಹದೊಂದು ಎಡವಟ್ಟು ಇದೀಗ ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲೂ ನಡೆದಿದ್ದು, ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯನ್ನ ಫೇಲ್​ ಮಾಡಲಾಗಿದೆ. ಶಿರಸಿಯ ಇಂದಿರಾ ನಗರದ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್, ಎಲ್ಲಾ ಪರೀಕ್ಷೆಗೆ ಹಾಜರಾಗಿದ್ದರು ಸಮಾಜ-ವಿಜ್ಞಾನ ವಿಷಯದ ಪರೀಕ್ಷೆಗೆ ಗೈರು ಎಂದು ನಮೋದಿಸಲಾಗಿದೆ. ಕನ್ನಡ -100, ಇಂಗ್ಲಿಷ್​​ -92, ಅರ್ಥಶಾಸ್ತ್ರ-98 , ಪೊಲಿಟಿಕಲ್…

Read More

ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಆಗಿದ್ದೇನು? – Kannada News | Niveditha Gowda Kishan Bilagali Peacock Feather Reels Controversy Dinesh Kallahalli Complaint

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ನಿವೇದಿತಾ ಗೌಡ (Niveditha Gowda) ಮತ್ತು ಕಿಶನ್ ಬಿಳಗಲಿ ಅವರು ಇತ್ತೀಚೆಗೆ ನವಿಲುಗರಿ ಧರಿಸಿ ರೀಲ್ಸ್ ಮಾಡಿದ್ದು ವಿವಾದಕ್ಕೆ ಗುರಿಯಾಗಿದೆ. ಅವರಿಬ್ಬರ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ದೂರು ಸಲ್ಲಿಸಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಿವೇದಿತಾ ಗೌಡ, ಕಿಶನ್ ಬಿಳಗಲಿ ಅವರಿಂದ ಗಂಭೀರವಾದ ಕಾನೂನು ಉಲ್ಲಂಘನೆ ಆಗಿದೆ. ಮುಖ್ಯ ವನ್ಯಜೀವಿ ಪರಿಪಾಲಕರ ಕಚೇರಿಗೆ ದೂರು ನೀಡಿದ್ದೇನೆ. ಈ ಬಗ್ಗೆ ಸಮಗ್ರ ತನಿಖೆ…

Read More

ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ: ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ! – Kannada News | Physically Disabled Youth from Mangaluru Builds Online Business Empire

ಮಂಗಳೂರು, ಜನವರಿ 27: ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಬೀರ್ ಎಂಬ ಯುವಕ ಸಾಬೀತುಪಡಿಸಿದ್ದಾರೆ. ಅಬ್ಬಾಸ್ ಮತ್ತು ಅಮೀನಾ ದಂಪತಿಯ ಪುತ್ರರಾದ ಕಬೀರ್, ಒಂಭತ್ತು ತಿಂಗಳ ವಯಸ್ಸಿನಲ್ಲಿ ಜ್ವರದಿಂದ ದೇಹದ ಸ್ವಾಧೀನ ಕಳೆದುಕೊಂಡರು. ಪ್ರಸ್ತುತ 25 ವರ್ಷ ವಯಸ್ಸಿನ ಕಬೀರ್, ಕುತ್ತಿಗೆ ಮೇಲ್ಭಾಗದಲ್ಲಿ ಮತ್ತು ಹೆಬ್ಬೆರಳಿನಲ್ಲಿ ಮಾತ್ರ ಚಲನೆಯನ್ನು ಹೊಂದಿದ್ದಾರೆ. ಕೇವಲ ತಮ್ಮ ಹೆಬ್ಬೆರಳಿನ ಸಹಾಯದಿಂದ ಮೊಬೈಲ್‌ನಲ್ಲಿ ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್ ಕಲಿತ ಇವರು, ಆನ್‌ಲೈನ್ ವ್ಯವಹಾರವನ್ನು ನಡೆಸುತ್ತಿದ್ದಾರೆ….

Read More

ಪ್ರಯಾಣಿಕರೇ ಗಮನಿಸಿ: ತೀರ್ಥಹಳ್ಳಿ, ಕುಂದಾಪುರ ರಾಜ್ಯ ಹೆದ್ದಾರಿ ಬಂದ್​​; ಬದಲಿ ಮಾರ್ಗಗಳ ಮಾಹಿತಿ ಇಲ್ಲಿದೆ

ಶಿವಮೊಗ್ಗ, ಏಪ್ರಿಲ್​​ 12: ಹುಲಿಕಲ್ ಘಾಟಿಯಲ್ಲಿ ಸುಮಾರು 5 ಅಡಿ ಅಗಲದವರೆಗೆ ಮತ್ತೊಮ್ಮೆ ಭೂಕುಸಿತ ಉಂಟಾದ ಹಿನ್ನೆಲೆ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಕಾಂಕ್ರೀಟ್ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡು ಬಂದ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ರಸ್ತೆಯು ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಘಾಟ್​​ನ ಹೇರ್‌ಪಿನ್ ತಿರುವಿನಲ್ಲಿ ರಕ್ಷಣಾತ್ಮಕ ಕಾಮಗಾರಿಯೂ ಪೂರ್ಣಗೊಳ್ಳುವವರೆಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಲ್ಲಾ ಮಾದರಿಯ…

Read More

ಸ್ಪ್ರಿಂಗ್ ಇದೆಯಾ? ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ನ್ಯೂಝಿಲೆಂಡ್ ಆಟಗಾರರು – Kannada News | New Zealand players checks Abhishek Sharma’s bat

ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಕ್ಷರಶಃ ಅಬ್ಬರಿಸಿದ್ದರು. ಈ ಅಬ್ಬರದೊಂದಿಗೆ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅರ್ಧಶತಕದ ಬಳಿಕ ಕೂಡ ಕಿವೀಸ್ ಬೌಲರ್​ಗಳ ಬೆಂಡೆತ್ತಿದ ಯುವ ದಾಂಡಿಗ 20 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 68 ರನ್ ಬಾರಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಕೇವಲ 10 ಓವರ್​ಗಳಲ್ಲಿ 155 ರನ್ ಸಿಡಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ…

Read More

ವಿಶಾಖಪಟ್ಟಣದಲ್ಲಿ ಆಗಸ್ಟ್ 19ರಿಂದ ಆರ್​ಎಸ್​ಎಸ್​ ಅಖಿಲ ಭಾರತ ಸಮನ್ವಯ ಬೈಠಕ್ – Kannada News | RSS All India Coordination Meeting Will be held in Visakhapatnam from August 19

ವಿಶಾಖಪಟ್ಟಣ, ಆಗಸ್ಟ್ 10: ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಗುಡಿಲೋವಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರೇರಣೆಯಿಂದ ಕಾರ್ಯನಿರ್ವಹಿಸುತ್ತಿರುವ ವಿವಿಧ ಅಂಗಸಂಸ್ಥೆಗಳ ಅಖಿಲ ಭಾರತ ಸಮನ್ವಯ ಸಭೆ ನಡೆಯಲಿದೆ. ಆಗಸ್ಟ್ 19ರಿಂದ 21ರವರೆಗೆ 3 ದಿನಗಳ ಕಾಲ ಈ ಪ್ರಮುಖ ಸಭೆಗಳು ನಡೆಯಲಿವೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜೀವನ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರುವ ಸುಮಾರು 32 ಸಂಘ ಪರಿವಾರದ ಅಂಗಸಂಸ್ಥೆಗಳು ಈ ಸಭೆಯಲ್ಲಿ…

Read More

‘ಕಾಗೆಗಳು ಕೂಗುತ್ತಿವೆ’; ಅನಾರೋಗ್ಯ ವದಂತಿ ಹಬ್ಬಿಸಿದವರಿಗೆ ಅಮಿತಾಭ್ ಖಡಕ್ ತಿರುಗೇಟು – Kannada News | Amitabh Bachchan Hospital Rumors Debunked: Routine Check up Confirmed, Fans Relieved

ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಎಲ್ಲ ಕಡೆಗಳಲ್ಲಿ ಹರಿದಾಡಿತ್ತು. ಈ ವಿಷಯ ತಿಳಿದು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಭಾರೀ ಆತಂಕ ಎದುರಾಗಿತ್ತು. ಅಮಿತಾಭ್​ಗೆ ಈಗ 83 ವರ್ಷ ವಯಸ್ಸು. ಈ ಕಾರಣದಿಂದಲೇ ನಟನ ಆರೋಗ್ಯದ ಬಗ್ಗೆ ಆತಂಕ ಹೆಚ್ಚಿತ್ತು. ಆದರೆ, ಇದೀಗ ಅವರ ಅಭಿಮಾನಿಗಳು ನಿಟ್ಟುಸಿರು ಬಿಡುವಂತಹ ಮತ್ತು ನಿರಾಳರಾಗುವಂತಹ ದೊಡ್ಡ ಅಪ್‌ಡೇಟ್ ಒಂದು ಹೊರಬಿದ್ದಿದೆ. ಅಮಿತಾಭ್ ಬಚ್ಚನ್ ಅವರು ಮೇ 16ರಂದು ಆಸ್ಪತ್ರೆಗೆ ತೆರಳಿದ್ದು ನಿಜ….

Read More

ನೇರವಾಗಿ ಫೈನಲ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ ಸೀಸನ್-4 ರಲ್ಲಿ ಕೇವಲ 5 ಪಂದ್ಯಗಳ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ಲೇಆಫ್​ಗೆ ಪ್ರವೇಶಿಸಿದೆ. ಆಡಿರುವ ಐದು ಮ್ಯಾಚ್​ಗಳಲ್ಲೂ ಗೆಲ್ಲುವ ಮೂಲಕ ಆರ್​ಸಿಬಿ ಪಡೆ ಒಟ್ಟು 10 ಅಂಕಗಳನ್ನು ಪಡೆದಿದ್ದು, ಈ ಮೂಲಕ ಟಾಪ್-3 ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇತ್ತ ಪ್ಲೇಆಫ್​ ಆಡುವುದನ್ನು ಖಚಿತಪಡಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೇರವಾಗಿ ಫೈನಲ್​ಗೇರಲು ಉತ್ತಮ ಅವಕಾಶವಿದೆ. ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಪ್ಲೇಆಫ್ ಆಡಲಿರುವುದು ಅಂಕ…

Read More

ಪ್ರದೋಷ್ ಮಾಫಿ ಕೇಸ್: ಕೋರ್ಟ್​ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್‌ – Kannada News | Darshan Moves High Court Challenging CCH Court Order on Approver Petition

ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್‌ಗೆ 59ನೇ ಸಿಸಿಹೆಚ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರಿ ಅರ್ಜಿ ಸಲ್ಲಿಸಿದ್ದು, ಈ ಪ್ರಕ್ರಿಯೆಯಲ್ಲಾಗುವ ಲೋಪದೋಷಗಳ ಬಗ್ಗೆ ವಾದಿಸಲು ಅವಕಾಶ ನೀಡಬೇಕೆಂದು ದರ್ಶನ್ ಪರ ವಕೀಲರು ಸಿಸಿಹೆಚ್ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ದರ್ಶನ್ ಸೇರಿದಂತೆ ಯಾವುದೇ ಆರೋಪಿಗಳ ವಾದ ಆಲಿಸುವ ಅಗತ್ಯವಿಲ್ಲ ಎಂದು ಕೋರ್ಟ್…

Read More