Headlines

ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ: ನೋಡುತ್ತಾ ನಿಂತ ವಾಹನ ಸವಾರರು! – Kannada News | Massive Lone Elephant Walks Onto Road Near Male Mahadeshwara Hills, Motorists Stop to Watch

ಚಾಮರಾಜನಗರ, ಜನವರಿ 13: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ರಾಮಾಪುರ ರಸ್ತೆಯಲ್ಲಿ ಬೃಹತ್ ಗಾತ್ರದ ಒಂಟಿ ಸಲಗ ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿದೆ. ಏಕಾಏಕಿ ಬಂದ ಒಂಟಿ ಸಲಗವನ್ನು ನೋಡಲು ಕೆಲಕಾಲ ವಾಹನ ಸವಾರರು ಮತ್ತು ಮಾದಪ್ಪನ ಭಕ್ತರು ರಸ್ತೆಯಲ್ಲೇ ನಿಂತಿದ್ದಾರೆ. ಹನೂರಿನಿಂದ ರಾಮಾಪುರಕ್ಕೆ ತೆರಳುವ ಮಾರ್ಗದಲ್ಲಿ ಪ್ರತಿದಿನವೂ ಒಂಟಿ ಸಲಗ ಸೇರಿದಂತೆ ಕೆಲ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವುದು ಸಾಮಾನ್ಯವಾಗಿದೆ. ಕಾಡಾನೆಗಳು ಪ್ರತಿದಿನ ನೀರು ಕುಡಿಯಲು ಈ ಭಾಗಕ್ಕೆ ಆಗಮಿಸುತ್ತಿವೆ…

Read More

PSL 2026: ಜೊತೆಯಾಗಿ ಕಣಕ್ಕಿಳಿದ ‘ಮೂಲ’ ಮತ್ತು ‘ಬದಲಿ’ ಆಟಗಾರ!

ಪಾಕಿಸ್ತಾನ್ ಸೂಪರ್ ಲೀಗ್ (PSL) 2026ರ ಆವೃತ್ತಿಯಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೊಳಿಸುವಂತಹ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಒಬ್ಬ ಆಟಗಾರ ತಂಡದಿಂದ ಹೊರಹೋದಾಗ ಅವರ ಜಾಗಕ್ಕೆ ‘ಬದಲಿ’ (Replacement) ಆಟಗಾರ ಬರುತ್ತಾರೆ. ಆದರೆ, ಏಪ್ರಿಲ್ 17 ರಂದು ಲಾಹೋರ್ ಖಲಂದರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ತನ್ನ ‘ಬದಲಿ’ ಆಟಗಾರ ದಿನೇಶ್ ಚಂಡಿಮಲ್ ಮತ್ತು ‘ಹೊರಹೋಗಬೇಕಿದ್ದ’ ಬೆವನ್ ಜೇಕಬ್ಸ್ ಇಬ್ಬರನ್ನೂ ಒಂದೇ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಣಕ್ಕಿಳಿಸಿದೆ. ಯಾಕೆ ಹೀಗಾಯ್ತು? ನ್ಯೂಝಿಲೆಂಡ್‌ನ ಯುವ ಆಟಗಾರ ಬೆವನ್ ಜೇಕಬ್ಸ್…

Read More

RCB vs MI Live Score, WPL 2026: ಕೆಲವೇ ಕ್ಷಣಗಣಲ್ಲಿ ಉದ್ಘಾಟನಾ ಸಮಾರಂಭ ಆರಂಭ

ಮಹಿಳಾ ಪ್ರೀಮಿಯರ್ ಲೀಗ್​ನ ನಾಲ್ಕನೇ ಸೀಸನ್ ಇಂದಿನಿಂದ ಪ್ರಾರಂಭವಾಗುತ್ತಿದೆ. ಮೆಗಾ ಹರಾಜಿನ ನಂತರ ಎಲ್ಲಾ ತಂಡಗಳು ಪ್ರಮುಖ ಬದಲಾವಣೆಗಳಾಗಿದ್ದು ಕೆಲವು ತಂಡಗಳು ಹೊಸ ನಾಯಕಿಯರನ್ನು ನೇಮಿಸಿವೆ. ಇದರೊಂದಿಗೆ ಈ ಸೀಸನ್ ಹಲವು ವಿಧಗಳಲ್ಲಿ ವಿಶೇಷವಾಗಿದ್ದು, ಅದರಲ್ಲಿ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಜನವರಿ-ಫೆಬ್ರವರಿಯಲ್ಲಿ ನಡೆಯುತ್ತಿದೆ. ಲೀಗ್​ನ ಮೊದಲ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ. Source link

Read More

ವ್ಯಾಲೆಂಟೈನ್ಸ್‌ ಡೇಗೆ ಬೆಂಗಳೂರಿನ ಮಹಿಳೆಯರಿಗೆ ಗುಡ್​​​ ನ್ಯೂಸ್: ನಿಮ್ಮ ಸುರಕ್ಷತೆಗೆ ಬರಲಿದೆ ‘ಸಖಿ ಆಟೋ’ – Kannada News | Bengaluru’s Sakhi Auto: Empowering Women with Safe Transport and No Surge Pricing

ಬೆಂಗಳೂರು, ಫೆ. 9: ಪ್ರೇಮಿಗಳ ದಿನದಂದು ಮಹಿಳೆಯರಿಗೆ ಒಂದು ಗುಡ್​​​​ ನ್ಯೂಸ್​​ ಇದೆ. ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅತ್ಯಂತ ವಿನೂತನವಾದ ‘ಸಖಿ ಆಟೋ’ (Sakhi Auto) ಸೇವೆ ಶೀಘ್ರದಲ್ಲೇ ಆರಂಭವಾಗುತ್ತಿದೆ. ಈ ಸೇವೆಯು ಇದೇ ಫೆಬ್ರವರಿ 14, 2026 ರಂದು (ಪ್ರೇಮಿಗಳ ದಿನದಂದು) ಬೆಂಗಳೂರಿನಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.ಇದು ಮಹಿಳಾ ಪ್ರಯಾಣಿಕರಿಗಾಗಿ, ಮಹಿಳಾ ಚಾಲಕಿಯರೇ ನಡೆಸುವ ವಿಶೇಷ ಸಾರಿಗೆ ವ್ಯವಸ್ಥೆಯಾಗಿದೆ. ಆರಂಭದಲ್ಲಿ ಇದು ಬೆಳಿಗ್ಗೆ 6:00 ರಿಂದ ಮಧ್ಯರಾತ್ರಿ 12:00 ರವರೆಗೆ…

Read More

ದ್ವಿತೀಯ ಪಿಯುಸಿ ಫಲಿತಾಂಶದ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು: ತಾಯಿಯ ನಡವಳಿಕೆ ಮೇಲೆಯೇ ಸಂಬಂಧಿಕರ ಶಂಕೆ!

ಬೆಂಗಳೂರು, ಏಪ್ರಿಲ್ 10: ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಪ್ರಕಟವಾದ ದಿನವೇ ಬೆಂಗಳೂರಿನ (Bangalore) ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ತನುಶ್ರೀ (18) ಮೃತಪಟ್ಟ ವಿದ್ಯಾರ್ಥಿನಿ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದೆ. ಆದರೆ, ಸಂಬಂಧಿಕರು ಮಾತ್ರ ವಿದ್ಯಾರ್ಥಿನಿಯ ತಾಯಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯ ವಿವರ ಗುರುವಾರ (ಏಪ್ರಿಲ್ 9) ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ…

Read More

ಬೆಂಗಳೂರಿನಲ್ಲಿ ಮನೆ ಹುಡುಕುವುದು ಈಗ ‘ಮಿಷನ್ ಇಂಪಾಸಿಬಲ್’! ಬ್ಯಾಚುಲರ್ಸ್ ಸಂಕಷ್ಟ ಕೇಳೋರು ಯಾರು?

ಬೆಂಗಳೂರು, ಮಾ.27: ನಗರದಲ್ಲಿ ಮನೆಗಳು ಬಾಡಿಗೆಗೆ ಸಿಗುವುದು ತುಂಬಾ ಕಷ್ಟ, ಅದರಲ್ಲೂ ಬ್ಯಾಚುನರ್ಲ್​​​ಗಳಿಗೆ ಮನೆ ನೀಡಲು ಯೋಚನೆ ಮಾಡುತ್ತಾರೆ. ಮತ್ತು ಅವರ ಬಜೆಟ್​​ ಕೂಡ 10 ಸಾವಿರದ ಒಳಗೆ ಇರುತ್ತದೆ. ಆದರೆ ಇದೀಗ 10 ಸಾವಿರಕ್ಕೆ ಮನೆ ಸಿಗುವುದು ಕಷ್ಟವಾಗಿದೆ. ಈ ಬಗ್ಗೆ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸುವ ಕನಸು ಹೊತ್ತು ಬರುವವರಿಗೆ ಈಗ ‘ಬಾಡಿಗೆ ಮನೆ’ ಎನ್ನುವುದು ಮರೀಚಿಕೆಯಾಗುತ್ತಿದೆ. ನಗರದ ಐಟಿ ಹಬ್‌ಗಳ ಸುತ್ತಮುತ್ತಲಷ್ಟೇ ಅಲ್ಲದೆ, ಸಾಮಾನ್ಯ ಪ್ರದೇಶಗಳಲ್ಲೂ ಬಾಡಿಗೆ…

Read More

‘ಸಮರ್ಪಣಾ ಭಾವಕ್ಕೆ ಹೃದಯಪೂರ್ವಕ ಸಲ್ಯೂಟ್’; ಪಿಎಂ ಮೋದಿಗೆ ಕಿಚ್ಚನ ಸಾಧನೆ – Kannada News

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಅತ್ಯಪೂರ್ವ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸತತ ಮೂರನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರು, ಭಾರತದಲ್ಲಿ ಅತಿ ದೀರ್ಘಾವಧಿಗೆ ಸೇವೆ ಸಲ್ಲಿಸಿದ ಮೊದಲ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಮೊದಲು ಈ ದಾಖಲೆ ಮಾಜಿ ಪ್ರಧಾನಿ ಜವಾಹರ್​​ಲಾಲ್ ನೆಹರು ಹೊಂದಿದ್ದರು.  ಪ್ರಧಾನಿ ಮೋದಿ ಅವರ ಈ ಐತಿಹಾಸಿಕ ಸಾಧನೆಗೆ ದೇಶದ ಗಣ್ಯರು, ಜಾಗತಿಕ ನಾಯಕರು ಹಾಗೂ ಕೋಟ್ಯಂತರ ನಾಗರಿಕರು ಸಾಮಾಜಿಕ ಜಾಲತಾಣವಾದ…

Read More

‘ಹಿಂದೂ ಧರ್ಮಕ್ಕೆ ಮತಾಂತರ ಆಗಿಲ್ಲ, ಹೆಸರು ಬದಲಿಸಿಲ್ಲ’; ಉರ್ಫಿ ಜಾವೇದ್ ಸ್ಪಷ್ಟನೆ – Kannada News | Uorfi Javed denies converting to Hinduism changing name to Rita Bhardwaj Fake News

ತಮ್ಮ ವಿಭಿನ್ನ ಫ್ಯಾಷನ್ ಸ್ಟೈಲ್ ಹಾಗೂ ಮುಕ್ತ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ, ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ (Uorfi Javed) ಬಗ್ಗೆ ಒಂದು ಗಾಸಿಪ್ ಹಬ್ಬಿತ್ತು. ಅವರು ಹಿಂದೂ ಧರ್ಮಕ್ಕೆ (Hinduism) ಮತಾಂತರವಾಗಿದ್ದಾರೆ ಹಾಗೂ ತಮ್ಮ ಹೆಸರನ್ನು ರೀತಾ ಭಾರದ್ವಾಜ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ವದಂತಿ ಹಬ್ಬಿಸಲಾಗಿತ್ತು. ಆದರೆ ಅದನ್ನು ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಈ ಕುರಿತು ಸುಳ್ಳು ಸುದ್ದಿ ಹರಡಿದ ಮಾಜಿ ಮಹಿಳಾ ಪತ್ರಕರ್ತೆಯೊಬ್ಬರ ವಿರುದ್ಧ ಉರ್ಫಿ ಜಾವೇದ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ….

Read More

ಬಿಗ್ ಬಾಸ್ ಮನೆಗೆ ಹೋಗಬೇಕಾ? ಆಡಿಷನ್ ವಿಡಿಯೋ ಮಾಡುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ – Kannada News

ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13ರ ಆಡಿಷನ್ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಈ ಬಾರಿ ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಗೆ ಹೋಗಲು ಕಲರ್ಸ್ ಕನ್ನಡ ವಾಹಿನಿ ಸುವರ್ಣಾವಕಾಶ ನೀಡಿದೆ. ಈಗಾಗಲೇ ಸಾವಿರಾರು ಜನ ತಮ್ಮ ಅದೃಷ್ಟ ಪರೀಕ್ಷಿಸಲು ಆಡಿಷನ್ ವಿಡಿಯೋಗಳನ್ನು ಸಿದ್ಧಪಡಿಸುತ್ತಿದ್ದಾರೆ. ಆದರೆ, ನೀವು ಮಾಡುವ ಒಂದು ಸಣ್ಣ ತಪ್ಪು ನಿಮ್ಮ ಬಿಗ್ ಬಾಸ್ ಕನಸನ್ನು ಭಂಗಗೊಳಿಸಬಹುದು! ನಿಮ್ಮ ಆಡಿಷನ್ ವಿಡಿಯೋ ರಿಜೆಕ್ಟ್ ಆಗಬಾರದು ಎಂದರೆ ವಿಡಿಯೋ ಮಾಡುವಾಗ…

Read More

ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಲಿರುವ ಆರ್​ಬಿಐ; ನಕಲಿ ಮಾಡಲು ಆಗದ ಈ ನೋಟುಗಳ ವಿಶೇಷತೆಯೇನು? – Kannada News | RBI to print polymer notes of Rs 10, Rs 20 face value

ನವದೆಹಲಿ, ಜುಲೈ 20: ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಗದದ ನೋಟುಗಳ ಬದಲಿಗೆ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಪರಿಚಯಿಸಲು ಪ್ರಾಯೋಗಿಕ ಯೋಜನೆಗೆ (Pilot Project) ಸಿದ್ಧತೆ ನಡೆಸುತ್ತಿದೆ. ಆರ್‌ಬಿಐನ ನೋಟು ಮುದ್ರಣ ಸಂಸ್ಥೆಯಾದ ‘ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್’ (BRBNMPL) ಗ್ಲೋಬಲ್ ಟೆಂಡರ್ (EOI) ಕರೆದಿದ್ದು, ಪ್ರಾಯೋಗಿಕವಾಗಿ ₹10 ಮತ್ತು ₹20 ಮುಖಬೆಲೆಯ ನೋಟುಗಳಿಗೆ ಪ್ಲಾಸ್ಟಿಕ್ ಹಾಳೆಗಳನ್ನು ಪೂರೈಸಲು ಜಾಗತಿಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಪ್ಲಾಸ್ಟಿಕ್ ನೋಟುಗಳ ವಿಶೇಷತೆಗಳೇನು? ದೀರ್ಘಾವಧಿ ಬಾಳಿಕೆ: ಕಾಗದದ…

Read More