ಬೆಂಗಳೂರಲ್ಲಿದ್ದ ಅಮೆರಿಕಾ ಮೂಲದ ದಂಪತಿ ಮನೆಯಲ್ಲಿ ಕಳ್ಳತನ: ರಾಯಭಾರ ಕಚೇರಿಯಿಂದಲೇ ಬಂತು ದೂರು! – Kannada News | US Couple’s Bangalore Home Robbed: Police Act on Embassy Complaint
ಬೆಂಗಳೂರು, ಜನವರಿ 28: ಅಪರೂಪದ ಪ್ರಸಂಗವೊಂದಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಿದೆ. ನಗರದಲ್ಲಿ ನಡೆದ ಕಳ್ಳತನ ಪ್ರಕರಣ ಸಮಬಂಧ ಅಮೆರಿಕಾ ರಾಯಭಾರ ಕಚೇರಿ ಮಧ್ಯಪ್ರವೇಶ ಮಾಡಿದ್ದು, ಎಂಬಸಿಯಿಂದಲೇ ನೇರವಾಗಿ ಡಿಜಿ, ಐಜಿಪಿಗೆ ದೂರು ಹೋಗಿದೆ. ಅಮೆರಿಕಾ ಮೂಲದ ದಂಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪಶ್ಚಿಮ ಬಂಗಾಳ ಮೂಲದ ಕೆಲಸಗಾರನೋರ್ವ ಮನೆಯಲ್ಲಿ ಕಳ್ಳತನ ನಡೆಸಿದ್ದು,ಈ ಬಗ್ಗೆ ರಾಯಭಾರ ಕಚೇರಿಗೆ ಅವರು ದೂರು ನೀಡಿದ್ದರು ಎನ್ನಲಾಗಿದೆ. ಸಾಫ್ಟ್ ವೇರ್ ಉದ್ಯೋಗಿಗಳಾಗಿದ್ದ ಪತ್ನಿ ಮೆರಿಯಲ್ ಮೊರೆನೋ, ಪತಿ…