ICC Rankings: ಐವರನ್ನು ಹಿಂದಿಕ್ಕಿ ಭರ್ಜರಿ ಮುಂಬಡ್ತಿ ಪಡೆದ ಸೂರ್ಯಕುಮಾರ್ – Kannada News | Suryakumar Yadav Soars to 7th in ICC T20 Rankings After Sensational NZ Series Performance
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ಗೆ ಐಸಿಸಿಯಿಂದ ಭರ್ಜರಿ ಬಹುಮಾನ ಸಿಕ್ಕಿದೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ20 ಶ್ರೇಯಾಂಕದಲ್ಲಿ ಐವರು ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿ ಏಳನೇ ಸ್ಥಾನಕ್ಕೇರಿದ್ದಾರೆ. ಕಳೆದ ಒಂದು ವರ್ಷದಿಂದ ಒಂದೇ ಒಂದು ಅರ್ಧಶತಕವನ್ನು ಬಾರಿಸಲಾಗದೆ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಸೂರ್ಯ, ಇದರ ಪರಿಣಾಮವಾಗಿ ಕಳೆದ ವಾರ ಟಾಪ್ 10 ರಿಂದ ಹೊರಬಿದ್ದಿದ್ದರು. ಆದರೆ ಈಗ ಮತ್ತೆ ಟಾಪ್ 10 ರೊಳಗೆ ಪ್ರವೇಶಿಸಿದ್ದು, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಟಿಮ್…