Headlines

ಕಡಿಮೆ ವೆಚ್ಚದಲ್ಲಿ ವಿಶ್ವಪ್ರಸಿದ್ಧ ಜೋಗ ಜಲಪಾತ ಕಣ್ತುಂಬಿಕೊಳ್ಳಿ: ಪ್ರವಾಸಿಗರಿಗಾಗಿ KSTDC ಬಿಡುಗಡೆ ಮಾಡಿದೆ ಅತ್ಯಾಕರ್ಷಕ ಟೂರ್ ಪ್ಯಾಕೇಜ್ – Kannada News | Karnataka KSTDC Package: Explore Jog Falls and Sigandur Temple with LTC Option

ಬೆಂಗಳೂರು, ಜು.18: ವೀಕೆಂಡ್‌ನಲ್ಲಿ ಎಲ್ಲಾದರೂ ಸುಂದರ ಪ್ರಕೃತಿಯ ಮಡಿಲಿಗೆ ಸಾಗಬೇಕು, ಜೊತೆಗೆ ದೇವರ ದರ್ಶನ ಪಡೆಯಬೇಕು ಎಂದು ಯೋಜಿಸುತ್ತಿರುವ ಪ್ರವಾಸಿಗರಿಗೆ ಸುವರ್ಣಾವಕಾಶವೊಂದು ಇಲ್ಲಿದೆ ನೋಡಿ. ಭಾರತದ ಎರಡನೇ ಅತಿ ಎತ್ತರದ ಜಲಪಾತವಾದ ವಿಶ್ವಪ್ರಸಿದ್ಧ ಜೋಗ ಜಲಪಾತ (Jog Falls) ಹಾಗೂ ಶರಾವತಿಯ ಹಿನ್ನೀರಿನ ನಡುವೆ ಕಂಗೊಳಿಸುವ ಸಿಗಂದೂರು (Siganduru) ಕ್ಷೇತ್ರಕ್ಕೆ ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್​​ನ್ನು kstdc ಘೋಷಣೆ ಮಾಡಿದೆ. ಭೇಟಿ ನೀಡುವ ಪ್ರಮುಖ ಪ್ರವಾಸಿ ತಾಣಗಳು: ಜೋಗ ಜಲಪಾತ: ಶರಾವತಿ ನದಿಯು ಬರೋಬ್ಬರಿ 830 ಅಡಿ ಎತ್ತರದಿಂದ…

Read More

ಎಪ್​ಸ್ಟೀನ್ ಫೈಲ್ಸ್​​ನಲ್ಲಿ ನ್ಯೂಯಾರ್ಕ್​ ಮೇಯರ್ ಜೋಹ್ರಾನ್ ಮಮ್ದಾನಿ ತಾಯಿ ಹೆಸರು – Kannada News | Epstein Files Shockwave: Mira Nair, Elon Musk, Gates and Trump Names Emerge

ನ್ಯೂಯಾರ್ಕ್​, ಫೆಬ್ರವರಿ 02: ಅಮೆರಿಕದ ನ್ಯಾಯಾಂಗ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ಎಪ್​ಸ್ಟೀನ್​ ಫೈಲ್ಸ್‌(Epstein files) ನ ಹೊಸ ದಾಖಲೆಗಳು ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ವಿವಾದವನ್ನು ಹುಟ್ಟುಹಾಕಿವೆ. ಈ ದಾಖಲೆಗಳಲ್ಲಿ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಅವರ ತಾಯಿ ಮತ್ತು ಖ್ಯಾತ ಭಾರತೀಯ-ಅಮೆರಿಕನ್ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಹೆಸರು ಕೂಡ ಇದೆ. ಜೋಹ್ರಾನ್ ಬೆಂಬಲಿಗರು ಅವರ ಮನೆಯ ಗೇಟ್​​ನಲ್ಲಿ ನಿಂತು ವಿರುದ್ಧ ಘೋಷಣೆ ಕೂಗುವುದನ್ನು ಕಾಣಬಹುದು.  ಶುಕ್ರವಾರ, ಯುಎಸ್ ನ್ಯಾಯ ಇಲಾಖೆಯು ಶಿಕ್ಷೆಗೊಳಗಾದ ಲೈಂಗಿಕ…

Read More

‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’: ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

ಬೆಂಗಳೂರು, ಏಪ್ರಿಲ್ 13: ನಗರದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಜಿಬಿಎ (GBA) ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬೇಸತ್ತಿರುವ ಘಟನೆ ಗುರಪ್ಪನಪಾಳ್ಯ ವಾರ್ಡ್‌ನಲ್ಲಿ ಬೆಳಕಿಗೆ ಬಂದಿದೆ. ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ನಂ.171ರಲ್ಲಿ ವಾರಗಳಷ್ಟೇ ಅಲ್ಲ, ತಿಂಗಳುಗಳಾದರೂ ಕಸ ತೆರವುಗೊಳಿಸಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ರಸ್ತೆಗಳ ಬದಿಯಲ್ಲಿ ಕಸದ ರಾಶಿ ತುಂಬಿಕೊಂಡು ದುರ್ವಾಸನೆ ಬೀರುತ್ತಿದ್ದು, ಸ್ಥಳೀಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಸಮಾಜಸೇವಕ ಮಾಸ್ತಿ ಜಾಕಿರ್ ಅಲಿಯಿಂದ ಸಹಾಯ ಈ ಹಿನ್ನೆಲೆ ಸ್ಥಳೀಯ ನಿವಾಸಿಗಳು ಸ್ವತಃ…

Read More

ತಾಳ್ಮೆ ಕಳೆದುಕೊಂಡ ರಘುವಂಶಿಗೆ 4.28 ಲಕ್ಷ ರೂ. ದಂಡ! – Kannada News | IPL 2026: KKR’s Angkrish Raghuvanshi Fined

ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಉದಯೋನ್ಮುಖ ಬ್ಯಾಟರ್ ಅಂಗ್​ಕ್ರಿಶ್ ರಘುವಂಶಿ ಅವರಿಗೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಸಂಭಾವನೆಯಲ್ಲಿ ಶೇ. 20 ರಷ್ಟು ದಂಡ ವಿಧಿಸಲಾಗಿದೆ. ಇದರೊಂದಿಗೆ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ. ಏಪ್ರಿಲ್ 26 ರಂದು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಪಂದ್ಯದಲ್ಲಿ ಅಂಗ್​ಕ್ರಿಶ್ ರಘುವಂಶಿ ಅವರು ‘ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ’ (Obstructing the field) ಕಾರಣಕ್ಕಾಗಿ ಔಟ್ ಎಂದು ಘೋಷಿಸಲಾಯಿತು. ಅಂಪೈರ್ ತೀರ್ಪಿನಿಂದ ತೀವ್ರ…

Read More

LPG ಸಿಲಿಂಡರ್​​ ಸಮಸ್ಯೆಗೆ ತಲ್ಲಣಿಸಿದ ಹೋಟೆಲ್​ ಉದ್ಯಮ: ಐದೇ ದಿನಗಳಲ್ಲಿ 100 ಕೋಟಿಗೂ ಅಧಿಕ ನಷ್ಟ!

ಬೆಂಗಳೂರು, ಮಾರ್ಚ್​​ 15: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕದಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿದೆ. ಅದರಲ್ಲೂ ಹೋಟೆಲ್​​ ಉದ್ಯಮವಂತೂ ಇದರಿಂದ ಬಹಳ ಸಮಸ್ಯೆಗೆ ಸಿಲುಕಿದ್ದು, ಹಲವೆಡೆ ರೆಸ್ಟೋರೆಂಟ್​​ಗಳು ಬಂದ್​​ ಆಗಿದ್ದರೆ, ಇನ್ನು ಕೆಲ ಹೋಟೆಲ್​​ಗಳು ಮೆನುವಿನಿಲ್ಲಿ ಭಾರಿ ಕಡಿತ ಮಾಡಿ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ. ಇದೆಲ್ಲದರ ಪರಿಣಾಮ ಎಂಬಂತೆ ರಾಜ್ಯ ರಾಜಧಾನಿ ಬೆಂಗಳೂರೊಂದರಲ್ಲೇ ಕಳೆದ 5 ದಿನಗಳಲ್ಲಿ 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದ್ದು, ಹೋಟೆಲ್​​ಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟ್ಯಾಕ್ಸ್ ವಿನಾಯತಿಗೆ ಸರ್ಕಾರಕ್ಕೆ…

Read More

ಆ ಉಯ್ಯಾಲೆಯಲ್ಲಿ ನಾನೇ ಕೂತಿದ್ದು: ದೈವದ ಕಾರ್ಣಿಕದ ಬಗ್ಗೆ ಅಚ್ಚರಿಯ ಹೇಳಿಕೆ – Kannada News | From Collapse to Grandeur: The Resurgence of Pilichandi Daiva Temple in Mangaluru

ಮಂಗಳೂರು, ಫೆ.17: ಮಂಗಳೂರಿನ ಇತಿಹಾಸ ಪ್ರಸಿದ್ಧ ಪಿಲಿಚಂಡಿ ದೈವಸ್ಥಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿತ್ತು. ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಉಯ್ಯಾಲೆ ತನ್ನಿಂದ ತಾನೇ ತೂಗಿದೆ. ಇದೀಗ ಈ ದೇವಸ್ಥಾನದಲ್ಲಿ ಇಂತಹ ಹಲವು ಅಚ್ಚರಿಯ ಘಟನೆಗಳು ನಡೆದಿದೆ. ಒಂದು ಸಂದರ್ಭದಲ್ಲಿ, ಮಳೆಗಾಲದಲ್ಲಿ ದೈವದ ಆಶ್ರಯ ತಾಣವಾಗಿದ್ದ ಮನೆ ಕುಸಿಯುವ ಹಂತ ತಲುಪಿತ್ತು. ಆ ವೇಳೆ, ದೈವವನ್ನು ಹೊರಗೆ ತೆಗೆದುಕೊಂಡು ಹೋದ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಮನೆ ನೆಲಕ್ಕುರುಳಿತು. ಈ ಘಟನೆಯ ನಂತರ, ದೈವಿಕ ಮಾರ್ಗದರ್ಶನ ಪಡೆದಾಗ, ಈ…

Read More

IPL 2026: ಹೀಗಾದ್ರೆ ಮಾತ್ರ RCB vs CSK ಮತ್ತೆ ಮುಖಾಮುಖಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 11ನೇ ಪಂದ್ಯದಲ್ಲಿ ಬದ್ಧ ವೈರಿಗಳಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್  ತಂಡಗಳು ಮುಖಾಮುಖಿಯಾಗಿವೆ. ಇದಾಗ್ಯೂ ಉಭಯ ತಂಡಗಳು ಲೀಗ್​ ಹಂತದಲ್ಲಿ ಮತ್ತೆ ಎದುರು ಬದರಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಒಂದೇ ಗ್ರೂಪ್​ನಲ್ಲಿರುವುದು.ಈ ಬಾರಿಯ ಫಾರ್ಮ್ಯಾಟ್ ಪ್ರಕಾರ, ಒಂದು ತಂಡವು ತನ್ನದೇ ಗುಂಪಿನಲ್ಲಿರುವ ಉಳಿದ 4 ತಂಡಗಳ ವಿರುದ್ಧ ತಲಾ ಒಂದೇ ಒಂದು ಪಂದ್ಯವನ್ನು ಆಡಲಿದೆ….

Read More

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಗುಡುಗು ಸಹಿತ ಸಾಧಾರಣ ಮಳೆ; 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News | Bengaluru temperature: Heat wave alert in Bengaluru, light rain in few places of Karnataka

ರಾಜ್ಯದಲ್ಲಿ ಗುಡುಗು ಸಹಿತ ಸಾಧಾರಣ ಮಳೆ; 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಬೆಂಗಳೂರು, ಫೆಬ್ರವರಿ 27: ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ಕಡೆಗಳಲ್ಲಿ ಗುಡುಗು ಸಹಿತ (Weather Forecast) ಮಳೆಯಾಗಿರುವುದೂ ಕಂಡುಬಂದಿದೆ. ಇಂದೂ ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಲಘು ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆ 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ….

Read More

ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​​: ರಾಜೀವ್​ ಗೌಡ ಪರ ಸಚಿವ ಮುನಿಯಪ್ಪ ಬ್ಯಾಟಿಂಗ್​ – Kannada News | Shidlaghatta Banner Row: Minister Muniyappa Says Accused Rajeev Gowda Is a Quiet Person

ಬೆಂಗಳೂರು, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ‘ಕೈ’ ಮುಖಂಡನಿಂದ ನಿಂದನೆ ವಿಚಾರ ಸಂಬಂಧ ಆರೋಪಿ ರಾಜೀವ ಗೌಡ ಪರ ಸಚಿವ ಕೆ. ಹೆಚ್. ಮುನಿಯಪ್ಪ ಬ್ಯಾಟಿಂಗ್​​ ಮಾಡಿದ್ದಾರೆ. ರಾಜೀವ್ ಗೌಡ ಸೌಮ್ಯ ಸ್ವಭಾವದವರಾಗಿದ್ದು, ಕರೆದು ಆತನಿಗೆ ಬುದ್ಧಿ ಹೇಳುತ್ತೇನೆ. ರಾಜಕೀಯದಲ್ಲಿರುವ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿ ಇರುವವರಿಗೆ ಯಾರೂ ಹೀಗೆ ಮಾತನಾಡಬಾರದು ಎಂದಿದ್ದಾರೆ. ಅಲ್ಲದೆ ಶಿಡ್ಲಘಟ್ಟದಲ್ಲಿ ಜೆಡಿಎಸ್​ನವರು ಈ ಹಿಂದೆ ಬ್ಯಾನರ್ ಹಾಕಿದಾಗ ತೆಗೆಸಿಲ್ಲ, ಆದರೆ ಈಗ ತೆಗೆದಿದ್ದಾರೆ ಅಂತಾ ರಾಜೀವ್ ಹೇಳ್ತಿದ್ದಾರೆ. ಆ…

Read More

ಹಾವೇರಿ: ಧಗಧಗನೆ ಹೊತ್ತಿ ಉರಿದ ಕೆಎಸ್​ಆರ್​ಟಿಸಿ ಬಸ್, ಚಾಲಕನ ಸಮಯಪ್ರಜ್ಞೆಯಿಂದ 17 ಪ್ರಯಾಣಿಕರು ಜಸ್ಟ್ ಮಿಸ್ – Kannada News | Haveri Bus Fire Accident: 17 Passengers Escaped Narrowly as KSRTC Pallakki Bus Caught Fire Near Ranebennur

ಹಾವೇರಿ, ಮೇ 5: ಬೆಂಗಳೂರಿನಿಂದ ಗದಗಕ್ಕೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಬಸ್ ಹೊತ್ತಿ ಉರಿದ ಭೀಕರ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಈ ಪಲ್ಲಕ್ಕಿ ಬಸ್ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ದೇವರಗುಡ್ಡದ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಪಕ್ಕೀರಪ್ಪ, ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ…

Read More