Headlines

ಟೀಮ್ ಇಂಡಿಯಾ ವಿರುದ್ಧ ‘ಬೆಥೆಲ್’ ಪ್ರಯೋಗ! – Kannada News | IND vs ENG: Jacob Bethell will open with Ben Duckett

ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಯಲ್ಲಿ 4-0 ಅಂತರದ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್ ತಂಡ, ಇದೀಗ ಏಕದಿನ ಸಮರಕ್ಕೆ ಸಜ್ಜಾಗಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಇಂದಿನಿಂದ (ಜುಲೈ 14) ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದ್ದು, ಈ ಪಂದ್ಯಕ್ಕಾಗಿ ಆತಿಥೇಯ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್​ ಪ್ರಕಟಿಸಿದೆ. ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಆರಂಭಿಕರಾಗಿ ಕಾಣಿಸಿಕೊಂಡಿರುವುದು ಯುವ ದಾಂಡಿಗ ಜೇಕಬ್ ಬೆಥೆಲ್ ಹಾಗೂ ಬೆನ್ ಡಕೆಟ್. ಅಂದರೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ಮೂಲಕ ಇಂಗ್ಲೆಂಡ್…

Read More

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬೇಕು: 40 ಓವರ್​ಗೆ ಗಿಲ್ ವಿರೋಧ! – Kannada News | IND vs ENG: Shubman Gill press conference Highlights

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಇಂದಿನಿಂದ (ಜು.14) ಶುರುವಾಗಲಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಈ ಸರಣಿಯ ಆರಂಭಕ್ಕೂ ಮುನ್ನ, ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಭವಿಷ್ಯದ ಬ್ಲೂಪ್ರಿಂಟ್ ಅನ್ನು ಬಹಿರಂಗಪಡಿಸಿದ್ದಾರೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ಈ ಇಬ್ಬರೂ ದಿಗ್ಗಜರು 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತದ ಪ್ರಮುಖ ಯೋಜನೆಗಳ ಭಾಗವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ವಿರಾಟ್ ಕೊಹ್ಲಿ ಜೊತೆಗಿನ ಚರ್ಚೆ! ಸುದ್ದಿಗೋಷ್ಠಿಯಲ್ಲಿ…

Read More

Ashadha Amavasya 2026: ಇಂದು ಆಷಾಢ ಅಮಾವಾಸ್ಯೆ; ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು? – Kannada News | Ashadha Amavasya 2026: Bhaumavati Yoga, Significance and Rituals for Prosperity

ಸನಾತನ ಧರ್ಮದಲ್ಲಿ ಪ್ರತಿ ತಿಂಗಳ ಅಮಾವಾಸ್ಯೆಗೂ ತನ್ನದೇ ಆದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮಹತ್ವವಿದೆ. ಆದರೆ, ಆಷಾಢ ಮಾಸದ ಅಮಾವಾಸ್ಯೆಯನ್ನು ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರ ಪರ್ವಕಾಲ ಎಂದು ಪರಿಗಣಿಸಲಾಗುತ್ತದೆ. ಈ ವರ್ಷ ಆಷಾಢ ಅಮಾವಾಸ್ಯೆಯು ಜುಲೈ 14 ರಂದು ಬಂದಿದ್ದು, ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಲ್ಲಿ ಅತ್ಯಂತ ಅಪರೂಪದ ಯೋಗವನ್ನು ಹೊತ್ತು ತಂದಿದೆ. ಈ ಪವಿತ್ರ ದಿನದ ಮಹತ್ವ, ಆಚರಣೆಗಳು ಮತ್ತು ಆಹಾರ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಭೌಮವತಿ ಅಮಾವಾಸ್ಯೆಯ ಅಪರೂಪದ ಕಾಕತಾಳೀಯ: ಅಮಾವಾಸ್ಯೆಯು ವಾರದ…

Read More

TV9 Kannada News Live: ರಾಜ್ಯಕ್ಕೆ ಮತ್ತೆ ವಾಪಸಾಯ್ತಾ ಮಹಾಮಾರಿ ಕೊರೊನಾ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 14 July 2026 Latest Updates on Politics, Weather, Rain, SIR, Cinema Online

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ Breaking News Today Live Updates in Kannada: ನೆರೆರಾಜ್ಯ ಆಂಧ್ರಪ್ರದೇಶದ ಕಡಪಾದಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾಗಿದ್ದು, ಕರ್ನಾಟಕದಲ್ಲೂ ಜುಲೈನಲ್ಲಿ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಸೋಂಕಿನ ಗಂಭೀರತೆ ಕಡಿಮೆ ಇದ್ದರೂ ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಭೀತಿ ಶುರುವಾಗಿದೆ. ಮಂಗಳೂರಿನ ಉರ್ವಾ ಸಮೀಪ ಪೊಲೀಸರು ಕಾರ್ಯಾಚರಣೆ ನಡೆಸಿ 11 ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇತ್ತ ಅಮೆರಿಕ ಅಧ್ಯಕ್ಷ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ…

Read More

‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ – Kannada News | Sri Muralis PARAAK Teaser Launch: Actor Addresses Film Concept

ನಟ ಶ್ರೀಮುರಳಿ ಅಭಿನಯದ ಬಹು ನಿರೀಕ್ಷಿತ ಪರಾಕ್ ಚಿತ್ರದ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಹಾಲೇಶ್ ಕೋಗುಂಡಿ ನಿರ್ದೇಶನದ ಈ ಚಿತ್ರವು ಕಮರ್ಷಿಯಲ್ ಅಂಶಗಳ ಜೊತೆಗೆ ವಿಭಿನ್ನ ಕಥಾವಸ್ತುವನ್ನು ಹೊಂದಿದೆ ಎಂದು ಶ್ರೀಮುರಳಿ ತಿಳಿಸಿದ್ದಾರೆ. ಇದು ಕಳೆದ ಎರಡೂವರೆ-ಮೂರು ವರ್ಷಗಳಿಂದ ಚರ್ಚೆಯಲ್ಲಿದ್ದ ಹೊಸ ಪರಿಕಲ್ಪನೆಯ ಸಿನಿಮಾ ಎಂದು ಅವರು ಹೇಳಿದರು. ಚಿತ್ರವು ಕಂಟೆಂಟ್-ಡ್ರಿವನ್ ಆಗಿದ್ದು, ಒಬ್ಬ ವ್ಯಕ್ತಿಯ ಹಿನ್ನೆಲೆ, ಘಟನೆಗಳು ಹಾಗೂ ನ್ಯಾಯದ ಕುರಿತು ಮಹತ್ವದ ವಿಚಾರಗಳನ್ನು ಒಳಗೊಂಡಿದೆ ಎಂದರು. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕ್ಷಿಪಣಿ ಅಬ್ಬರ: ಯುಎಇ ತೈಲ ನೌಕೆಗಳ ಮೇಲೆ ದಾಳಿ, ಓರ್ವ ಭಾರತೀಯ ಸಾವು – Kannada News | Iran Missile Attack in Hormuz: UAE Oil Tankers Hit, Indian Sailor Killed Amid US Blockade

ಟೆಹ್ರಾನ್, ಜುಲೈ 14: ಮಧ್ಯಪ್ರಾಚ್ಯದಲ್ಲಿ ಜಾಗತಿಕ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ಇರಾನ್ ತನ್ನ ಉಗ್ರ ಸ್ವರೂಪವನ್ನು ಪ್ರದರ್ಶಿಸುತ್ತಿದೆ. ಸೋಮವಾರ ರಾತ್ರಿ ಓಮನ್ ದೇಶದ ಕಡಲ ಗಡಿಯೊಳಗೆ ಚಲಿಸುತ್ತಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್​​ಗೆ ಸೇರಿದ ಎರಡು ಬೃಹತ್ ತೈಲ ಟ್ಯಾಂಕರ್ ಹಡಗುಗಳ ಮೇಲೆ ಇರಾನ್ ಸೇನೆ ಕ್ರೂಸ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರೆ ಎಂಟು ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ…

Read More

Karnataka Weather Forecast: ಮುಂಗಾರು ದುರ್ಬಲ, ಇಂದು-ನಾಳೆ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ – Kannada News | Karnataka Weather Forecast for 14 and 15 July 2026: IMD Predicts Light Rain and Strong Winds Across Several Districts

ಬೆಂಗಳೂರು, ಜುಲೈ 14: ಕರ್ನಾಟಕದಲ್ಲಿ ಮುಂಗಾರು (Monsoon Rain) ದುರ್ಬಲಗೊಂಡಿದ್ದು, ಮಳೆಯ ಅಬ್ಬರ ತಗ್ಗಿದೆ. ಆದಾಗ್ಯೂ, ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಜುಲೈ 14 ಹಾಗೂ 15 ರಂದು ಸಾಧಾರಣ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರ ಮುನ್ಸೂಚನೆ (Weather Forecast) ನೀಡಿದೆ. ಉತ್ತರ ಕರ್ನಾಟಕದಲ್ಲಿ ಮಳೆಯಾಗುತ್ತಾ? ಉತ್ತರ ಒಳನಾಡು ಕರ್ನಾಟಕದ ಬೆಳಗಾವಿ…

Read More

ಪರಭಾಷೆಯಲ್ಲಿ ಮಿಂಚಿ ತಾಯ್ನಾಡಿನಲ್ಲಿ ಸೋಲುತ್ತಿದ್ದಾರಾ ಸ್ಟಾರ್ ನಟ ಪೃಥ್ವಿರಾಜ್? – Kannada News | Prithviraj Sukumaran: Why His Malayalam Films Are Failing Despite Rajamouli Varanasi Hype

ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರರಂಗದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ಸದ್ಯ ಅವರು ಎಸ್‌ಎಸ್‌ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಸ್ವಂತ ಚಿತ್ರರಂಗದಲ್ಲಿ ಮಾತ್ರ ಅವರ ಮಾರುಕಟ್ಟೆ ಕೊಂಚ ಮಂಕಾದಂತೆ ಕಾಣುತ್ತಿದೆ. ಅವರ ಹೊಸ ಸಿನಿಮಾ ‘ಐ, ನೋಬಡಿ’ ಇತ್ತೀಚೆಗಷ್ಟೇ ತೆರೆಕಂಡಿದೆ. ಈ ಚಿತ್ರ ಬೇರೆ ಭಾಷೆಗೂ ಡಬ್ ಆಗಿ ಬಿಡುಗಡೆಯಾಗಿತ್ತು. ಆದರೆ ಡಬ್ ಆದ ಭಾಷೆಗಳಲ್ಲಿ ಸಿನಿಮಾ ಅಟ್ಟರ್ ಫ್ಲಾಪ್ ಹಾದಿಯಲ್ಲಿದೆ. ಮಲಯಾಳಂನಲ್ಲೂ ಕೂಡ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ…

Read More

ಹಗರಣದ ಬೆನ್ನಲ್ಲೇ ದೊಡ್ಡ ನಿರ್ಧಾರ: ರಾಮ ಮಂದಿರ ‘CEO’ ಹುದ್ದೆಗೆ ಅರ್ಜಿ ಆಹ್ವಾನಿಸಿದ ಟ್ರಸ್ಟ್ – Kannada News | Ram Mandir CEO: Ayodhya Trust Hires Chief for Transparency and Security Reforms

ಅಯೋಧ್ಯೆ, ಜುಲೈ 14: ಇತ್ತೀಚೆಗಷ್ಟೇ ರಾಮ ಮಂದಿರ(Ram Mandir)ದಲ್ಲಿ ಭಕ್ತರು ಅರ್ಪಿಸಿದ ಕೋಟ್ಯಂತರ ರೂಪಾಯಿ ದೇಣಿಗೆ ಹಣವನ್ನು ನೌಕರರೇ ವ್ಯವಸ್ಥಿತವಾಗಿ ಲೂಟಿ ಮಾಡಿದ ಘಟನೆ ಬಯಲಿಗೆ ಬಂದ ತಕ್ಷಣ ಎಚ್ಚೆತ್ತುಕೊಂಡ ರಾಮ ಜನ್ಮಭೂಮಿ ಟ್ರಸ್ಟ್​ ಮಂದಿರದ ಇಡೀ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಮುಂದಾಗಿದೆ. ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಟ್ರಸ್ಟ್​​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಟ್ರಸ್ಟ್​ ಅಧಿಕೃತ ಅಧಿಸೂಚನೆ ಹೊರಡಿಸಿದೆ. ವಿಶೇಷ ತನಿಖಾ ತಂಡ ಕಳ್ಳತನದ ತನಿಖೆ ನಡೆಸಿ ಈಗಾಗಲೇ…

Read More

ಯಾದಗಿರಿಯಲ್ಲಿ 16 ಸಾವಿರಕ್ಕೂ ಹೆಚ್ಚು ಗರ್ಭಧಾರಣೆಗಳ ಮುಂದಿನ ಮಾಹಿತಿಯೇ ಇಲ್ಲ! ತಜ್ಞರ ಸಮಿತಿ ವರದಿಯಲ್ಲಿ ಆಘಾತಕಾರಿ ಅಂಶ ಬಯಲು – Kannada News | Yadgir Pregnancy Tracking Gaps Raise Concern: Expert Panel Flags Missing Follow up in Over 16,000 Cases

ಯಾದಗಿರಿ ಜಿಲ್ಲಾಸ್ಪತ್ರೆ (ಸಾಂದರ್ಭಿಕ ಚಿತ್ರ)Image Credit source: tv9 ಯಾದಗಿರಿ, ಜುಲೈ 14: ಯಾದಗಿರಿ (Yadgir) ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 53,595 ಮಹಿಳೆಯರು ಗರ್ಭಧಾರಣೆ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ 35,424 ಮಹಿಳೆಯರಿಗೆ ಹೆರಿಗೆ ಆಗಿದ್ದು, 2,055 ಪ್ರಕರಣಗಳಲ್ಲಿ ಗರ್ಭಪಾತ ದಾಖಲಾಗಿದೆ. ಆದರೆ ಉಳಿದ 16,116 ಗರ್ಭಧಾರಣೆ ಪ್ರಕರಣಗಳ ಅಂತಿಮ ಫಲಿತಾಂಶ ಅಥವಾ ಮುಂದಿನ ಮಾಹಿತಿ ದಾಖಲೆಗಳಲ್ಲಿ ಲಭ್ಯವಾಗಿಲ್ಲ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಗರ್ಭಧಾರಣೆ ಮೇಲ್ವಿಚಾರಣೆ ಕುರಿತಂತೆ ಕೇಳಿಬಂದಿದ್ದ ಆರೋಪಗಳ…

Read More