Headlines

ಇಮ್ರಾನ್ ಖಾನ್ ಬದುಕಿಲ್ಲವೇ?; ಮಾಜಿ ಪ್ರಧಾನಿಯ ಕುರಿತು ಪಾಕಿಸ್ತಾನಿ ಪತ್ರಕರ್ತನ ಶಾಕಿಂಗ್ ಹೇಳಿಕೆ – Kannada News | Is Pakistan Former PM Imran Khan Dead Journalist Shocking Claim

ವಾಷಿಂಗ್ಟನ್, ಆಗಸ್ಟ್ 12: ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಉಂಟಾಗಿದ್ದ ತೀವ್ರ ಗೊಂದಲಗಳು ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ. ಇಮ್ರಾನ್ ಖಾನ್ (Imran Khan) ಜೈಲಿನಲ್ಲೇ ನಿಧನರಾಗಿರಬಹುದು ಎಂದು ಅಮೆರಿಕ ಮೂಲದ ಪಾಕಿಸ್ತಾನಿ ಪತ್ರಕರ್ತ ವಜಾಹತ್ ಸಯೀದ್ ಖಾನ್ ನೀಡಿದ್ದ ಸ್ಫೋಟಕ ಹೇಳಿಕೆ ಭಾರಿ ಆತಂಕ ಸೃಷ್ಟಿಸಿದೆ. “ಸೇನೆಯ ಮೂವರು ಹಿರಿಯ ಮಿಲಿಟರಿ…

Read More

ಆ.13ರಂದು ಕರ್ನಾಟಕ ಬಂದ್​​​ಗೆ ಯಾರ್ಯಾರ ಬೆಂಬಲ? ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ – Kannada News | Karnataka bandh On August 13th for Cauvery Water Dispute: what is open what is closed? And Who Supported? here Is details

ಬೆಂಗಳೂರು (ಆಗಸ್ಟ್.12): ಕರ್ನಾಟಕದಲ್ಲಿ (Karnataka) ಮತ್ತೆ ಕಾವೇರಿ ನದಿ ನೀರು ವಿವಾದ (Cauvery Water Dispute) ಮುನ್ನೆಲೆಗೆ ಬಂದಿದ್ದು, ಬರದ ಮಧ್ಯೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ಹೊರಡಿಸಿರುವುದು ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನಾಳೆ (ಆಗಸ್ಟ್ 13, ಗುರುವಾರ) ‘ಕರ್ನಾಟಕ ಬಂದ್’ (Karnataka Bandh) ಗೆ ಕರೆ ನೀಡಿದ್ದಾರೆ. ಆದರೆ, ಈ ಬಂದ್‌ಗೆ ರೈತ ಸಂಘಟನೆಗಳು ಬಿಟ್ಟರೆ ಬೇರೆ ಯಾವುದೇ…

Read More

ಈ ವರ್ಷ ಇನ್ನೂ 19 ಟಿ20 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ – Kannada News | Team India T20 Schedule 2026: Asian Games, Afghanistan, WI, NZ, SL Series and 17+ Matches

ಪ್ರಸ್ತುತ ಟೀಂ ಇಂಡಿಯಾ ಶ್ರೀಲಂಕಾ (India vs Sri Lanka) ಪ್ರವಾಸದಲ್ಲಿದೆ. ಅಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿ ಬಳಿಕ ಟೀಂ ಇಂಡಿಯಾ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ನಲ್ಲಿ ಕಾಣಿಸಿಕೊಳ್ಳಲಿದೆ. ಈ ಕ್ರೀಡಾಕೂಟದಲ್ಲಿ ಟಿ20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ ಕಣಕ್ಕಿಳಿಯಲಿದೆ. ಈ ವರ್ಷ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಸಾಕಷ್ಟು ಪಂದ್ಯಗಳನ್ನಾಡಿದೆ. ಇನ್ನು ಈ ವರ್ಷ ಉಳಿದಿರುವ ನಾಲ್ಕೂವರೆ ತಿಂಗಳಲ್ಲಿ ಟೀಂ…

Read More

ರೀಟೇಲ್ ಹಣದುಬ್ಬರ ಜುಲೈನಲ್ಲಿ ಶೇ. 4.45ಕ್ಕೆ ಏರಿಕೆ; ಆರ್​ಬಿಐನ ತಾಳಿಕೆ ಮಿತಿಯೊಳಗಿದೆ ಬೆಲೆ ಏರಿಕೆ ದರ – Kannada News | CPI based Retail Inflation in July 2026 rise to 4.45pc from 4.38pc in June

ನವದೆಹಲಿ, ಆಗಸ್ಟ್ 12: ಆಹಾರ ಪದಾರ್ಥಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತದ ರೀಟೇಲ್ ಹಣದುಬ್ಬರವು (Consumer Price Index – CPI) ಜುಲೈ ತಿಂಗಳಲ್ಲಿ 4.45% ಗೆ ಏರಿಕೆಯಾಗಿದೆ. ಜೂನ್ ತಿಂಗಳಿನಲ್ಲಿ ಇದು 4.38% ಆಗಿತ್ತು. ಇದರೊಂದಿಗೆ ದೇಶದ ಚಿಲ್ಲರೆ ಹಣದುಬ್ಬರವು ಸತತ ಎರಡನೇ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಗದಿಪಡಿಸಿರುವ 4% ಮಧ್ಯಮಾವಧಿ ಗುರಿಗಿಂತ ಮೇಲೆ ಹೋಗಿದೆ. ಆದರೆ, ಹಣದುಬ್ಬರ ತಾಳಿಕೆ ಮಿತಿಯಾದ 6% ಒಳಗೆಯೇ ಇದೆ. ಹಣದುಬ್ಬರ ಹೆಚ್ಚಳಕ್ಕೆ ಆಹಾರ ಪದಾರ್ಥಗಳ…

Read More

Balasana Benefits: ಪ್ರತಿದಿನ ಬೆಳಗ್ಗೆ 15 ನಿಮಿಷಗಳ ಬಾಲಾಸನ ಮಾಡಿ, ಈ ಎಲ್ಲಾ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ – Kannada News | Balasana Benefits: Do Child’s Pose for 15 minutes every day to relieve stress

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು, ಉತ್ತಮ ಜೀವನಶೈಲಿ, ಪೌಷ್ಟಿಕ ಆಹಾರ ಮತ್ತು ದೈಹಿಕ ಚಟುವಟಿಕೆ ಅತ್ಯಗತ್ಯ. ಆದರೆ ಇಂದಿನ ಈ ಬ್ಯುಸಿ ಜೀವನದ ಕಾರಣದಿಂದಾಗಿ ಅನೇಕರಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಒತ್ತಡವೂ (stress) ಹೆಚ್ಚುತ್ತಿದೆ. ಈ ಒತ್ತಡವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಹಾನಿ ಉಂಟುಮಾಡುತ್ತದೆ. ಈ ಒಂದು ಸಮಸ್ಯೆಗೆ ನಿತ್ಯ ಬಾಲಾಸನ ಮಾಡುವ ಮೂಲಕ ಪರಿಹಾರವನ್ನು ಪಡೆಯಬಹುದು. ಒತ್ತಡವನ್ನು ನಿವಾರಿಸುವಲ್ಲಿ ಬಾಲಾಸನ ಅತ್ಯಂತ ಪರಿಣಾಮಕಾರಿ ಯೋಗಭಂಗಿಯಾಗಿದೆ. ಚೈಲ್ಡ್ಸ್…

Read More

ಐವಿಎಫ್ ಬಳಿಕ ಬಾಣಂತಿಯರು ಮಗುವಿಗೆ ಹಾಲುಣಿಸಬಹುದೇ? ತಜ್ಞರು ನೀಡಿರುವ ಉತ್ತರವೇನು? – Kannada News | Can IVF Affect Breastfeeding After Delivery? Know What Doctors Say

ಐವಿಎಫ್ (IVF) ಮೂಲಕ ಗರ್ಭಧಾರಣೆ ಮಾಡಿಕೊಂಡ ಮಹಿಳೆಯರಲ್ಲಿ ಡೆಲಿವರಿ ನಂತರ ಮಗುವಿಗೆ ಸ್ತನ್ಯಪಾನ ಮಾಡಿಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿದೆ. ಐವಿಎಫ್ ವೇಳೆ ಹಾರ್ಮೋನ್‌ ಆಧಾರಿತ ಔಷಧಿಗಳನ್ನು ನೀಡುವುದರಿಂದ, ನಂತರ ಎದೆಹಾಲು ಉತ್ಪಾದನೆಗೆ ತೊಂದರೆಯಾಗಬಹುದೇ ಎಂಬ ಆತಂಕವೂ ಇರುತ್ತದೆ. ಹಾಗಾದರೆ ಐವಿಎಫ್ ನಂತರ ಸ್ತನ್ಯಪಾನ ಮಾಡುವಾಗ ನಿಜವಾಗಿಯೂ ಸಮಸ್ಯೆ ಉಂಟಾಗಬಹುದೇ, ಯಾವ ಅಂಶಗಳು ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಸ್ಟೋರಿಯಲ್ಲಿದೆ. ಐವಿಎಫ್ ಬಳಸುವ ಹಾರ್ಮೋನ್‌ ಔಷಧಿಗಳು ಸಾಮಾನ್ಯವಾಗಿ ಚಿಕಿತ್ಸೆಯ ನಿರ್ದಿಷ್ಟ ಹಂತದಲ್ಲಿ ಮಾತ್ರ…

Read More

ಸಾಲು ಸಾಲು ಅಕ್ರಮ ಆರೋಪ: ಕೆಪಿಎಸ್​​​​ಸಿಗೆ ಮೇಜರ್ ಸರ್ಜರಿ! – Kannada News | KPSC Officer Transfers: IAS H. Prasanna, Lavish Ordia Appointed Amid Allegations

ಬೆಂಗಳೂರು, ಆಗಸ್ಟ್​​ 12: ಕರ್ನಾಟಕ ಲೋಕಸೇವಾ ಆಯೋಗದ (KPSC) ಇತ್ತೀಚಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಅಕ್ರಮಗಳ ವಿರುದ್ಧ ರಾಜ್ಯದಲ್ಲಿ ಉದ್ಯೋಗಾಕಾಂಕ್ಷಿಗಳು ಉಗ್ರ ಹೋರಾಟ ಕೂಡ ಮಾಡಿದ್ದರು. ಹೀಗೆ ಸಾಲು ಸಾಲು ಅಕ್ರಮ ಆರೋಪಗಳ ಬೆನ್ನಲ್ಲೇ ಇದೀಗ ಸರ್ಕಾರ ಕೆಪಿಎಸ್​​​​ಸಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಅಧಿಕಾರಿಗಳ ವರ್ಗಾವಣೆ (Transfer) ಮಾಡಿ ಆದೇಶ ಹೊರಡಿಸಿದೆ. ಕೆಪಿಎಸ್‌ಸಿಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಕ್ರಮ ನಡೆದಿದೆ ಎಂಬ…

Read More

Independence Day 2026: 1947 ಆಗಸ್ಟ್ 14-15ರ ಆ 24 ಗಂಟೆಗಳು: ಭಾರತದಲ್ಲಿ ನಡೆದ ರೋಮಾಂಚಕಾರಿ ಕ್ಷಣಗಳು – Kannada News | The 24 Hours of August 14–15, 1947; How the moment Indians felt during Indian Independence Announcement; details in Kannada

ದೆಹಲಿ, ಆ.12: ಬ್ರಿಟಿಷರ ಗುಲಾಮಿ ಸಂಕೋಲೆಯನ್ನು ಕಳಚಿ, ಭಾರತವು ಸ್ವತಂತ್ರ ರಾಷ್ಟ್ರವಾಗಿ ಜನ್ಮತಳೆದ 1947ರ ಆಗಸ್ಟ್ 14ರ ಸಂಜೆಯಿಂದ ಆಗಸ್ಟ್ 15ರ ಸಂಜೆಯವರೆಗಿನ 24 ಗಂಟೆಗಳು ಭಾರತೀಯ ಇತಿಹಾಸದ ಅತ್ಯಂತ ಅವಿಸ್ಮರಣೀಯ ಅಧ್ಯಾಯ. ಒಂದೆಡೆ ದಶಕಗಳ ಸುದೀರ್ಘ ಹೋರಾಟಕ್ಕೆ ಸಿಕ್ಕ ಸ್ವಾತಂತ್ರ್ಯದ ಪರಮೋಚ್ಛ ಆನಂದ, ಮತ್ತೊಂದೆಡೆ ದೇಶ ವಿಭಜನೆಯ ಭೀಕರ ರಕ್ತಪಾತ ಮತ್ತು ನೋವು. ಈ 24 ಗಂಟೆಗಳಲ್ಲಿ ಇಡೀ ದೇಶ ಅನುಭವಿಸಿದ ಭಾವನೆಗಳನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಅಂದು ದೆಹಲಿಯ ರಾಜಬೀದಿಗಳಿಂದ ಹಿಡಿದು ಗಡಿಭಾಗದ ಹಳ್ಳಿಗಳವರೆಗೆ…

Read More

ಪುಷ್ಕರ್ ಮಲ್ಲಿಕಾರ್ಜುನಯ್ಯ ನಟನೆಯ ‘ವಿಜಯನಗರ ಸಾಮ್ರಾಜ್ಯ’ ಚಿತ್ರದಲ್ಲಿ ಹೊಸ ತಂತ್ರಜ್ಞಾನ – Kannada News | Pushkarah Mallikarjunaiah Acting Directorial debut Vijayanagara Samrajya Movie

ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkarah Mallikarjunaiah) ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಹಸಕ್ಕೆ ಕೈ ಹಾಕುತ್ತಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’, ‘ಅವತಾರ ಪುರುಷ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿರುವ ಅವರು ಈಗ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಾಯಕನಟ ಆಗಲು ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಈಗ ಅವರು ‘ವಿಜಯನಗರ ಸಾಮ್ರಾಜ್ಯ’ (Vijayanagara Samrajya) ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ನೂತನ ತಂತ್ರಜ್ಞಾನ ಬಳಸಲಾಗುತ್ತಿದೆ….

Read More

ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ – Kannada News | Portfolios allocated to 19 newly sworn in Karnataka Ministers, here Is List

ಬೆಂಗಳೂರು, (ಆಗಸ್ಟ್ 11):  ತೀವ್ರ ಕುತೂಹಲ ಮೂಡಿಸಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ಗೊಂದಲ ಕೊನೆಗೂ ಬಗೆಹರಿದಿದೆ.  ಎರಡನೇ ಹಂತದ ಸಂಪುಟ ಪುನಾರಚನೆಯಲ್ಲಿ ಡಿಕೆ ಶಿವಕುಮಾರ್ ಕ್ಯಾಬಿನೆಟ್ ಸೇರಿದ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಹೌದು….ಆಗಸ್ಟ್ 3ರಂದು ಸಂಪುಟ ಪುನಾರಚನೆ (Karnataka Cabinet Expansion)  ವೇಳೆ ಪ್ರಮಾಣವಚನ  ಸ್ವೀಕರಿಸಿದ  19 ನೂತನ ಸಚಿವರಿಗೆ ಖಾತೆ (Portfolios) ನೀಡಬೇಕೆಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಟ್ಟಿಯನ್ನು ಅಂತಿಮಗೊಳಿಸಿದ್ದು, ರಾಜಭವನದ ಅಂಕಿತ ಹಾಗೂ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ…

Read More