37 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಈ ವರ್ಷ ಅಡ್ಮಿಷನೇ ಆಗಿಲ್ಲ! 57 ಕಾಲೇಜುಗಳಲ್ಲಿ ಒಂದಂಕಿ ದಾಖಲಾತಿ – Kannada News | 37 Karnataka Government PU Colleges Record Zero Admissions This Year
ಸರ್ಕಾರಿ ಕಾಲೇಜು (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಜುಲೈ 31: ಕರ್ನಾಟಕದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ (PU College) ಬಗ್ಗೆ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿರುವುದು ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 37 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಮತ್ತೊಂದೆಡೆ, 57 ಕಾಲೇಜುಗಳಲ್ಲಿ 1ರಿಂದ 10ರೊಳಗೆ, ಅಂದರೆ ಒಂದಂಕಿ ದಾಖಲಾತಿ ಮಾತ್ರ ವರದಿಯಾಗಿದೆ. ವಿದ್ಯಾರ್ಥಿಗಳನ್ನು ಸರ್ಕಾರಿ ಪಿಯು ಕಾಲೇಜುಗಳತ್ತ ಸೆಳೆಯುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ…