Headlines

50 ವರ್ಷ ದಾಟಿದ ಮೇಲೆ ಈ 5 ಆಹಾರಗಳ ಸೇವನೆ ಮಾಡುವುದನ್ನು ಕಡಿಮೆ ಮಾಡಿ – Kannada News | Experts Reveal the Worst Foods to Avoid After Age 50

50 ವರ್ಷ ದಾಟಿದ ನಂತರ ದೇಹದಲ್ಲಿ ಹಲವು ಸ್ವಾಭಾವಿಕ ಬದಲಾವಣೆಗಳು ಆರಂಭವಾಗುತ್ತವೆ. ಚಯಾಪಚಯ ಕ್ರಿಯೆ (Metabolism) ನಿಧಾನಗೊಳ್ಳುವುದು, ಸ್ನಾಯುಗಳ ಬಲ ಕಡಿಮೆಯಾಗುವುದು, ಮೂಳೆ ಸಾಂದ್ರತೆ ಕಡಿಮೆಯಾಗುವುದು, ಹಾರ್ಮೋನ್ ಬದಲಾವಣೆಗಳು ಹಾಗೂ ರೋಗನಿರೋಧಕ ಶಕ್ತಿ ಕುಗ್ಗುವುದು ಸಾಮಾನ್ಯ. ಇಂತಹ ಕಾರಣದಿಂದ ಈ ವಯಸ್ಸಿನಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಅತ್ಯಂತ ಮುಖ್ಯ. ತಜ್ಞರ ಪ್ರಕಾರ, ಪೌಷ್ಟಿಕ ಆಹಾರ ಸೇವಿಸುವುದಷ್ಟೇ ಅಲ್ಲ, ಆರೋಗ್ಯಕ್ಕೆ ಹಾನಿ ಉಂಟುಮಾಡುವ ಕೆಲವು ಆಹಾರಗಳನ್ನು ಮಿತಿಗೊಳಿಸುವುದು ಅಥವಾ ಸಾಧ್ಯವಾದಷ್ಟು ದೂರವಿರುವುದು ಹೃದಯ, ಮಧುಮೇಹ, ರಕ್ತದೊತ್ತಡ ಹಾಗೂ…

Read More

ರಾಮನವಮಿ, ಅಯೋಧ್ಯೆಯಲ್ಲಿ ಬಾಲರಾಮನ ಹಣೆಗೆ ಸೂರ್ಯ ತಿಲಕ, ಕಣ್ತುಂಬಿಕೊಂಡ ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್​ 27: ಈ ವರ್ಷ, ಅಯೋಧ್ಯೆ(Ayodhya)ಯಲ್ಲಿ ರಾಮ ನವಮಿ ಕೇವಲ ಧಾರ್ಮಿಕ ಹಬ್ಬವಾಗಿರಲಿಲ್ಲ, ಜನರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವ ಕ್ಷಣವಾಗಿದೆ. ದೇವಾಲಯ ಸಂಕೀರ್ಣದಾದ್ಯಂತ ಜೈ ಶ್ರೀ ರಾಮ್ ಎಂಬ ಘೋಷಣೆಗಳು ಪ್ರತಿಧ್ವನಿಸುತ್ತಿದ್ದಂತೆ, ಬಾಲ ರಾಮನ ಹಣೆಗೆ ಸೂರ್ಯನ ರಶ್ಮಿ ತಿಲಕ ಇಟ್ಟಿತ್ತು. ಈ ಕ್ಷಣವನ್ನು ಪ್ರಧಾನಿ ಮೋದಿ ಕಣ್ತುಂಬಿಕೊಂಡರು. ಈ ಸಂಪೂರ್ಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ತಿಂಗಳುಗಳ ಸಂಶೋಧನೆ ಬೇಕಾಯಿತು. ಇದನ್ನು ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ) ಮತ್ತು ಬೆಂಗಳೂರಿನ ತಜ್ಞರು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದಾರೆ….

Read More

‘ಕರಾವಳಿ’ ಸಿನಿಮಾ ನೋಡಿ ಎಮೋಷನಲ್ ಪ್ರತಿಕ್ರಿಯೆ ನೀಡಿದ ಪ್ರೇಕ್ಷಕರು – Kannada News | Raj B Shetty starrer Karavali movie release Audience share their review

ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ಮಿತ್ರ ಮುಂತಾದವರು ನಟಿಸಿರುವ ‘ಕರಾವಳಿ’ (Karavali) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ಅವರು ನಿರ್ದೇಶನ ಮಾಡಿದ್ದಾರೆ. ಕಂಬಳ ಕುರಿತಾದ ಕಥೆ ಈ ಸಿನಿಮಾದಲ್ಲಿ ಇದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಎಮೋಷನಲ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳು ಮಾತನಾಡಿರುವ ಈ ವಿಡಿಯೋವನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ. ‘ಕಂಬಳದ ಅನುಭವ ಚೆನ್ನಾಗಿತ್ತು. ಮಹಾವೀರ ಮತ್ತು ಮಹಾಬಲ ಎಂಬ ಎರಡು ಪಾತ್ರಗಳ ಮೇಲೆ ಈ ಸಿನಿಮಾ ನಿಂತಿದೆ. ಆ ಪಾತ್ರಗಳನ್ನು ನೋಡಿ…

Read More

IPL 2026: ಲೀಗ್ ಹಂತದ ಅರ್ಧದಷ್ಟು ಪಂದ್ಯಗಳಿಗೆ ಧೋನಿ ಅಲಭ್ಯ

2026 ರ ಐಪಿಎಲ್​ಗೆ ಅದ್ಧೂರಿ ಆರಂಭ ಸಿಕ್ಕಿದೆ. ಮೊದಲ ಪಂದ್ಯವೇ ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಿದೆ. ಇದೆಲ್ಲದರ ನಡುವೆ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಐಕಾನ್ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಕಾಲಿನ ಗಾಯದಿಂದಾಗಿ ಪಂದ್ಯಾವಳಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಫ್ರಾಂಚೈಸಿಯ ಅಧಿಕೃತ ಹೇಳಿಕೆಯ ಪ್ರಕಾರ, ಧೋನಿ ಪುನರ್ವಸತಿಗೆ ಒಳಗಾಗುತ್ತಿದ್ದ್ದು, ಮೊದಲ ಎರಡು ವಾರಗಳವರೆಗೆ ಐಪಿಎಲ್​ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದರರ್ಥ ಧೋನಿ ಕನಿಷ್ಠ ಮೂರು ಪಂದ್ಯಗಳನ್ನು…

Read More

ಒಮಾನ್​ನಲ್ಲಿ ಅಮೆರಿಕದ ದಾಳಿಗೆ ಬಲಿಯಾಗಿದ್ದ ಇಬ್ಬರು ಭಾರತೀಯ ನಾವಿಕರ ಶವಗಳು ಭಾರತಕ್ಕೆ ರವಾನೆ – Kannada News | Bodies of 2 Indian sailors killed in Oman after US attack brought home

ನವದೆಹಲಿ, ಜೂನ್ 17: ಒಮಾನ್ ಕೊಲ್ಲಿಯಲ್ಲಿ ಎಂಟಿ ಸೆಟೆಬೆಲೊ ವ್ಯಾಪಾರಿ ಹಡಗಿನ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯ ನಾವಿಕರ ಶವಗಳನ್ನು ಭಾರತಕ್ಕೆ ತರಲಾಗಿದೆ. ಅಮೆರಿಕದ ದಾಳಿಗಳಲ್ಲಿ ಮೂವರು ಭಾರತೀಯರು ಸಾವನ್ನಪ್ಪಿದ್ದು, ರಾಜತಾಂತ್ರಿಕ ಕಳವಳಗಳನ್ನು ಹುಟ್ಟುಹಾಕಿದೆ ಮತ್ತು ಸಂಘರ್ಷ ವಲಯಗಳಲ್ಲಿ ನಾಗರಿಕ ಹಡಗುಗಳ ಸುರಕ್ಷತೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ ವಾರ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಗಲ್ಫ್ ಆಫ್ ಒಮಾನ್ ಸಮುದ್ರ ವಲಯದಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಸರಕು ಸಾಗಣೆ ಹಡಗೊಂದರ ಮೇಲೆ…

Read More

ಸುಶಾಂತ್ ಸಿಂಗ್ ರಜಪೂತ್ ಕೇಸ್ ಆಧಾರಿತ ‘ಸಾರಿ ಬಾಬು’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ – Kannada News | Sushant Singh Rajput case Film Sorry Babu First Look poster released Sujeet Singh Rathore

ಬಾಲಿವುಡ್ ಅಂಗಳದಿಂದ ಅತ್ಯಂತ ಇಂಟರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ನಿಗೂಢ ಸಾವು ಮತ್ತು ಅದರ ಸುತ್ತ ಮುಸುಕಿದ್ದ ವಿವಾದಗಳನ್ನಾಧರಿಸಿ ಈಗ ಕಮರ್ಷಿಯಲ್ ಸಿನಿಮಾವೊಂದು ತಯಾರಾಗುತ್ತಿದೆ. ಇಡೀ ದೇಶದ ಗಮನ ಸೆಳೆದಿದ್ದ ಆ ಒಂದು ನಿರ್ದಿಷ್ಟ ಪದವನ್ನೇ ಈ ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ. ಹೌದು, ಈ ಸಿನಿಮಾಗೆ ‘ಸಾರಿ ಬಾಬು’ (Sorry Babu) ಎಂದು ಹೆಸರಿಡಲಾಗಿದೆ. ಚಿತ್ರತಂಡವು ಈ ಸಿನಿಮಾದ ಮೊದಲ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಿದ್ದು,…

Read More

ಇಂಗ್ಲೆಂಡಿನ ಮಾಜಿ ಪ್ರಧಾನಿ ರಿಶಿ ಸುನಾಕ್ ಹೆಂಡತಿ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ?

ಬ್ರಿಟನ್ ಮಾಜಿ ಪ್ರಧಾನಮಂತ್ರಿ ರಿಶಿ ಸುನಾಕ್ ಪತ್ನಿ , ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅಚ್ಚು ಕಟ್ಟಾಗಿ ಕನ್ನಡ ಮಾತನಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅವರ ಈ ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ನಿಖಿಲ್ ಕಾಮತ್ ಪಾಡ್​ಕಾಸ್ಟ್​​ನಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಅಕ್ಷತಾ, ರಿಶಿ ಕಾಲೆಳೆದು ಮಸ್ತಿ ಮಾಡಿದ್ದಾರೆ. ರಿಶಿ ಬಗ್ಗೆ ಏನಾದ್ರೂ ಹೇಳಬಹುದಲ್ಲಾ? ಅರ್ಥ ಆಗಲ್ಲ ಅಲ್ವಾ? ಎಂದು ನಿಖಿಲ್ ಕಿಚಾಯಿಸಿದ್ದಕ್ಕೆ ‘ಗೊತ್ತಾಗಲ್ಲ ಅವರಿಗೆ’ ಎಂದ…

Read More

Horoscope Today 26 February​: ಅಡುಗೆಯ ನಂತರ ಆಹಾರವನ್ನು ಯಾವ ದಿಕ್ಕಿಗೆ ಇರಿಸಬೇಕು – Kannada News | Kitchen Vastu: Which Direction to Place Food After Cooking for Good Fortune?

ಅಡುಗೆಯ ನಂತರ ಆಹಾರವನ್ನು ಯಾವ ದಿಕ್ಕಿಗೆ ಇರಿಸಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ. ಅಡುಗೆಯು ಕೇವಲ ಶಕ್ತಿಯ ಮೂಲವಲ್ಲದೆ, ಜೀವ ಆಧಾರವೂ ಆಗಿದೆ. ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಬೇಕು. ಅಡುಗೆಮನೆಯು ಆಗ್ನೇಯ ಅಥವಾ ವಾಯುವ್ಯದಲ್ಲಿ ಇರಬಹುದು, ಆದರೆ ಯಾವಾಗಲೂ ಪೂರ್ವ ದಿಕ್ಕಿಗೆ ತಿರುಗಿ ಅಡುಗೆ ಮಾಡುವುದು ಉತ್ತಮ. ಅಡುಗೆ ಮುಗಿದ ನಂತರ, ಆಹಾರ ತುಂಬಿದ ಪಾತ್ರೆಗಳನ್ನು ಇರಿಸಲು ಸರಿಯಾದ ದಿಕ್ಕನ್ನು ಆಯ್ಕೆ ಮಾಡುವುದು ಮುಖ್ಯ. ಶಾಸ್ತ್ರಗಳ ಪ್ರಕಾರ, ಆಹಾರವನ್ನು…

Read More

Karnataka Weather Forecast: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​​; ಮಡಿಕೇರಿಯ ಬೆಂಗೂರಿನಲ್ಲಿ ದಾಖಲೆಯ ಮಳೆ – Kannada News | Karnataka Weather Forecast: Yellow Alert Issued for 7 Districts; Madikeri Records Heaviest Rainfall

ಬೆಂಗಳೂರು, ಜುಲೈ 08: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಅಬ್ಬರಿಸುತ್ತಿದ್ದ ವರುಣನ ಆರ್ಭಟ ಕಡಿಮೆಯಾಗುವ ಮುನ್ಸೂಚನೆ ಸಿಕ್ಕಿದೆ. ಜೂನ್​​ ತಿಂಗಳಿನಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಮಳೆಯಾಗಿಲ್ಲವಾಗಿತ್ತಾದರೂ ಜುಲೈ ಆರಂಭದಿಂದ ಹಲವೆಡೆ ಉತ್ತಮ ಮಳೆಯಾಗಿತ್ತು. ಆದರೆ ಜುಲೈ 2ನೇ ವಾರದಿಂದ ಮತ್ತೆ ಮುಂಗಾರು ಮಳೆಯ ಚಟುವಟಿಕೆಗಳು ಕ್ಷೀಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಕೇವಲ ಬೆರಳೆಣಿಕೆಯ ಜಿಲ್ಲೆಗಳಲ್ಲಿ ಮಾತ್ರ ನಾಳೆ (ಜುಲೈ 9)ರಂದು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. 7 ಜಿಲ್ಲೆಗಳಿಗೆ…

Read More

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಉಚಿತ ಸಮವಸ್ತ್ರವೇ ಹೊರೆ: ಬಟ್ಟೆಗಿಂತ ಹೊಲಿಗೆ ಕೂಲಿಯೇ ದುಪ್ಪಟ್ಟು! – Kannada News | Bengaluru Government School Parents Outraged as Uniform Stitching Charges Cost More Than Ready Made Clothes

ಬೆಂಗಳೂರು, ಜೂನ್ 30: ಕರ್ನಾಟಕದಲ್ಲಿ (Karnataka) ಈಗಾಗಲೇ ಶಾಲೆಗಳು ಶುರುವಾಗಿವೆ. ಆದರೆ, ಇತ್ತ ಶಾಲಾ ಶಿಕ್ಷಣ ಇಲಾಖೆ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಉಚಿತ ಸಮವಸ್ತ್ರ ನೀಡುವ ವಿಷಯದಲ್ಲಿ ಪೋಷಕರನ್ನು ಸಂಕಷ್ಟಕ್ಕೆ ತಳ್ಳಿದೆ. ರಾಜಧಾನಿ ಬೆಂಗಳೂರಿನ ಸರ್ಕಾರಿ ಶಾಲೆಗಳ ಪೋಷಕರು ‘ನಮಗೆ ಸರ್ಕಾರದ ಉಚಿತ ಸಮವಸ್ತ್ರದ ಬಟ್ಟೆಯೇ ಬೇಡ, ನಾವೇ ಸ್ವಂತ ಹಣದಲ್ಲಿ ಖರೀದಿ ಮಾಡುತ್ತೇವೆ’ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ, ಶಿಕ್ಷಣ ಇಲಾಖೆ ನೀಡುವ ಉಚಿತ ಬಟ್ಟೆಗಿಂತ ಅದರ ಹೊಲಿಗೆ ಕೂಲಿಯೇ ದುಪ್ಪಟ್ಟಾಗಿರುವುದು. ಇದು ಪೋಷಕರ…

Read More