‘ರಾಮಾಯಣ’ ಟ್ರೇಲರ್ ನೋಡಿ ಪಾಕಿಸ್ತಾನಿ ಮಂದಿ ಫಿದಾ: ರಣಬೀರ್, ಯಶ್ ನಟನೆಗೆ ಮೆಚ್ಚುಗೆ – Kannada News | Pakistani Youtubers impressed by Ramayana Trailer ft Ranbir Kapoor Yash Sai Pallavi
ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ ‘ರಾಮಾಯಣ’ ಚಿತ್ರದ ಟ್ರೇಲರ್ (Ramayana Trailer) ಬಿಡುಗಡೆಯಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಗಡಿ ದಾಟಿ ಪಾಕಿಸ್ತಾನದಲ್ಲೂ ಈ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ. ಜುಲೈ 30ರಂದು ಬಿಡುಗಡೆಯಾದ ಈ ಟ್ರೇಲರ್ ವೀಕ್ಷಿಸಿದ ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ದೃಶ್ಯ ವೈಭವಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗಿರುವ ರಾಮಾಯಣ (Ramayana) ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್ ಅವರ ಲುಕ್ ಮತ್ತು ನಟನೆಯನ್ನು ಕಂಡು ಪಾಕ್ ಮಂದಿ ಬೆರಗಾಗಿದ್ದಾರೆ….