Headlines

ಮಂಗಳೂರಿಗೆ ಮತ್ತೊಂದು ಗುಡ್​​​ ನ್ಯೂಸ್​​ ನೀಡಿದ ಕೇಂದ್ರ: ಬರಲಿದೆ ಹೊಸ ಎಕ್ಸ್‌ಪ್ರೆಸ್ ರೈಲು, ಸಮಯ, ನಿಲ್ದಾಣಗಳ ಪಟ್ಟಿ ಇಲ್ಲಿದೆ – Kannada News | Amrit Bharat Express: Mangaluru to Nagercoil Weekly Train Service Details

ಮಂಗಳೂರು, ಜ.23: ಮಂಗಳೂರಿನ ಜನರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ ಕೇಂದ್ರ ಸರ್ಕಾರ, ನಾಗರಕೋಯಿಲ್ ಮತ್ತು ಮಂಗಳೂರು ನಡುವಿನ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು (Amrit Bharat Express) ಶೀಘ್ರದಲ್ಲೇ ಆರಂಭವಾಗಲಿದೆ. ಈ ಹೊಸ ರೈಲು ತಮಿಳುನಾಡಿನಿಂದ ಕೇರಳದ ಮೂಲಕ ಕರಾವಳಿ ಕರ್ನಾಟಕಕ್ಕೆ ಸಂಪರ್ಕಿಸಲಿದೆ. ಇದು ಪಶ್ಚಿಮ ಕರಾವಳಿ ರೈಲು ಸಂಪರ್ಕವನ್ನು ಬಲಪಡಿಸುತ್ತದೆ. ನಾಗರಕೋಯಿಲ್-ಮಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಕೈಗೆಟುಕುವ ದರದಲ್ಲಿ ದೂರು ಊರುಗಳನ್ನು ಪ್ರಯಾಣಿಸುವ ಅವಕಾಶವನ್ನು ನೀಡಲಿದೆ. ಇದು ಪ್ರವಾಸೋದ್ಯಮ, ಮೀನುಗಾರಿಕೆ, ಸಣ್ಣ ವ್ಯಾಪಾರ ಮತ್ತು…

Read More

Video: ಪುಟಾಣಿ ಆಟಿಕೆ ಗನ್‌ನಿಂದ ಶೂಟ್ ಮಾಡುತ್ತಿದ್ದಂತೆ ಕುಸಿದು ಬಿದ್ದಂತೆ ನಟಿಸಿದ ಮರಿಯಾನೆ – Kannada News | Baby elephant adorable reaction as a toddler holds a toy gun and shoots it

ಪುಟಾಣಿ ಮರಿಯಾನೆಗಳ (baby elephant) ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಮರಿಯಾನೆಗಳು ತನ್ನ ಸಂಗಡಿಗರು, ಮಾಲೀಕರು ಹಾಗೂ ಮಕ್ಕಳ ಜತೆಯಲ್ಲಿ ಪ್ರೀತಿ ಸಲುಗೆಯಿಂದ ವರ್ತಿಸುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಪುಟ್ಟ ಬಾಲಕನೊಂದಿಗೆ (little boy) ಮರಿಯಾನೆ ಆಟ ಆಡುತ್ತಿದ್ದು, ಈ ವೇಳೆ ಮರಿಯಾನೆಯೂ ತನ್ನ ಮುದ್ದಾದ ನಟನೆಯಿಂದ ಗಮನ ಸೆಳೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ನಿಜವೇ ಎಂದು ಕೇಳಿದ್ದಾರೆ. @Hinduism_sci ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ….

Read More

ದಿವ್ಯಾಂಗ ಕೋಟಾದಡಿ ಎಂಬಿಬಿಎಸ್​ಗೆ ಪ್ರವೇಶ ಪಡೆಯಲು ಕಾಲು ಕತ್ತರಿಸಿಕೊಂಡ ವಿದ್ಯಾರ್ಥಿ – Kannada News | Uttar Pradesh: Desperation Over Dreams: Probe Finds Student Maimed Himself for Medical Seat

ಜೌನ್​ಪುರ, ಜನವರಿ 23: ವಿದ್ಯಾರ್ಥಿಯೊಬ್ಬ ದಿವ್ಯಾಂಗ ಕೋಟಾದಡಿ ಎಂಬಿಬಿಎಸ್(MBBS)​​ಗೆ ಪ್ರವೇಶ ಪಡೆಯಲು ಕಾಲು ಕತ್ತರಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಜೌನ್​ಪುರದಲ್ಲಿ ನಡೆದಿದೆ. ದಿವ್ಯಾಂಗ ಕೋಟಾದ ಮೂಲಕ ಎಂಬಿಬಿಎಸ್ ಕೋರ್ಸ್‌ನಲ್ಲಿ ಸೀಟು ಪಡೆಯಲು ವಿದ್ಯಾರ್ಥಿಯೊಬ್ಬ ತನ್ನ ಕಾಲಿನ ಒಂದು ಭಾಗವನ್ನು ಕತ್ತರಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಆರಂಭದಲ್ಲಿ ಕೆಲವು ವ್ಯಕ್ತಿಗಳಿಂದ ಹಲ್ಲೆಗೊಳಗಾದ ಕಥೆಯನ್ನು ಹೆಣೆದು, ತನ್ನ ಹೆತ್ತವರನ್ನು ಮತ್ತು ಪೊಲೀಸರನ್ನು ಸಹ ಮೋಸಗೊಳಿಸಿದ್ದಾನೆ. ಲೈನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ….

Read More

ಕೋಲಾರ: ಮಾಸ್ತಿ ಗ್ರಾಮದಲ್ಲಿ ಏಕಾಏಕಿ ನೂರಾರು ವಲಸಿಗರು! ಬಾಂಗ್ಲಾದಿಂದ ಬಂದವರೆಂಬ ಶಂಕೆ – Kannada News | Hundreds of Illegal Bangladeshi Migrants Suspected in Kolar’s Masti Village, Locals Seek Probe

ಮಾಸ್ತಿ ಗ್ರಾಮದಲ್ಲಿ ಏಕಾಏಕಿ ನೂರಾರು ವಲಸಿಗರು! ಕೋಲಾರ, ಜನವರಿ 23: ಕೋಲಾರ (Kolar) ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು (Bangladesh Immigrants) ವಾಸಿಸುತ್ತಿರುವ ಬಗ್ಗೆ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನೂರಾರು ಅಪರಿಚಿತರು ಕಂಡುಬರುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಮಾಸ್ತಿ ಗ್ರಾಮದ ವಿವಿಧ ಪ್ರದೇಶಗಳಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಈ ಜನರು, ತಾವು ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳಿಂದ ಬಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ,…

Read More

ಧಾರವಾಡ: ಮನೆ ಕೊಟ್ಟ ಸರ್ಕಾರ, ಮೂಲ ಸೌಕರ್ಯ ಕೊಡಲು ಮರೆಯಿತು! – Kannada News | Lack of Basic Infrastructure Keeps Beneficiaries Away from Slum Board Houses in Dharwad

ಧಾರವಾಡ, ಜನವರಿ 23: ಸಿಎಂ ನೆತೃತ್ವದಲ್ಲಿ ನಾಳೆ ಹುಬ್ಬಳ್ಳಿಯಲ್ಲಿ ರಾಜ್ಯದ 42 ಸಾವಿರ ಬಡ ಜನರಿಗೆ ಮನೆ ಹಂಚಿಕೆ ಕಾರ್ಯಕ್ರಮ ನಡೆಯಲಿದೆ. ಇದರ ಬೆನ್ನಲ್ಲೇ ಧಾರವಾಡದಲ್ಲಿ ಹೊಸ ಚರ್ಚೆ ಶುರುವಾಗಿದ್ದು, ಚಂದ್ರಕಾಂತ ಬೆಲ್ಲದ್ ನಗರದಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಿಸಿಕೊಡಲಾಗಿರುವ ಜಿ ಪ್ಲಸ್​​ ಮಾದರಿಯ ಸುಮಾರು 1,179 ಮನೆಗಳಿಗೆ ಸರ್ಕಾರ ಮೂಲ ಸೌಕರ್ಯ ಒದಗಿಸಿ ಕೊಡೋದು ಯಾವಾಗ ಎಂಬ ಪ್ರಶ್ನೆ ಎದ್ದಿದೆ. ಅರವಿಂದ ಬೆಲ್ಲದ್ ಕ್ಷೇತ್ರದಲ್ಲಿ ಸ್ಲಮ್ ಬೋರ್ಡ್‌ನಿಂದ ಮನೆಗಳು ನಿರ್ಮಾಣಗೊಂಡಿದ್ದರೂ ಬಡಾವಣೆಗೆ ಈ ವರೆಗೂ ಅಗತ್ಯ…

Read More

Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 5,400 ರೂ ಏರಿಕೆ – Kannada News | Gold Price Today on 23rd January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 23: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಿಕ್ಕಾಪಟ್ಟೆ ಏರಿವೆ. 10 ಗ್ರಾಮ್ ಚಿನ್ನದ ಬೆಲೆ 4,950 ರೂನಿಂದ 5,400 ರೂಗಳಷ್ಟು ಏರಿಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ (Gold Rate) ಗ್ರಾಮ್​ಗೆ 16,000 ರೂ ಗಡಿ ಸಮೀಪ ಹೋಗಿದೆ. 18 ಕ್ಯಾರಟ್ ಚಿನ್ನದ ಬೆಲೆ 12,000 ರೂ ಸಮೀಪ ಇದೆ. ತಿಂಗಳ ಹಿಂದೆ 22 ಕ್ಯಾರಟ್ ಚಿನ್ನಕ್ಕೆ ಇದ್ದ ಬೆಲೆ ಈಗ 18 ಕ್ಯಾರಟ್ ಗೋಲ್ಡ್​ಗೆ ಬಂದಿದೆ. ಬೆಳ್ಳಿ ಬೆಲೆಯಂತೂ ಇನ್ನೂ ಭರ್ಜರಿಯಾಗಿ ಏರಿದೆ….

Read More

ಭಾರತದಲ್ಲಿ ಆ್ಯಪಲ್​ನಂತಹ ಮೊಬೈಲ್ ಕಂಪನಿ ಸದ್ಯದಲ್ಲೇ ಶುರುವಾಗುತ್ತಾ? ಡಾವೊಸ್​ನಲ್ಲಿ ಸುಳಿವು ಕೊಟ್ಟ ಸಚಿವರು – Kannada News | India will have its own mobile manufacturing unit in next one year, says Ashwini Vaishnaw

ಡಾವೊಸ್, ಜನವರಿ 23: ಭಾರತ ಮೊಬೈಲ್ ಫೋನ್ ತಯಾರಿಕೆಯಲ್ಲಿ ಚೀನಾ ನಂತರದ ಸ್ಥಾನ ಪಡೆದಿದೆ. ಅತಿಹೆಚ್ಚು ಮೊಬೈಲ್ ಫೋನ್ ತಯಾರಿಸುವ ದೇಶಗಳಲ್ಲಿ ಭಾರತದ್ದು ಎರಡನೇ ಸ್ಥಾನ. ಆ್ಯಪಲ್ ಕಂಪನಿಯ ಶೇ. 20ರಷ್ಟು ಐಫೋನ್​ಗಳು ಭಾರತದಲ್ಲೇ ತಯಾರಾಗುತ್ತಿವೆ. ಫೋನ್​ಗೆ ಬೇಕಾದ ಹೆಚ್ಚಿನ ಬಿಡಿಭಾಗಗಳೆಲ್ಲವೂ ಭಾರತದಲ್ಲೇ ಲಭ್ಯವಾಗುವಂತೆ ಪ್ರಬಲ ಇಕೋಸಿಸ್ಟಂ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಆ್ಯಪಲ್​ನಂತಹ ಮೊಬೈಲ್ ಫೋನ್ ಕಂಪನಿ ಭಾರತದಲ್ಲಿ ಶುರುವಾಗುತ್ತಾ, ಅಥವಾ ವಿದೇಶೀ ಕಂಪನಿಗಳಿಗೆ ಫೋನ್ ತಯಾರಿಸಿಕೊಡುವ ಕೆಲಸಗಳಿಗೆ ಮಾತ್ರ ಭಾರತ ಸೀಮಿತವಾಗಿರುತ್ತಾ? ಈ ಪ್ರಶ್ನೆಗೆ ಕೇಂದ್ರ…

Read More

ಗಣರಾಜ್ಯೋತ್ಸವ ದಿನಾಚರಣೆಗೆ ಸಾರ್ವಜನಿಕರಿಗೆ E-Pass: ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ – Kannada News | Republic Day 2026: How to Apply for Public E Pass Online via Seva Sindhu in Karnataka

ಗಣರಾಜ್ಯೋತ್ಸವ ದಿನಾಚರಣೆಗೆ ಸಾರ್ವಜನಿಕರಿಗೆ E-Pass ಬೆಂಗಳೂರು, ಜನವರಿ 22: ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಜನವರಿ 26 ರಂದು ನಡೆಯಲಿರುವ 77ನೇ ಗಣರಾಜ್ಯೋತ್ಸವ ದಿನಾಚರಣೆ (Republic Day) ಕಾರ್ಯಕ್ರಮ ವೀಕ್ಷಿಸಿಸಲು ಸಾರ್ವಜನಿಕರಿಗೆ E-Pass ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ರವರು ತಿಳಿಸಿದ್ದಾರೆ. ಆಸಕ್ತರು ಸೇವಾ ಸಿಂಧು ವೆಬ್ ಸೈಟ್ (www.sevasindhu.karnataka.gov.in) ನಲ್ಲಿ ಜನವರಿ 24, 2026 ರ ಸಂಜೆ 5 ಗಂಟೆಯೊಳಗೆ ಅಗತ್ಯವಿರುವ ಎಲ್ಲ ವೈಯಕ್ತಿಕ ವಿವರಗಳನ್ನು…

Read More

ಮಿಲ್ಲೆಟ್ ಟು ಮೈಕ್ರೋಚಿಪ್: ಹೇಗಿರಲಿದೆ ಗೊತ್ತಾ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಭಾಗಿಯಾಗಲಿರುವ ಕರ್ನಾಟಕದ ಸ್ತಭ್ಧಚಿತ್ರ? – Kannada News | Karnataka’s ‘Millet to Microchip’ Tableau Set to Shine at the Republic Day 2026 Parade

ಬೆಂಗಳೂರು, ಜನವರಿ 23: ಜನವರಿ 26ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಕರ್ನಾಟಕದಿಂದ ಮಿಲ್ಲೆಟ್ ಟು ಮೈಕ್ರೋಚಿಪ್ ಪರಿಲ್ಪನೆಯ ಸ್ತಬ್ಧಚಿತ್ರ ಭಾಗವಹಿಸಲಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದ್ದು, ಈ ಪಯಣವನ್ನು ಸಂಕೇತಿಸುವಂತೆ ಟ್ಯಾಬ್ಲೋ ಇರಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ…

Read More

ಚಿಕ್ಕ ಮಕ್ಕಳೆಂದೂ ಲೆಕ್ಕಿಸದೆ ಬಾಸುಂಡೆ ಬರುವಂತೆ ಥಳಿಸಿದ ದುರುಳರು! – Kannada News | Doddaballapur Child Assault: Two Boys Brutally Attacked, One Arm Broken

ಚಿಕ್ಕ ಮಕ್ಕಳೆಂದೂ ಲೆಕ್ಕಿಸದೆ ಬಾಸುಂಡೆ ಬರುವಂತೆ ಥಳಿಸಿದ ದುರುಳರು! ಬೆಂಗಳೂರು ಗ್ರಾಮಾಂತರ, ಜನವರಿ 23: ಜಿಲ್ಲೆಯ ದೊಡ್ಡಬಳ್ಳಾಪುರ (Bengaluru Rural) ನಗರದಲ್ಲಿ ಚಿಕ್ಕ ಮಕ್ಕಳ ಮೇಲೆ ಅಮಾನವೀಯ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಸ್ಥಾನದ ಬಳಿ 3 ಮತ್ತು 7 ವರ್ಷದ ಇಬ್ಬರು ಗಂಡು ಮಕ್ಕಳನ್ನು ದುರುಳರು ನಿರ್ದಯವಾಗಿ ಹಲ್ಲೆ ಮಾಡಿದ್ದು, ಮಕ್ಕಳನ್ನ ವಿಕ್ಟೋರಿಯಾ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವಿನ ಕೈ ಮುರಿದಿರುವ ನಿರ್ದಯಿಗಳು ಹಲ್ಲೆಯಿಂದ ಮಕ್ಕಳ ಮೈ, ಕೈ ಮತ್ತು…

Read More