Headlines

International Friendship Day 2026: ಫ್ರೆಂಡ್‌ಶಿಪ್‌ ನಮ್ಮ ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ – Kannada News | International Friendship Day 2026: History of International Friendship Day and the benefits of friendship

ಅಂತಾರಾಷ್ಟ್ರೀಯ ಸ್ನೇಹ ದಿನImage Credit source: Getty Images ಸ್ನೇಹ (Friendship) ರಕ್ತ ಸಂಬಂಧಕ್ಕೂ ಮೀರಿದ ಬಂಧ. ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರು ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಒಳ್ಳೆಯ ಸ್ನೇಹಿತರು ಮುಖದಲ್ಲಿ ನಗುವನ್ನು ತರಿಸುವುದು ಮಾತ್ರವಲ್ಲ, ಜೀವನದಲ್ಲಿ ಸಕಾರಾತ್ಮಕವಾಗಿ ಮುಂದುವರೆಯಲು ಕೂಡ ಸಹಾಯ ಮಾಡುತ್ತಾರೆ. ಈ ಸ್ನೇಹ ಸಂಬಂಧದ ಮಹತ್ವವನ್ನು ಸಾರುವ ಹಾಗೂ ರಾಷ್ಟ್ರ ರಾಷ್ಟ್ರಗಳು, ಧರ್ಮಗಳು, ಸಂಸ್ಕೃತಿ, ಜನಾಂಗಗಳ ನಡುವೆಯೂ ಸ್ನೇಹ ಸಂಬಂಧ, ಸಾಮರಸ್ಯವನ್ನು ಬೆಸೆಯುವ ಉದ್ದೇಶದಿಂದ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು…

Read More

ಬೀದರ್: ಶಾಲೆ ಬಳಿ ಬೈಕ್​ನಲ್ಲಿ ಇಟ್ಟುಕೊಂಡು ಪಿಸ್ತೂಲ್ ಮಾರುತ್ತಿದ್ದ ಇಬ್ಬರ ಬಂಧನ – Kannada News | Bidar Police Bust Illegal Arms Racket: Two Maharashtra Men Arrested with Country Made Pistols Near School

ಬೀದರ್, ಜುಲೈ 16: ಬೀದರ್‌ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಶಾಲೆ ಬಳಿ ದೇಶೀ ನಿರ್ಮಿತ ಪಿಸ್ತೂಲ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮಹಾರಾಷ್ಟ್ರ ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಿಂದ ಐದು ಕಂಟ್ರಿ ಪಿಸ್ತೂಲ್‌ಗಳು, 26 ಜೀವಂತ ಗುಂಡುಗಳು, ಐದು ತಲ್ವಾರ್‌ಗಳು ಮತ್ತು ಅಪರಾಧ ಕೃತ್ಯಗಳಿಗೆ ಬಳಸುತ್ತಿದ್ದ ಒಂದು ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ತಂಡವು ಶಾಲೆ ಬಳಿ ಬೈಕ್‌ನಲ್ಲಿಟ್ಟುಕೊಂಡು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು…

Read More

ಗ್ಯಾರಂಟಿ ಚಕ್ಕರ್‌ನಲ್ಲಿ ಆರೋಗ್ಯ ಇಲಾಖೆ ಐಸಿಯುಗೆ! ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಗರಂ – Kannada News | R Ashoka Slams Congress Government Over Delayed Salary for Namma Clinic Staff

ಆರ್. ಅಶೋಕ ಬೆಂಗಳೂರು, ಜೂನ್ 27: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಕೀಯ ವಾಗ್ದಾಳಿ ತೀವ್ರಗೊಳಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashoka), ಆರೋಗ್ಯ ಇಲಾಖೆಯ ಅವ್ಯವಸ್ಥೆ ಹಾಗೂ ‘ನಮ್ಮ ಕ್ಲಿನಿಕ್’ ಸಿಬ್ಬಂದಿಯ ವೇತನ ವಿಳಂಬವನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ಆರೋಗ್ಯ ಇಲಾಖೆಯೇ ಇಂದು ಐಸಿಯು ತಲುಪಿದೆ ಎಂದು ಟೀಕಿಸಿದ್ದಾರೆ. ಆರೋಗ್ಯ ಇಲಾಖೆ ಸಂಪೂರ್ಣ ಐಸಿಯುನಲ್ಲಿದೆ: ಆರ್….

Read More

ನಾಪತ್ತೆಯಾಗಿದ್ದ ಕಾಂಗ್ರೆಸ್​​ ಮುಖಂಡ ಶವವಾಗಿ ಪತ್ತೆ: ನಡೀತಾ ಭೀಕರ ಕೊಲೆ?

ಚಿತ್ರದುರ್ಗ/ ಚಿಕ್ಕಮಗಳೂರು, ಏಪ್ರಿಲ್​​ 02: ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಂಗ್ರೆಸ್​ ಮುಖಂಡನ ಶವ ಪತ್ತೆಯಾಗಿದೆ. ಮೃತರನ್ನು ರಸಗೊಬ್ಬರ ಅಂಗಡಿ ನಡೆಸುತ್ತಿದ್ದ ‘ಕೈ’​ ಮುಖಂಡ ಶಿವಲಿಂಗಪ್ಪ (50) ಎಂದು ಗುರುತಿಸಲಾಗಿದ್ದು, ಮೂರು ದಿನಗಳ ಹಿಂದೆ ಇವರು ನಾಪತ್ತೆಯಾಗಿದ್ದರು. ಇಂದು ಅವರ ಮೃತದೇಹ ಮುಖದ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ನಡೆಸಿರುವ  ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆಗೆ ಸಂಬಂಧಿಕರಿಂದ ಆಗ್ರಹ ವ್ಯಕ್ತವಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….

Read More

Daily Devotional: ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ? – Kannada News | Which day is the best to do Fasting for spiritual benefits

ಯಾವ ದಿನ ಉಪವಾಸ ಮಾಡಿದರೆ ಏನು ಫಲ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಉಪವಾಸವು ಅನಾದಿ ಕಾಲದಿಂದಲೂ ಭಗವಂತನ ಕೃಪೆಗೆ ಪಾತ್ರವಾಗಲು ಇರುವ ಒಂದು ದೈಹಿಕ ಶಿಸ್ತು ಮತ್ತು ಭಕ್ತಿಯ ಮಾರ್ಗ. ಇದು ಕೇವಲ ಆಹಾರ ತ್ಯಾಗವಲ್ಲ, ಬದಲಿಗೆ ಉಪ ಎಂದರೆ ಸಮೀಪ ಮತ್ತು ವಾಸ ಎಂದರೆ ಜೀವಿಸುವುದು – ಅಂದರೆ ಭಗವಂತನ ಸನ್ನಿಧಿಯಲ್ಲಿ ಜೀವಿಸುವುದು. ನಮ್ಮ ಆಸೆ ಆಕಾಂಕ್ಷೆಗಳು, ವಿವಾಹ, ವಿದ್ಯಾಭ್ಯಾಸ, ಉದ್ಯೋಗ, ಮನೆ ನಿರ್ಮಾಣ, ಅಥವಾ ಗ್ರಹದೋಷ…

Read More

ತೀವ್ರಗೊಂಡ ಕುಡಿಯುವ ನೀರಿನ ಅಭಾವ: ಅನುದಾನ ಒದಗಿಸಲು ಹಣಕಾಸು ಇಲಾಖೆಗೆ ಸಿಎಂ ಸೂಚನೆ, ಡಿಸಿಗಳಿಗೂ ಖಡಕ್ ಎಚ್ಚರಿಕೆ – Kannada News | Karnataka Water Crisis: CM Siddaramaiah Warns DCs, Allocates Rs 419 Crore for Drinking Water Supply

ಬೆಂಗಳೂರು, ಏಪ್ರಿಲ್ 25: ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ರಣ ಬಿಸಿಲಿನ ಜೊತೆಗೆ ಕುಡಿಯುವ ನೀರಿನ (Drinking Water) ಸಮಸ್ಯೆ ಉಲ್ಬಣಿಸುತ್ತಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಜನರಿಗೆ ಕುಡಿಯುವ ನೀರಿನ ತೊಂದರೆಯಾದರೆ ಆಯಾ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಸಿಎಂ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕುಡಿಯುವ ನೀರಿನ ಪೂರೈಕೆಗಾಗಿ ಈಗಾಗಲೇ ಸರ್ಕಾರ 419.50 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಜಿಲ್ಲಾಧಿಕಾರಿಗಳ ವರದಿಯ ಆಧಾರದ ಮೇಲೆ ಹೆಚ್ಚುವರಿ ಅನುದಾನ ಒದಗಿಸಲು ಹಣಕಾಸು…

Read More

IND vs NZ: ಅಬ್ಬರ ಸಿಡಿಲಬ್ಬರ.. ಪಾಕೆಟ್ ಡೈನಮೋ ಸ್ಫೋಟಕ್ಕೆ ನುಚ್ಚುನೂರಾದ ಕಿವೀಸ್ – Kannada News | Ishan Kishan Smashes Fastest T20 Century vs NZ, Hits 29 Runs in Ish Sodhi Over

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಇಶಾನ್ ಕಿಶನ್ (Ishan Kishan) ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿದ ಕಿಶನ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಗಾಯದಿಂದಾಗಿ ಹಿಂದಿನ ಪಂದ್ಯದಿಂದ ಹೊರಗುಳಿದಿದ್ದ ಕಿಶನ್ ಸರಣಿಯ ಅಂತಿಮ ಪಂದ್ಯದಲ್ಲಿ ಕಿವೀಸ್ ಬೌಲರ್‌ಗಳನ್ನು ಹೈರಾಣಾಗಿಸಿದ್ದಾರೆ. ಸಂಜು ವಿಕೆಟ್ ಪತನದ ನಂತರ ಬಹುಬೇಗನೇ ಬ್ಯಾಟಿಂಗ್​ಗೆ ಬಂದ ಕಿಶನ್ ತಮ್ಮ…

Read More

‘ಟಾಕ್ಸಿಕ್’ ಟೀಸರ್ ನೋಡಿ ಅಚ್ಚರಿ ವ್ಯಕ್ತಪಡಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ – Kannada News | Sandeep Reddy Vanga praises Toxic Movie Teaser ft Yash

‘ರಾಕಿಂಗ್ ಸ್ಟಾರ್’ ಯಶ್ (Yash) ಹುಟ್ಟುಹಬ್ಬದ ಪ್ರಯುಕ್ತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಯಾವುದೇ ಸದ್ದು ಗದ್ದಲ ಇಲ್ಲದೇ ಟೀಸರ್ ಬಿಡುಗಡೆ ಮಾಡಲಾಯಿತು. ಬಿಡುಗಡೆ ಆದ ಈ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಶ್ ಅಭಿಮಾನಿಗಳು ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳು ಕೂಡ ‘ಟಾಕ್ಸಿಕ್’ ಟೀಸರ್ (Toxic Movie Teaser) ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’, ‘ಅನಿಮಲ್’ ಸಿನಿಮಾಗಳ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು…

Read More

ಡ್ರೀಮ್ ಕಾರು ರಿವೀಲ್ ಮಾಡಿದ ಪ್ರಿಯಾ ಸುದೀಪ್; ನೀವು ಊಹಿಸಲಿಕ್ಕೂ ಸಾಧ್ಯವಿಲ್ಲ – Kannada News | Priya Sudeep Reveals her Dream Car Mini Cooper

ಪ್ರಿಯಾ ಸುದೀಪ್ ಅವರು ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಒಡೆತನ ಹೊಂದಿದ್ದಾರೆ. ಸುದೀಪ್ ಅವರು ಬೆನ್ನು ತಟ್ಟಿದ್ದರಿಂದ ಈ ತಂಡದ ಮಾಲೀಕರಾಗಲು ಅವರು ಒಪ್ಪಿದರು. ಈ ತಂಡದ ಬಗ್ಗೆ ಮಾತನಾಡುವಾಗ ಅವರು ಕಾರುಗಳ ಬಗ್ಗೆ ಒಂದಷ್ಟು ವಿಷಯ ಹೇಳಿಕೊಂಡಿದ್ದಾರೆ. ತಮ್ಮ ಡ್ರೀಮ್ ಕಾರ್ ಬಗ್ಗೆಯೂ ಅವರು ಮಾಹಿತಿ ರಿವೀಲ್ ಮಾಡಿದ್ದಾರೆ. ಮಿನಿ ಕೂಪರ್ ಪ್ರಿಯಾ ಅವರ ಡ್ರೀಮ್ ಕಾರು. ಎಲೆಕ್ಟ್ರಿಕ್​ಗಿಂತ ಮ್ಯಾನ್ಯುವಲ್​ನ ಅವರು ಹೆಚ್ಚು ಇಷ್ಟಪಡುತ್ತಾರೆ. ಆಟೋಮ್ಯಾಟಿಕ್​​ಗಿಂತ ಮ್ಯಾನ್ಯುವೆಲ್ ಕಾರನ್ನು ಅವರು ಹೆಚ್ಚು ಇಷ್ಟಪಡುತ್ತಾರೆ. ಇನ್ನಷ್ಟು ಸಿನಿಮಾ…

Read More

‘ಟಾಕ್ಸಿಕ್’ ರನ್​​​ಟೈಮ್: ಒಂದು ಕಲ್ಲಿಗೆ ‘ಎರಡು’ ಹಕ್ಕಿ ಹೊಡೆದರೇ ಯಶ್? – Kannada News | Yash starrer Toxic Runtime leak, movie may release in sequel

ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಮೂರು ವಾರಗಳಷ್ಟೆ ಬಾಕಿ ಇದೆ. ಸಿನಿಮಾದ ಪ್ರೀ ರಿಲೀಸ್ ಸೇಲ್ಸ್ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾದ ಪಾತ್ರಗಳ ಪೋಸ್ಟರ್, ಅದ್ಧೂರಿ ಟೀಸರ್ ಎಲ್ಲವೂ ಬಿಡುಗಡೆ ಆಗಿವೆ. ಇದೀಗ ಯಶ್ ಮತ್ತು ಇತರೆ ತಾರಾಗಣ ಪ್ರಚಾರಕ್ಕೆ ಅಖಾಡಕ್ಕೆ ಇಳಿಯಬೇಕಿದೆ. ಚಿತ್ರತಂಡ, ಸಿನಿಮಾದ ಬಗ್ಗೆ ಅಧಿಕೃತವಾಗಿ ಹೆಚ್ಚಿನ ಮಾಹಿತಿಗಳನ್ನು ಬಿಟ್ಟುಕೊಡುತ್ತಿಲ್ಲ ಇದೇ ಕಾರಣಕ್ಕೆ ಸಿನಿಮಾದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಸಿನಿಮಾದ ರನ್​​ಟೈಮ್ ಜೊತೆಗೆ ಮತ್ತೊಂದು ಸುದ್ದಿಯೂ…

Read More