ಪಾಕ್ ಉಗ್ರರ ಪ್ರೇಮಪಾಶಕ್ಕೆ ಬಿದ್ದ ಜೈಪುರ ಮಹಿಳೆ: ಜೈಶ್ ಸಂಘಟನೆ ಜೊತೆ ಸಂಪರ್ಕ, ಮದುವೆ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನ – Kannada News | Jaipur Woman Arrested: Jaish e Mohammed Online Radicalization and Conversion Plot Exposed
ಜೈಪುರ, ಜೂನ್ 23: ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕ ಸಂಘಟನೆ ‘ಜೈಶ್-ಎ-ಮೊಹಮ್ಮದ್’ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (ATS) ಜೈಪುರದಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಿದೆ. ಆನ್‌ಲೈನ್ ಮೂಲಕ ಭಾರತೀಯರನ್ನು ಸೆಳೆದು, ಮತಾಂತರ(Conversion)ಗೊಳಿಸಿ, ದೇಶವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುವ ಪಾಕಿಸ್ತಾನದ ದೊಡ್ಡ ಜಾಲವೊಂದು ಈ ಬಂಧನದಿಂದ ಬಯಲಾಗಿದೆ. ಬಂಧಿತ ಮಹಿಳೆಯನ್ನು ಬಬಿತಾ ಧಕಾಡ್ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಹೆಸರನ್ನು ‘ಖದೀಜಾ’ ಎಂದು ಬದಲಾಯಿಸಿಕೊಂಡಿದ್ದಳು. ಮೂಲತಃ ಗಂಗಾಪುರದವಳಾದ ಈಕೆ ಜೈಪುರದಲ್ಲಿ ಗೃಹಿಣಿಯಾಗಿದ್ದಳು. ಆಕೆಯ ಮೊಬೈಲ್ ಪರಿಶೀಲಿಸಿದಾಗ…