Headlines

ಜೂ.1ರಿಂದ ಆ. 31ರವರೆಗೆ ದಾಂಡೇಲಿಗೆ ನೋ ಎಂಟ್ರಿ; ಸ್ಕೂಬಾ ಡೈವಿಂಗ್, ರ್ಯಾಫ್ಟಿಂಗ್‌ಗೆ ಬ್ರೇಕ್ ಹಾಕಿದ ಉತ್ತರ ಕನ್ನಡ ಡಿಸಿ

ಕಾರವಾರ, ಮೇ.31 : ಮಳೆಗಾಲದ ಆರಂಭ ಹಾಗೂ ಸಮುದ್ರದಲ್ಲಿನ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಾಳೆಯಿಂದ (ಜೂನ್ 1) ಅನ್ವಯವಾಗುವಂತೆ ಮುಂದಿನ ಮೂರು ತಿಂಗಳ ಕಾಲ ಎಲ್ಲಾ ರೀತಿಯ ಜಲಸಾಹಸ ಕ್ರೀಡೆಗಳನ್ನು (Water Sports) ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮಳೆಗಾಲದಲ್ಲಿ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರಾಣ ರಕ್ಷಣೆಯ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಜೂನ್ 1 ರಿಂದ ಆಗಸ್ಟ್…

Read More

ತೆಲುಗು ಚಿತ್ರರಂಗವ ಕೊಂಡಾಡಿ, ದೀಪಿಕಾ ಪಡುಕೋಣೆಗೆ ಟಾಂಗ್ ಕೊಟ್ಟ ಜಾನ್ಹವಿ

ಜಾನ್ಹವಿ ಕಪೂರ್ (Janhvi Kapoor) ಬಾಲಿವುಡ್​​ನ ಜನಪ್ರಿಯ ಯುವನಟಿ. ದೊಡ್ಡ ಹಿಟ್ ಇಲ್ಲದೇ ಹೋದರು ಒಂದರ ಹಿಂದೊಂದು ಅವಕಾಶಗಳ ಬಾಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣದ ಚಿತ್ರರಂಗದಲ್ಲಿಯೂ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಜೂ ಎನ್​​ಟಿಆರ್ ಜೊತೆಗೆ ‘ದೇವರ’ ಸಿನಿಮಾನಲ್ಲಿ ನಟಿಸಿರುವ ಜಾನ್ಹವಿ ಇದೀಗ ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದಾರೆ. ‘ಪೆದ್ದಿ’ ಸಿನಿಮಾ ಪ್ರಚಾರದಲ್ಲಿರುವ ನಟಿ ಜಾನ್ಹವಿ ಕಪೂರ್, ಇದೀಗ ತೆಲುಗು ಚಿತ್ರರಂಗದಲ್ಲಿರುವ ವೃತ್ತಿಪರತೆ, ಸಮಯ ಪಾಲನೆ ಇನ್ನಿತರೆ ವಿಷಯಗಳನ್ನು ಕೊಂಡಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ದೀಪಿಕಾ ಪಡುಕೋಣೆಗೆ…

Read More

ಚಿಕ್ಕಬಳ್ಳಾಪುರ: ಸರಣಿ ಅಪಘಾತದಲ್ಲಿ ಐವರು ಸಾವು; 10ಕ್ಕೂ ಹೆಚ್ಚು ಜನರಿಗೆ ಗಾಯ

ಚಿಕ್ಕಬಳ್ಳಾಪುರ, ಮೇ 31: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸುಂಕಲಮ್ಮ ದೇವಸ್ಥಾನದ ಬಳಿ ಇಂದು ಭೀಕರ ಸರಣಿ ಅಪಘಾತ (Accident) ಸಂಭವಿಸಿದ್ದು, ಆಟೋದಲ್ಲಿದ್ದ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ದುರಂತದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಥಾರ್ ಕಾರು, ಆಟೋ ಮತ್ತು ಕ್ಯಾಂಟರ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ವೇಗವಾಗಿ ಬಂದ ಥಾರ್ ಕಾರು…

Read More

Vastu Tips: ಈ 3 ಗಿಡಗಳನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಈ 3 ಗಿಡಗಳನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿImage Credit source: Pinterest ಇತ್ತೀಚಿನ ದಿನಗಳಲ್ಲಿ ಸಭೆ-ಸಮಾರಂಭಗಳು, ಹುಟ್ಟುಹಬ್ಬ ಅಥವಾ ಗೃಹಪ್ರವೇಶದಂತಹ ಶುಭ ಸಂದರ್ಭಗಳಲ್ಲಿ ಸ್ನೇಹಿತರಿಗೆ ಮತ್ತು ಆಪ್ತರಿಗೆ ಸುಂದರವಾದ ಗಿಡಗಳನ್ನು ಉಡುಗೊರೆಯಾಗಿ (Green Gifting) ನೀಡುವುದು ಒಂದು ದೊಡ್ಡ ಟ್ರೆಂಡ್ ಆಗಿದೆ. ಗಿಡಗಳನ್ನು ನೀಡುವುದು ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಆದರೂ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡಗಳನ್ನು ಇತರರಿಗೆ ಗಿಫ್ಟ್ ಆಗಿ ನೀಡುವುದು ಅಥವಾ ಇತರರಿಂದ ಪಡೆದುಕೊಳ್ಳುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇಂತಹ…

Read More

ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ

ಕನ್ನಡ ಚಿತ್ರರಂಗದ ತಾರಾ ಜೋಡಿ ವಸಿಷ್ಠ ಸಿಂಹ (Vasishta Simha) ಮತ್ತು ಹರಿಪ್ರಿಯ. ಇತ್ತೀಚೆಗಷ್ಟೆ ಈ ದಂಪತಿಗೆ ಗಂಡು ಮಗು ಜನಿಸಿದೆ. ಇದೀಗ ಈ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಮಗು ಜನಿಸಿದ ಮೇಲೆ ಹರಕೆ ತೀರಿಸಲೆಂದು ದೇವಾಲಯಕ್ಕೆ ಈ ದಂಪತಿ ಭೇಟಿ ನೀಡಿದ್ದರು. ಕೃಷ್ಣ, ಮುಖ್ಯಪ್ರಾಣ ದರ್ಶನ ಪಡೆದ ವಸಿಷ್ಠ, ಹರಿಪ್ರಿಯ. ಪರ್ಯಾಯ ಶೀರೂರು ಶ್ರೀ ವೇದವರ್ಧನ ಯತಿಗಳ ಆಶೀರ್ವಾದ ಪಡೆದ ದಂಪತಿ. ಮಗನಿಗೆ ಕೃಷ್ಣ, ಮುಖ್ಯ ಪ್ರಾಣ ದರ್ಶನ ಮಾಡಿದರು. ಬಳಿಕ ಹರಕೆ…

Read More

ಮಗಳಿಗೆ ಮಂತ್ರಿಗಿರಿ ಸಿಗುತ್ತಾ?: ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ​​ ಕೆ.ಹೆಚ್. ಮುನಿಯಪ್ಪ

ಬೆಂಗಳೂರು, ಮೇ.31: ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಅವರು ತಮ್ಮ ಪುತ್ರಿಗೆ ಸಂಪುಟದಲ್ಲಿ ಸ್ಥಾನ ನೀಡುವ ವಿಚಾರವಾಗಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರು, “ಕೇಂದ್ರದಲ್ಲಿ 30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ನನಗೆ ಯಾವುದೇ ಡಿಫರೆನ್ಸ್ ಇಲ್ಲ. ಹೈಕಮಾಂಡ್ ಏನು ತೀರ್ಮಾನವನ್ನು ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ” ಎಂದು ಹೇಳಿದ್ದಾರೆ. ಇತ್ತೀಚೆಗೆ, ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಕೇಳಿದಾಗ, ಅವರು…

Read More

ಹೇಗಿದೆ ನೋಡಿ ಡಿ.ಕೆ. ಶಿವಕುಮಾರ್​​ ಅವರ ಕನಕಪುರದ ಭವ್ಯ ಬಂಗಲೆ!

ಬೆಂಗಳೂರು ದಕ್ಷಿಣ, ಮೇ 31: ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಜೂನ್ ಮೂರರಂದು ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ವಕ್ಷೇತ್ರವಾದ ಕನಕಪುರದಲ್ಲಿ ವ್ಯಾಪಕ ಸಂತಸ ಮನೆ ಮಾಡಿದೆ. ಕನಕಪುರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸವು ಕ್ಷೇತ್ರದ ರಾಜಕೀಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ. ಕನಕಪುರ ತಾಲೂಕಿನ ದೊಡ್ಡಹಾಲಹಳ್ಳಿ ಅವರ ಹುಟ್ಟೂರಾಗಿದ್ದರೂ, ಶಾಸಕರಾದ ನಂತರ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿ ಕನಕಪುರದಲ್ಲಿ ಒಂದು ಭವ್ಯವಾದ ಬಂಗಲೆಯನ್ನು ನಿರ್ಮಿಸಿದ್ದಾರೆ. ಕನಕಪುರಕ್ಕೆ ಭೇಟಿ ನೀಡಿದಾಗ, ಕುಟುಂಬ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿ…

Read More

ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​

ವಿಜಯಪುರ, ಮೇ 31: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​, ಸಿದ್ದರಾಮಯ್ಯರ ರಾಜಕೀಯ ಶೈಲಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವೈಯಕ್ತಿಕ ದ್ವೇಷದ ರಾಜಕಾರಣ ಮಾಡಿಲ್ಲ. ನನಗೂ ಅವರ ಬಗ್ಗೆ ಒಂದು ರೀತಿ ಗೌರವ ಇದೆ, ಏಕೆಂದರೆ ಅವರು ಹಿರಿಯ ನಾಯಕರು ಮತ್ತು ಹೆಚ್ಚು ಬಾರಿ ಮುಖ್ಯಮಂತ್ರಿಯಾದವರು. ವಿಧಾನಸಭೆಯಲ್ಲಿ ಎಷ್ಟೇ ಟೀಕೆ ಮತ್ತು ಜಗಳ ಮಾಡಿದರು, ಹೊರಗೆ ಬಂದ ಮೇಲೆ ಯಾರಿಗೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡುವಂತಹ ವ್ಯಕ್ತಿ ಸಿದ್ದರಾಮಯ್ಯ ಅಲ್ಲ….

Read More

CUET UG 2026: ತಾಂತ್ರಿಕ ಸಮಸ್ಯೆಯಿಂದ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದ NTA

ದೇಶಾದ್ಯಂತ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಶನಿವಾರ (ಮೇ 30) ನಡೆದ ಸಿಯುಇಟಿ-ಯುಜಿ (CUET-UG) ಪ್ರವೇಶ ಪರೀಕ್ಷೆಯ ವೇಳೆ ಕೆಲವು ಕೇಂದ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಇದರಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತೊಂದು ಅವಕಾಶವನ್ನು ಪ್ರಕಟಿಸಿದೆ. ಎನ್‌ಟಿಎ (NTA) ಸ್ಪಷ್ಟನೆ: ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ NTA, “ಇಂದಿನ ತಾಂತ್ರಿಕ ಅಡಚಣೆಯು ಕೆಲವು CUET (UG)ಅಭ್ಯರ್ಥಿಗಳಿಗೆ ತೊಂದರೆ ಉಂಟುಮಾಡಿದೆ. ಶನಿವಾರ (30.05.2026) ಮೊದಲ ಶಿಫ್ಟ್‌ನಲ್ಲಿ (Shift-I) ಪರೀಕ್ಷಾ…

Read More

BRO Recruitment 2026: ಐಟಿಐ, 10ನೇ ತರಗತಿ ಪಾಸ್ ಆದವರಿಗೆ ರಕ್ಷಣಾ ಇಲಾಖೆಯಲ್ಲಿ ಉದ್ಯೋಗ; 899 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಗಡಿ ರಸ್ತೆಗಳ ಸಂಸ್ಥೆಯು (Border Roads Organisation – BRO) ದೇಶಾದ್ಯಂತ ಅರ್ಹ ಪುರುಷ ಅಭ್ಯರ್ಥಿಗಳಿಂದ ವಿವಿಧ ತಾಂತ್ರಿಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಸಕ್ತ ಸಾಲಿನ ಈ ಬೃಹತ್ ನೇಮಕಾತಿಯ ಅಡಿಯಲ್ಲಿ ಒಟ್ಟು 899 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಭಾರತೀಯ ರಕ್ಷಣಾ ವಲಯದಲ್ಲಿ ಮತ್ತು ದೇಶದ ಗಡಿ ಭಾಗಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಬಯಸುವ ಯುವಕರಿಗೆ ಇದೊಂದು ಸುವರ್ಣ ಅವಕಾಶವಾಗಿದೆ….

Read More