Video: ಬೇಕರಿಯಿಂದ ಹೊರಡುವಾಗ ಪಕ್ಕದಲ್ಲಿದ್ದ ಯುವಕನ ಕೂದಲಿಗೆ ಲೈಟರ್ನಿಂದ ಬೆಂಕಿ ಹಚ್ಚಿದ ಬಾಲಕ – Kannada News | Security Footage From Mexico Shows Child Setting Teen’s Hair on Fire Inside Store
ಮೆಕ್ಸಿಕೋ, ಮೇ 27: ಯಾವುದೇ ಕಾರಣವಿಲ್ಲದಿದ್ದರೂ ಬಾಲಕನೊಬ್ಬ ಬೇಕರಿಯಿಂದ ಹೊರಡುವಾಗ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಕೂದಲಿಗೆ ಲೈಟರ್ನಿಂದ ಬೆಂಕಿ ಹಚ್ಚಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಯುವಕನ ಗುಂಗುರು ಕೂದಲಿಗೆ ಬೆಂಕಿ ಹಚ್ಚಿದ ದೃಶ್ಯವೊಂದು ಅಂಗಡಿಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವಕ ಏನೋ ಆಲೋಚಿಸುತ್ತಾ ನಿಂತಿದ್ದಾಗ, ಹಿಂದಿನಿಂದ ಬಂದ ಬಾಲಕ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ಅದೃಷ್ಟವಶಾತ್, ಯುವಕ ತಕ್ಷಣವೇ ಎಚ್ಚೆತ್ತುಕೊಂಡು, ಅತ್ಯಂತ ಸಮಯಪ್ರಜ್ಞೆಯಿಂದ ಕೆಲವೇ ಸೆಕೆಂಡುಗಳಲ್ಲಿ ತನ್ನ ಕೂದಲಿಗೆ…