Sanchaya Converter: ಕನ್ನಡಕ್ಕೆ ಬರುತ್ತಿದೆ ಹೊಸ ಫಾಂಟ್ ಕನ್ವರ್ಟರ್; ASCII ಇಂದ ಯೂನಿಕೋಡ್, ಯೂನಿಕೋಡ್ನಿಂದ ASCII ಗೆ ಸುಲಭವಾಗಿ ಪರಿವರ್ತಿಸಿ – Kannada News | Sanchaya Converter, new Kannada font converter for Unicode and ASCII texts
ಸಂಚಯ ಕನ್ವರ್ಟರ್Image Credit source: Screenshot @ converter.sanchaya.net ಬೆಂಗಳೂರು, ಜುಲೈ 23: ಕನ್ನಡದ ಮುದ್ರಣ ಕ್ಷೇತ್ರದ ದಶಕಗಳ ಸಮಸ್ಯೆಗೆ ಮತ್ತೊಂದು ಪರಿಹಾರ ಲಭ್ಯವಾಗುತ್ತಿದೆ. ಶ್ರೀಲಿಪಿ, ನುಡಿ, ಬರಹ ಇತ್ಯಾದಿ ಆಸ್ಕಿ (ASCII) ಫಾಂಟ್ಗಳಿಂದ ಯೂನಿಕೋಡ್ಗೆ ಪರಿವರ್ತಿಸಬಲ್ಲ, ಮತ್ತು ಯೂನಿಕೋಡ್ನಿಂದ ವಿವಿಧ ಆಸ್ಕಿ ಫಾಂಟ್ಗಳಿಗೆ ಪರಿವರ್ತಿಸಬಲ್ಲ ಸಮಗ್ರ ಕನ್ವರ್ಟರ್ವೊಂದನ್ನು ಕನ್ನಡದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಂಚಿ ಫೌಂಡೇಶನ್ನ ಸಂಚಯ ಸಂಸ್ಥೆಯು ಈ ಕನ್ವರ್ಟ್ ಅಭಿವೃದ್ಧಿಪಡಿಸುತ್ತಿರುವುದು. ಈಗಾಗಲೇ ಕನ್ನಡದಲ್ಲಿ ಕೆಲವು ಕನ್ವರ್ಟರ್ಗಳು ಲಭ್ಯ ಇದ್ದರೂ ಯಾವುದೂ ಕೂಡ ಸಮಗ್ರ ಫಾಂಟ್ ಪರಿವರ್ತನೆ…