Headlines

ಅಭಿಮಾನಿಗಳಿಗೆ ಕಿಚ್ಚನ್ ಸರ್​​ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ – Kannada News

‘ಮಾರ್ಕ್’ ಸಿನಿಮಾದ  ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು (Kichcha Sudeep) ಚಿತ್ರರಂಗದಿಂದ ಕೊಂಚ ಬಿಡುವು ಪಡೆದುಕೊಂಡಿದ್ದರು. ಸುದೀಪ್ ಅವರ ಬ್ರೇಕ್‌ನಿಂದಾಗಿ, ಅವರ ಮುಂದಿನ ಸಿನಿಮಾಗಳು ಯಾವುವು? ಶೂಟಿಂಗ್ ಯಾವಾಗ ಆರಂಭವಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿರಂತರವಾಗಿ ಪ್ರಶ್ನೆ ಮಾಡುತ್ತಲೇ ಇದ್ದರು. ಈಗ ಸ್ವತಃ ಸುದೀಪ್ ಅವರೇ ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ಟ್ವಿಟರ್ (X) ಖಾತೆಯಲ್ಲಿ ಸುದೀರ್ಘ…

Read More

ಕರ್ನಾಟಕದಲ್ಲಿ ಜೂನ್​ನಲ್ಲೇ ಶೇ 41 ರಷ್ಟು ಮಳೆ ಕೊರತೆ: ಸೂಪರ್ ಎಲ್ ನಿನೋ ಭೀತಿ – Kannada News | Karnataka Faces 41 Percent Monsoon Deficit in June as Super El Nino Threat Looms Large

ಬೆಂಗಳೂರು, ಜೂನ್ 26: ಕರ್ನಾಟಕದಲ್ಲಿ ಈ ವರ್ಷದ ನೈಋತ್ಯ ಮುಂಗಾರು (Monsoon) ಆರಂಭದ ಮೊದಲ ತಿಂಗಳಿನಲ್ಲೇ ತೀವ್ರ ಆಘಾತ ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಹವಾಮಾನ ತಜ್ಞರು ಇದನ್ನು ‘ವಿಫಲ ಮುಂಗಾರು’ ಎಂದು ಘೋಷಿಸಿದ್ದಾರೆ. ಜೂನ್ ತಿಂಗಳಿನಲ್ಲಿ ಇಡೀ ಕರ್ನಾಟಕದಲ್ಲಿ ಸರಾಸರಿ ಶೇ 41 ರಷ್ಟು ಮಳೆ ಕೊರತೆ ಕಂಡುಬಂದಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ನಿರೀಕ್ಷಿತ ಪ್ರಮಾಣದ ಪೂರಕ ವಾತಾವರಣ (Weather Systems) ರೂಪುಗೊಳ್ಳದ ಕಾರಣ ಮುಂಗಾರು ಮಾರುತಗಳು ತೀರಾ ದುರ್ಬಲಗೊಂಡಿದ್ದು,…

Read More

ಕದನ ವಿರಾಮ ಘೋಷಿಸಿ ಅಮೆರಿಕ, ಇರಾನ್ ಹೇಳಿದ್ದೇನು? ಇಲ್ಲಿದೆ ಪೂರ್ಣ ವಿವರ

ವಾಷಿಂಗ್ಟನ್/ಟೆಹ್ರಾನ್, ಏಪ್ರಿಲ್ 8: ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಣಭೀಕರ ದಾಳಿಯ ಡೆಡ್​​ಲೈನ್ ಮುಗಿದಿದೆ. ಅಷ್ಟರಲ್ಲಿ ಅಮೆರಿಕ, ಇರಾನ್ 2 ವಾರಗಳ ಕದನ ವಿರಾಮ ಘೋಷಣೆ (US Iran Ceasefire) ಒಪ್ಪಂದಕ್ಕೆ ಬಂದಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಇರಾನ್ ಮೇಲೆ ಅಮೆರಿಕದ ಫೈಟರ್ ಜೆಟ್‌ಗಳು ದಾಳಿ ಮಾಡಬೇಕಿತ್ತು, ಅಷ್ಟರಲ್ಲಿ ತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ. ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ದಾಳಿ ಎರಡು…

Read More

ರಾಜನಂತೆ ನಡೆಸಿಕೊಳ್ಳುತ್ತೇವೆ; ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್​ಗೆ ಬಿಜೆಪಿ ರೆಡ್ ಕಾರ್ಪೆಟ್ ಹಾಸುತ್ತಿರುವುದೇಕೆ? – Kannada News | Will Treat Him Like Royalty Why BJP Suddenly Praising Congress Leader Digvijaya Singh

ನವದೆಹಲಿ, ಜುಲೈ 3: ‘ಇಬ್ಬರ ಜಗಳ ಮೂರನೆಯವರಿಗೆ ಲಾಭ’ ಎಂಬ ಮಾತೊಂದಿದೆ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಜಗಳದಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ದಶಕಗಳಿಂದ ಬಿಜೆಪಿಯ ಪ್ರಮುಖ ರಾಜಕೀಯ ಟಾರ್ಗೆಟ್ ಆಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ (Digvijay Singh) ಅವರನ್ನು ಇದೀಗ ಮಧ್ಯಪ್ರದೇಶ ಬಿಜೆಪಿ ನಾಯಕರು ಕೊಂಡಾಡುತ್ತಿದ್ದಾರೆ. ಸ್ವಪಕ್ಷದ ವಿರುದ್ಧವೇ ಹೇಳಿಕೆ ನೀಡಿ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಿರುವ ದಿಗ್ವಿಜಯ್ ಸಿಂಗ್ ಅವರಿಗೆ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿಯೇ ಪಕ್ಷಕ್ಕೆ ಆಹ್ವಾನ ನೀಡಿದ್ದು,…

Read More

ಹೊಸ ಪ್ರೇಯಸಿಗಾಗಿ 10 ಕೋಟಿ ಬೆಲೆಯ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ

2026 ರ ಟಿ20 ವಿಶ್ವಕಪ್ ಗೆದ್ದು, ಪ್ರಸ್ತುತ ವಿಶ್ರಾಂತಿ ಮೂಡ್​ನಲ್ಲಿರುವ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿಯೊಂದಿಗೆ ಹೊಸ ಕಾರನ್ನು ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹೊಸ ಕಾರಿನ ಬೆಲೆ 10 ಕೋಟಿ ಗೂ. ಅಧಿಕ ಎಂದು ವರದಿಯಾಗಿದೆ. ಹಾರ್ದಿಕ್ ಪಾಂಡ್ಯ ಫೆರಾರಿ 12 ಸಿಲಿಂಡ್ರಿ ಎಂಬ ಐಷಾರಾಮಿ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಭಾರತದಲ್ಲಿ ಇದರ…

Read More

ಸುಳ್ಳು ಕೇಸ್​​, ಸುದೀರ್ಘ ಹೋರಾಟ: ಸರ್ಕಾರಿ ನೌಕರಿಯಲ್ಲಿದ್ದ ಮಹಿಳೆಗೆ ಬಾಕಿ ಭತ್ಯೆ ಸಿಕ್ಕಿದ್ದು ಸತ್ತು 3 ವರ್ಷಗಳ ಬಳಿಕ! – Kannada News | Mysuru Govt Officer Malinis 200 Bribery Case: Justice After 17 Years; Pending Salary Released 3 Years After Her Death

ಮೈಸೂರು, ಫೆಬ್ರವರಿ 16: ತಮ್ಮದಲ್ಲದ ತಪ್ಪಿಗೆ, ತಾವು ಮಾಡದ 200 ರೂ. ಲಂಚದ ಆರೋಪದಿಂದ 17 ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡಿದ ಮೈಸೂರಿನ ಪ್ರಾಮಾಣಿಕ ಮಹಿಳಾ ಸರ್ಕಾರಿ ಅಧಿಕಾರಿ ಮಾಲಿನಿ ಪ್ರಕರಣ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಲೋಕಾಯುಕ್ತ ಮಾಡಿದ ಲಂಚದ ಆರೋಪದಿಂದಾಗಿ ಅಮಾನತು, ಉದ್ಯೋಗ ಕಳೆದುಕೊಳ್ಳುವಿಕೆ, ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ಸಂಕಷ್ಟಗಳನ್ನು ಅನುಭವಿಸಿದ ಬಳಿಕ ಹಲವು ವರ್ಷಗಳ ನಂತರ ನ್ಯಾಯಾಲಯದಿಂದ ನಿರಪರಾಧಿ ಎಂದು ಘೋಷಿಸಲ್ಪಟ್ಟರೂ ಅವರ ಬದುಕಿಗೆ ಆಗಿದ್ದ ಗಂಭೀರ ಹಾನಿಗೆ ಮಾತ್ರ ನ್ಯಾಯ…

Read More

ಕೇರಳದವರಾದರೂ ಚೆನ್ನೈನಲ್ಲಿ ವೋಟ್ ಮಾಡಿದ್ದೇಕೆ ದುಲ್ಖರ್ ಸಲ್ಮಾನ್? ಶುರುವಾಗಿದೆ ಚರ್ಚೆ – Kannada News | Dulquer Salmaan Votes in Tamil Nadu Elections: Chennai Residency Sparks Debate

ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 24ರಂದು ನಡೆದಿದೆ. ರಾಜ್ಯದಲ್ಲಿ ಶೇ.85 ಮತದಾನ ಆಗಿದೆ. ಇದು ತಮಿಳು ನಾಡು ಇತಿಹಾಸದಲ್ಲೇ ದಾಖಲೆಯ ಮತದಾನ ಎನಿಸಿಕೊಂಡಿದೆ. ಕಾಲಿವುಡ್​​ನ ಅನೇಕ ಸೆಲೆಬ್ರಿಟಿಗಳು ವೋಟ್ ಮಾಡಿದ್ದಾರೆ. ಈ ಮಧ್ಯೆ ಮಲಯಾಳಂ ನಟ ದುಲ್ಖರ್ ಸಲ್ಮಾನ್ (Dulquer Salmaan) ಮತ ಚಲಾಯಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಮಲಯಾಳಿಯಾದ ದುಲ್ಖರ್ ತಮಿಳುನಾಡು ಚುನಾವಣೆಯಲ್ಲಿ ಹೇಗೆ ಮತ ಚಲಾಯಿಸಿದರು ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಮತದಾನ ನಡೆಯಿತು. ಆ ಸಂದರ್ಭದಲ್ಲಿ ಕೊಚ್ಚಿಯಲ್ಲಿ ಅನೇಕ…

Read More

ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಭೀತಿ: ದೊಡ್ಡತಪ್ಲು ಬಳಿ ಮುಗಿಯದ ಕಾಮಗಾರಿ, ಪ್ರವಾಸಿಗರಿಗೆ ತಾಲೂಕು ಆಡಳಿತದ ಎಚ್ಚರಿಕೆ – Kannada News | Shiradi Ghat Landslide Threat: Sakaleshpur District Administration Issues High Alert, Restricts Tourist Entry to Waterfalls

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಜರಿದು ರಸ್ತೆಗೆ ಮಣ್ಣು ಬಿದ್ದಿರುವುದುImage Credit source: tv9 ಹಾಸನ, ಜುಲೈ 8: ಹಾಸನ (Hassan) ಜಿಲ್ಲೆಯ ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆಯ (Monsoon Rain) ಅಬ್ಬರ ತೀವ್ರಗೊಂಡಿದೆ. ಇದರ ಪರಿಣಾಮವಾಗಿ ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ (NH-75) ಶಿರಾಡಿ ಘಾಟ್‌ನ ಹಲವೆಡೆ ಗುಡ್ಡ ಕುಸಿಯುವ ಭೀತಿ ಆವರಿಸಿದೆ. ಈ ಹಿಂದೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿ ವಾಹನ ಸಂಚಾರ ಸ್ಥಗಿತಕ್ಕೆ ಕಾರಣವಾಗಿದ್ದ ದೊಡ್ಡತಪ್ಲು (ಸಕಲೇಶಪುರದಿಂದ ಮಂಗಳೂರು…

Read More

WPL 2026: ಗುಜರಾತ್ ಕನಸು ಭಗ್ನ; ಸತತ 4ನೇ ಬಾರಿಗೆ ಫೈನಲ್​ಗೇರಿದ ಡೆಲ್ಲಿ – Kannada News | WPL 2026 Eliminator: Delhi Capitals Beat Gujarat Giants, Secure Final Berth

2026 ರ ಮಹಿಳಾ ಪ್ರೀಮಿಯರ್ ಲೀಗ್​ನ ಎಲಿಮಿನೇಟರ್ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆಯಿತು. ಎರಡೂ ತಂಡಗಳು ಇದುವರೆಗೆ ಪ್ರಶಸ್ತಿ ಗೆಲ್ಲದ ಕಾರಣ ಯಾವ ತಂಡ ಫೈನಲ್​ಗೇರಲಿದೆ ಎಂಬುದು ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಡೆಲ್ಲಿ ತಂಡ ಗುಜರಾತ್​ ತಂಡದ ಮೊದಲ ಫೈನಲ್ ಕನಸನ್ನು ಭಗ್ನಗೊಳಿಸಿ ಸತತ ನಾಲ್ಕನೇ ಬಾರಿಗೆ ಫೈನಲ್​ಗೆ ಟಿಕೆಟ್ ಪಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 167 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ…

Read More

ಗೀತು ಮೋಹನ್​ದಾಸ್ ‘ಟಾಕ್ಸಿಕ್’ ಚಿತ್ರಿಸಿದ್ದಾರೆ ಅಂತ ನಂಬೋಕೆ ಆಗಲ್ಲ: ಆರ್​ಜಿವಿ ನೇರ ಮಾತು – Kannada News | Ram Gopal Varma can not believe Geethu Mohandas shot Toxic teaser ft Yash

ಟೀಸರ್ ರಿಲೀಸ್ ಆದ ಬಳಿಕ ‘ಟಾಕ್ಸಿಕ್’ (Toxic) ಸಿನಿಮಾದ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ಯಶ್ ಅವರು ಈ ಸಿನಿಮಾದಲ್ಲಿ ತುಂಬಾ ರಗಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ನಿರ್ದೇಶಕರು ಕೂಡ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್, ಸಂದೀಪ್ ರೆಡ್ಡಿ ವಂಗಾ ಮುಂತಾದವರು ಭೇಷ್ ಎಂದಿದ್ದಾರೆ. ಅದೇ ರೀತಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ…

Read More