Headlines

ಮಹಾರಾಷ್ಟ್ರದಲ್ಲಿ ಪಂಜಾಬ್ ಮಾಜಿ ಡಿಸಿಎಂ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ತಲ್ವಾರ್ ದಾಳಿ; ಆಸ್ಪತ್ರೆಗೆ ದಾಖಲು – Kannada News | Former Punjab Deputy CM Sukhbir Singh Badal Attacked In Nanded hospitalised

ನಾಂದೇಡ್, ಆಗಸ್ಟ್ 13: ಶಿರೋಮಣಿ ಅಕಾಲಿದಳದ (SAD) ಅಧ್ಯಕ್ಷ ಹಾಗೂ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ (Sukhbir Singh Badal) ಅವರ ಮೇಲೆ ಇಂದು (ಆಗಸ್ಟ್ 13) ಮಹಾರಾಷ್ಟ್ರದ ನಾಂದೇಡ್‌ನ ಗುರುದ್ವಾರವೊಂದರಲ್ಲಿ ದಿಢೀರ್ ದಾಳಿ ನಡೆದಿದೆ. ಇದರಿಂದ ಅವರು ಗಾಯಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ರಾಜ್ಯ ಸಚಿವರೂ ಆಗಿರುವ ಬಾದಲ್ ಅವರು ಮುದ್ಖೇಡ್ ತಾಲೂಕಿನ ಮುಗಾಟ್‌ನಲ್ಲಿರುವ ‘ಗುರುದ್ವಾರ ಮಾತಾ ಸಾಹಿಬ್ ದೇವಾಜಿ’ಗೆ ಭೇಟಿ…

Read More

ಆ 15ರಂದು ವಿಧಾನಸೌಧ ಮುಂದೆ ಫ್ರೀಡಂ ಹಬ್ಬ: ಈ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧ – Kannada News | Independence Day 2026: Vidhana Soudha Traffic Alert for August 15, Road Closures and Alternate Routes

ಬೆಂಗಳೂರು, ಆಗಸ್ಟ್​​ 13: ಸ್ವಾತಂತ್ರ್ಯ ದಿನಾಚರಣೆಯಂದು (Independence Day) ವಿಧಾನಸೌಧದ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ಕಾರ್ಯಕ್ರಮ ಆಯೋಜನೆಯಾಗಿದ್ದು, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಈ ಹಬ್ಬಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿರುವುದರಿಂದ ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ವಾಹನ ಸಂಚಾರ ಮಾರ್ಗಗಳನ್ನು (traffic diversions) ಮಾರ್ಪಾಡು ಮಾಡಿದ್ದಾರೆ. ಸಂಚಾರ ನಿರ್ಬಂಧ ಫ್ರೀಡಂ ಹಬ್ಬ ಕಾರ್ಯಕ್ರಮ ಹಿನ್ನೆಲೆ ಅಂಬೇಡ್ಕರ್ ರಸ್ತೆಯ ಮೂಲಕ ಕೆ.ಆರ್. ಸರ್ಕಲ್ ಕಡೆಗೆ ಹೋಗುವ ಹಾಗೂ…

Read More

Independence Day 2026: ಭಾರತದಂತೆಯೇ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳಿವು – Kannada News | These are the countries that celebrate Independence Day on August 15, like India

ಪ್ರತಿ ವರ್ಷ, ಭಾರತವು ಆಗಸ್ಟ್ 15 ರಂದು ತನ್ನ ಸ್ವಾತಂತ್ರ್ಯ ದಿನವನ್ನು (Independence Day) ಆಚರಿಸುತ್ತದೆ. 1947 ರ ಈ ದಿನ ನಮ್ಮ ದೇಶವು ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಿತು. ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಹೋರಾಟಗಳು ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿತು. ಹಾಗಾಗಿ ಈ ದಿನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ದಿನವಾಗಿದೆ. ಅಲ್ಲದೆ ಪ್ರತಿವರ್ಷವೂ ಸಾತಂತ್ರ್ಯ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಆಗಸ್ಟ್‌ 15 ರಂದು ಸ್ವಾತಂತ್ರ್ಯ…

Read More

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಭಾರತೀಯ ಮಜ್ದೂರ್ ಸಂಘ ಆಗ್ರಹ; ಆಗಸ್ಟ್ 17ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ – Kannada News | Bharatiya Mazdoor Sangh, the wokers wing of RSS, calls for nationwide demonstrations on August 17th

ಭಾರತೀಯ ಮಜ್ದೂರ್ ಸಂಘದ ವತಿಯಿಂದ ಎರಡು ವರ್ಷದ ಹಿಂದೆ ನಡೆದ ಕಾರ್ಮಿಕರ ಪ್ರತಿಭಟನೆಯ ಸಾಂದರ್ಭಿಕ ಚಿತ್ರImage Credit source: PTI ನವದೆಹಲಿ, ಆಗಸ್ಟ್ 13: ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ದೇಶಾದ್ಯಂತ ಆಗಸ್ಟ್ 17, ಸೋಮವಾರದಂದು ಬೃಹತ್ ಪ್ರತಿಭಟನೆ ನಡೆಸಲು ಆರೆಸ್ಸೆಸ್​ನ ಕಾರ್ಮಿಕ ವಿಭಾಗವಾದ ಭಾರತೀಯ ಮಜ್ದೂರ್ ಸಂಘ (BMS) ಕರೆ ನೀಡಿದೆ. ಬಿಎಂಎಸ್ ಕೇಂದ್ರ ಕಾರ್ಯಕಾರಿ ಸಮಿತಿ (KKS) ನಿರ್ಧಾರದಂತೆ, ದೇಶದ 28 ರಾಜ್ಯ ಘಟಕಗಳು ಹಾಗೂ 42 ಕೈಗಾರಿಕಾ…

Read More

‘ಹೌದು, ನಾನು ಔಟ್ ಆಗಿದ್ದೆ’; ಔಟೆಂದು ಗೊತ್ತಿದ್ದರೂ ಬ್ಯಾಟಿಂಗ್‌ ಮುಂದುವರೆಸಿದ ಸ್ಟೀವ್ ಸ್ಮೀತ್ – Kannada News | Steve Smith Confesses Bat Edge, UltraEdge Fails: Cricket’s Sportsmanship Debate Ignites

ಡಾರ್ವಿನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ (australia vs bangladesh) ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನದಂದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕೇವಲ 198 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ (steve smith) 109 ಎಸೆತಗಳಲ್ಲಿ 71 ರನ್ ಬಾರಿಸಿ ತಂಡವನ್ನು 150 ರನ್​ಗಳ ಗಡಿ ದಾಟಿಸಿದರು. ಇಲ್ಲದಿದ್ದರೆ ಆಸೀಸ್ ಪಡೆ 150 ರನ್​ಗಳನ್ನು ದಾಟುತ್ತಿರಲಿಲ್ಲ. ಆದರೆ ಪಂದ್ಯದ ಮೊದಲ ದಿನದಾಟ ಮುಗಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಟೀವ್ ಸ್ಮಿತ್…

Read More

‘ಜಂತರ್ ಮಂತರ್ ಪ್ರತಿಭಟನೆಯಲ್ಲಿ ಇದ್ದ ಬಹುತೇಕರು ಜೆನ್ ಜಿ ಅಲ್ಲ’ ಎಂದ ಕಂಗನಾ ರಣಾವತ್ – Kannada News | Kangana Ranaut clarifies Generation Gutter remark Shabana Azmi Jantar Mantar protest

ಪ್ರತಿಭಟನಾ ನಿರತರನ್ನು ‘ಜನರೇಷನ್ ಗಟರ್’ (Gen Gutter) ಎಂದು ಕರೆದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut), ಇದೀಗ ತಮ್ಮ ಹೇಳಿಕೆಗೆ ಮತ್ತೊಂದು ಸ್ಪಷ್ಟನೆ ನೀಡಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಬಗ್ಗೆ ಕಂಗನಾ ಅವರು ಮೊದಲಿನಿಂದಲೂ ಒಂದಲ್ಲಾ ಒಂದು ರೀತಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಈಗ ಅವರು ತಮ್ಮ ಮೊದಲಿನ ಹೇಳಿಕೆಗಳಿಗೆ ಸಮರ್ಥನೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ವಿಡಿಯೋ…

Read More

ಕರ್ನಾಟಕದಲ್ಲಿ ಗುಟ್ಕಾ-ತಂಬಾಕು ಬ್ಯಾನ್ ಗೆ ವಿರೋಧ:ಸಿಎಂ ಭೇಟಿಯಾದ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ – Kannada News | CBJP MLA Araga Jnanendra opposes to Karnataka Govt Ordered about gutkha And pan masala ban

ಬೆಂಗಳೂರು, (ಆಗಸ್ಟ್ 13): ಕರ್ನಾಟಕದಲ್ಲಿ ತಂಬಾಕು ಹೊಂದಿರುವ ಗುಟ್ಕಾ ಮತ್ತು ಪಾನ್‌ ಮಸಾಲಾ ಉತ್ಪನ್ನಗಳ ತಯಾರಿಕೆ, ಮಾರಾಟಕ್ಕೆ ನಿಷೇಧ (Gutkha, Pan masala Ban) ಹೇರಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಾರ್ವಜನಿಕರು ಸೇರಿ ಹಲವು ರಾಜಕಾರಣಿಗಳು ಸ್ವಾಗತಿಸಿದ್ದಾರೆ. ಆದರೆ, ಮತ್ತೊಂದೆಡೆ ಇದಕ್ಕೆ ಅಡಿಕೆ ಬೆಳೆಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ (Araga jnanendra) ನೇತೃತ್ವದ ನಿಯೋಗ ಇಂದು (ಆಗಸ್ಟ್ 13) ಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ ಬ್ಯಾನ್…

Read More

Renuka Swamy case: ಹೆಡ್​​ಫೋನ್ ಧರಿಸಿ ಬಂದ ಪವಿತ್ರಾ ಗೌಡ, ಜಡ್ಜ್ ತರಾಟೆ – Kannada News | Renuka Swamy case: Pavithra Gowda used Headphones during court trail

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ವಿಚಾರಣೆ ಭರದಿಂದ ಸಾಗಿದೆ. ಪ್ರತಿದಿನ ಮಹತ್ವದ ಸಾಕ್ಷಿಗಳ ವಿಚಾರಣೆ ಮಾಡುವ ಜೊತೆಗೆ, ಹೊಸ-ಹೊಸ ಅರ್ಜಿಗಳ ಕುರಿತಾಗಿಯೂ ವಿಚಾರಣೆ ನಡೆಯುತ್ತಿದೆ. ಆರೋಪಿಗಳೆಲ್ಲ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿದ್ದು, ವಿಚಾರಣೆ ವೇಳೆ ಪ್ರತಿಯೊಬ್ಬ ಆರೋಪಿಯೂ ತಾವಿರುವ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇಂದೂ ಸಹ ಎಲ್ಲರೂ ವಿಚಾರಣೆಗೆ ಹಾಜರಾಗಿದ್ದರು. ಆದರೆ ಪವಿತ್ರಾ ಗೌಡ ಮಾಡಿದ ಕಾರ್ಯಕ್ಕೆ ಜಡ್ಜ್ ಸಿಟ್ಟಾದರು. ಎಲ್ಲರೂ ಸಮಯಕ್ಕೆ ಸರಿಯಾಗಿ ವಿಚಾರಣೆಗೆ…

Read More

Vastu Tips: ಮನೆಯಲ್ಲಿ ಕನ್ನಡಿ ಎಲ್ಲಿರಬೇಕು? ವಾಸ್ತು ಪ್ರಕಾರ ಈ ಸಣ್ಣ ತಪ್ಪುಗಳೇ ದಾರಿದ್ರ್ಯಕ್ಕೆ ಕಾರಣ! – Kannada News | Vastu Tips for Mirror Placement: Attract Positive Energy and Wealth to Your Home

ಮನೆಯಲ್ಲಿ ಕನ್ನಡಿ ಎಲ್ಲಿರಬೇಕು?Image Credit source: Getty Images ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಇರುವುದು ಅತ್ಯಗತ್ಯ. ಬೆಳಿಗ್ಗೆ ಎದ್ದ ತಕ್ಷಣದಿಂದ ಹಿಡಿದು ಎಲ್ಲೇ ಹೊರಡುವಾಗಲೂ ಮುಖ ನೋಡಿಕೊಳ್ಳಲು ಕನ್ನಡಿ ಬೇಕೇ ಬೇಕು. ಆದರೆ, ಕನ್ನಡಿ ಕೇವಲ ಅಲಂಕಾರದ ಅಥವಾ ಪ್ರತಿಬಿಂಬ ನೋಡುವ ವಸ್ತುವಷ್ಟೇ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ? ವಾಸ್ತು ಶಾಸ್ತ್ರದ ಪ್ರಕಾರ, ಕನ್ನಡಿಯು ಮನೆಯ ಶಕ್ತಿ (Energy) ಮತ್ತು ಸಕಾರಾತ್ಮಕ ವಾತಾವರಣದ ಮೇಲೆ ನೇರ ಪರಿಣಾಮ ಬೀರುತ್ತದೆ. ಮನೆಯಲ್ಲಿ ಎಲ್ಲೆಂದರಲ್ಲಿ ಕನ್ನಡಿ ತೂಗಾಕುವುದರಿಂದ ವಾಸ್ತು ದೋಷ…

Read More

ವಿಕಾಸಸೌಧದ ಕ್ಯಾಂಟೀನ್ ಮೇಲೆ ಆಹಾರ ಇಲಾಖೆ ದಾಳಿ: ಜಿರಳೆ-ಫಂಗಸ್ ಪತ್ತೆ, ಕ್ಯಾಂಟೀನ್ ಸೀಜ್! – Kannada News | Vikas Soudha Canteen Sealed After Food Department Raid Finds Cockroaches, Fungus and Expired Items

ಬೆಂಗಳೂರು, ಆಗಸ್ಟ್​​ 13: ನಗರದಲ್ಲಿ ಕೆಲ ದಿನಗಳಿಂದ ಆಹಾರ ಇಲಾಖೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು ಇಂದು ವಿಕಾಸಸೌಧದ ಮೊದಲ ಮಹಡಿಯಲ್ಲಿರುವ ಕ್ಯಾಂಟೀನ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ತಟ್ಟೆಗಳನ್ನು ಶೇಖರಿಸಿಡುವ ಜಾಗದಲ್ಲಿ ಜಿರಳೆಗಳು ಮತ್ತು ಗ್ರಾಹಕರಿಗೆ ಆಹಾರ ನೀಡುವ ಅಡಕೆ ಪ್ಲೇಟ್‌ಗಳ ಮೇಲೆ ಫಂಗಸ್ ಪತ್ತೆಯಾಗಿದ್ದು, ಕ್ಯಾಂಟೀನ್ ಅನ್ನು ಸೀಜ್ ಮಾಡಲಾಗಿದೆ. ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಲೋಪ, ಸ್ವಚ್ಛತೆಯ ಕೊರತೆ, ಅವಧಿ ಮುಗಿದ ಪದಾರ್ಥಗಳ ಬಳಕೆ ಹಾಗೂ ನಿಯಮಿತವಾಗಿ ಪೆಸ್ಟ್ ಕಂಟ್ರೋಲ್ ಮಾಡದಿರುವುದು ಸೇರಿದಂತೆ ವಿವಿಧ…

Read More