ಫುಟ್ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್: ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ಬೇಡ – Kannada News | Minister Krishna Byregowda Issues Strict Warning: No Street Vending on Bengaluru Main Roads
ಬೆಂಗಳೂರು, ಜುಲೈ 3: ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತು ರಸ್ತೆ ಮೂಲಸೌಕರ್ಯ ಸುಧಾರಣೆ ಗಮನದಲ್ಲಿರಿಸಿಕೊಂಡು ಸಚಿವ ಕೃಷ್ಣ ಭೈರೇಗೌಡರು ಗುರುವಾರ ತಡರಾತ್ರಿ ಪರಿಶೀಲನೆ ನಡೆಸಿದರು. ರಸ್ತೆಗುಂಡಿಗಳು, ಚರಂಡಿಗಳ ಸ್ಥಿತಿ ಮತ್ತು ಫುಟ್‌ಪಾತ್‌ಗಳ ಅಕ್ರಮ ಒತ್ತುವರಿಯನ್ನು ಅವರು ಖುದ್ದು ಪರಿಶೀಲಿಸಿದರು. ಔಟರ್ ರಿಂಗ್ ರೋಡ್‌ನ ಲಾರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗಿನ ಪ್ರದೇಶಗಳಲ್ಲಿ ಸಚಿವರು ರೌಂಡ್ಸ್ ಹಾಕಿದರು. ಈ ಸಂದರ್ಭದಲ್ಲಿ, ರಸ್ತೆ ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ನೀಡದ ಮತ್ತು ಗೊಂದಲಮಯ ಹೇಳಿಕೆಗಳನ್ನು ನೀಡಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು….