Headlines

ಡಿಆರ್​ಐನಿಂದ ಭರ್ಜರಿ ಕಾರ್ಯಾಚರಣೆ: ರೈಲಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು, ಮಾರ್ಚ್​​ 22: ದೆಹಲಿಯಿಂದ ಬೆಂಗಳೂರಿಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಾಟ ಮಾಡುತ್ತಿದ್ದ 9 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. DRI ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ನಾಯಿಗೆ ನೀಡುವ ಆಹಾರದ ಪ್ಯಾಕೆಟ್‌ಗಳಲ್ಲಿ ಅಡಗಿಸಿ, ಯಾರಿಗೂ ಅನುಮಾನ ಬಾರದಂತೆ ಇವನ್ನು ಸಾಗಿಸಲು ಪ್ರಯತ್ನಿಸಲಾಗಿತ್ತು. ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಡಿಆರ್​ಐ ಅಧಿಕಾರಿಗಳು ರೈಲಿನಲ್ಲಿಯೇ ಈ ದಂಧೆಯನ್ನು ಪತ್ತೆ ಹಚ್ಚಿ, ಡ್ರಗ್ಸ್ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 5ರ ದಿನಭವಿಷ್ಯ

ಮನೆಯನ್ನು ಒರೆಸುವ ನೀರಿಗೆ ಸ್ವಲ್ಪ ಕಲ್ಲು ಉಪ್ಪನ್ನು ಸೇರಿಸಿ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು (Negative Energy) ದೂರ ಮಾಡುತ್ತದೆ. ವಿನಾಕಾರಣ ಜಗಳ- ಕಲಹ ಆಗುತ್ತಿದ್ದಲ್ಲಿ ಆ ಸಮಸ್ಯೆ ನಿವಾರಣೆ ಆಗುತ್ತದೆ. ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7): ನಿಮ್ಮ ಸಮಯಪ್ರಜ್ಞೆ ನಿರ್ಧಾರಗಳಿಗೆ ಇತರರು ಅಚ್ಚರಿ ಪಡುತ್ತಾರೆ. ಯಾಕೆ ಬೇಕು- ಯಾಕೆ ಬೇಡ ಎಂಬ ಬಗ್ಗೆ ನಿಮಗಿರುವಂಥ ಸ್ಪಷ್ಟತೆ ಕಾರಣಕ್ಕೆ ಕಷ್ಟ ಎನಿಸಿದಂಥ ಕೆಲಸ -ಕಾರ್ಯಗಳು ಅಚ್ಚುಕಟ್ಟಾಗಿ ಆಗಲಿವೆ….

Read More

Solar Eclipse 2026: ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Solar Eclipse 2026: Dr. Basavaraj Gurujis Predictions for Leo Zodiac Sign.

2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಸಿಂಹ ರಾಶಿಯವರ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರಲಿದೆ. ಈ ಗ್ರಹಣವು ಸಿಂಹ ರಾಶಿಯ ಕಳತ್ರ ಸ್ಥಾನದಲ್ಲಿ, ಅಂದರೆ ಏಳನೇ ಮನೆಯಲ್ಲಿ ಸಂಭವಿಸಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮಖಾ, ಪುಬ್ಬಾ, ಉತ್ತರಾ ನಕ್ಷತ್ರದವರಿಗೆ ಈ ರಾಶಿಯ ಪ್ರಭಾವ ಇರುತ್ತದೆ. ಸಿಂಹ ರಾಶಿಯವರು ಈ ಅವಧಿಯಲ್ಲಿ ಹೆಚ್ಚು ಜಾಗರೂಕತೆ ವಹಿಸುವುದು ಅಗತ್ಯ. ಗ್ರಹಣದ ಪ್ರಭಾವ ಅಷ್ಟು ಶುಭಕರವಾಗಿಲ್ಲ ಎನ್ನಲಾಗಿದೆ. ಗಂಡ-ಹೆಂಡತಿಯರ ನಡುವೆ ಜಗಳ, ಕುಟುಂಬದಲ್ಲಿ ಅನಗತ್ಯ ತೊಂದರೆಗಳು, ರಾಜಕೀಯ…

Read More

ಜಾನ್ವಿ ಕಪೂರ್ ಕೈಯಲ್ಲಿ ‘ಶಿಖು’ ಹೆಸರಿನ ಮೆಹಂದಿ; ಪ್ರಿಯಕರನ ಮೇಲಿನ ಪ್ರೀತಿ ನೋಡಿ – Kannada News | Janhvi Kapoor Shikhu Mehndi Confirms Love for Shikhar Pahariya

ನಟಿ ಜಾನ್ವಿ ಕಪೂರ್ ಇತ್ತೀಚೆಗೆ ತಮ್ಮ ಸಹೋದರಿ ಅಂಶುಲಾ ಕಪೂರ್ ಅವರ ಮದುವೆಯ ರಿಸೆಪ್ಷನ್‌ನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ರೇಷ್ಮೆ ಸೀರೆಯುಟ್ಟು ಮಿಂಚಿದ್ದಾರೆ. ಅವರ ಸುಂದರ ನೋಟದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಆದರೆ, ಎಲ್ಲರ ಗಮನ ಸೆಳೆದದ್ದು ಜಾನ್ವಿ ಅವರ ಕೈಯಲ್ಲಿದ್ದ ಮೆಹಂದಿ ವಿನ್ಯಾಸ. ಜಾನ್ವಿ ಅವರ ಮೆಹಂದಿಯಲ್ಲಿ ‘ಶಿಖು’ ಎಂದು ಹಿಂದಿಯಲ್ಲಿ ಬರೆಯಲಾಗಿತ್ತು. ‘ಶಿಖು’ ಎಂಬುದು ಜಾನ್ವಿ ಅವರ ಪ್ರಿಯಕರ ಶಿಖರ್ ಪಹಾರಿಯಾ ಅವರ ಹೆಸರಾಗಿದೆ….

Read More

Holi 2026: ಮೈಮೇಲೆ ಅಂಟಿದ ಹೋಳಿ ಬಣ್ಣವನ್ನು ತೆಗೆದು ಹಾಕಲು ಈ ಸಲಹೆಯನ್ನು ಪಾಲಿಸಿ – Kannada News | Holi 2026: Try these home remedies to easily remove holi color from skin and hair

ಹೋಳಿ (Holi) ಅಂದ್ರೆನೇ ಬಣ್ಣಗಳ ಹಬ್ಬ. ದೇಶಾದ್ಯಂತ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಬಣ್ಣಗಳೊಂದಿಗೆ ಓಕುಳಿಯಾಡುವ ಮೂಲಕ ಜನ ಸಂಭ್ರಮ ಸಂತೋಷದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಓಕುಳಿಯಾಡುವಾಗ ಎಷ್ಟು ಖುಷಿ ಇರುತ್ತೋ, ಮೈಗಂಟಿದ ಹೋಳಿ ಬಣ್ಣ ಆದಷ್ಟು ಬೇಗ ಹೋದ್ರೆ ಸಾಕು ಅನ್ನೋ ಟೆನ್ಷನ್‌ ಕೂಡ ಇದ್ದೇ ಇರುತ್ತದೆ. ಹೆಚ್ಚಿನವರು ಮಾರುಕಟ್ಟೆಗಳಲ್ಲಿ ಸಿಗುವ ರಾಸಾಯನಿಕಯುಕ್ತ ಬಣ್ಣಗಳನ್ನು ಉಪಯೋಗಿಸುವ ಕಾರಣ ಆ ಬಣ್ಣಗಳು ಮೈಯಿಂದ ಮಾಸುವುದೇ ಇಲ್ಲ. ಇದನ್ನು ಹೋಗಲಾಡಿಸಲು ಹಲವು ಸರ್ಕಸ್‌ಗಳನ್ನು ಮಾಡಬೇಕಾಗುತ್ತದೆ. ಹೀಗಿರುವಾಗ ಈ…

Read More

ಲಕ್ಕುಂಡಿ ನಿಧಿಗೆ ಸರ್ಪ ಕಾವಲು? ಮೈಸೂರಿನಿಂದ ಬಂದ ಉರಗ ರಕ್ಷಕರು ಹೇಳಿದ್ದೇನು? – Kannada News | Gold Treasure : snake catchers Came to Lakkundi From Mysuru For serpent found during excavation

ಗದಗ, (ಜನವರಿ 21): ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ (Lakkundi Gold Treasure) ಸಿಕ್ಕಿದ್ದು, ಅಂದಿನಿಂದ ಲಕ್ಕುಂಡಿ  ಗ್ರಾಮ ಭಾರೀ ಸದ್ದು ಮಾಡಿದೆ. ಇನ್ನು ಇನ್ನಷ್ಟು ನಿಧಿ ಸಿಗಬಹುದು ಎಂದು ಪುರಾತತ್ವ ಇಲಾಖೆಯು ಗ್ರಾಮದಲ್ಲಿ ಉತ್ಖನನ ನಡೆಸಿದೆ. ಈ ವೇಳೆ ದಿನದಲ್ಲಿ ಒಂದಲ್ಲ ಒಂದು ವಸ್ತು ದೊರೆಯುತ್ತಿದೆ. ಇದರ ನಡುವೆ ಇದೀಗ ಗ್ರಾಮದಲ್ಲಿ ಸರ್ಪದ (snake) ಆತಂಕ ಮನೆ ಮಾಡಿದೆ. ಹೌದು..ಪುರಾತತ್ವ ಇಲಾಖೆ ಸಿಬ್ಬಂದಿ ನಡೆಸುತ್ತಿದ್ದ ಕಾರ್ಯಾಚರಣೆಯಲ್ಲಿ ಪುರಾತನ ಶಿವಲಿಂಗ…

Read More

ಕೆಲಸದ ಒತ್ತಡದಿಂದ ಫರ್ಟಿಲಿಟಿ ಕುಗ್ಗುತ್ತಿದೆಯೇ? ತಜ್ಞರು ಹೇಳಿರುವ ಮಹತ್ವದ ಮಾಹಿತಿ ಇಲ್ಲಿದೆ – Kannada News | How Office Lifestyle Can Impact Male And Female Fertility

ಇಂದಿನ ವೇಗದ ಜೀವನಶೈಲಿ ಮತ್ತು ಉದ್ಯೋಗದ ಒತ್ತಡದಿಂದ ಕುಟುಂಬ ಯೋಜನೆಯನ್ನು ಮುಂದೂಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮಹಿಳೆಯರು ಮತ್ತು ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ (Fertility) ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ದೀರ್ಘಕಾಲದ ಮಾನಸಿಕ ಒತ್ತಡ (Stress), ಅನಾರೋಗ್ಯಕರ ಜೀವನಶೈಲಿ ಮತ್ತು ತಡವಾಗಿ ಮಕ್ಕಳ ಯೋಜನೆ ಮಾಡುವುದರಿಂದ ಗರ್ಭಧಾರಣೆಯಲ್ಲಿ ತೊಂದರೆ ಉಂಟಾಗಬಹುದು. ಹಾಗಾದರೆ ಕೆಲಸದ ಒತ್ತಡ ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತದೆಯೇ, ಇನ್ನು ಯಾವ ಅಭ್ಯಾಸಗಳು ಅಪಾಯ ಹೆಚ್ಚಿಸುತ್ತವೆ ಮತ್ತು ಸಂತಾನೋತ್ಪತ್ತಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು…

Read More

ವಸತಿ ಶಾಲೆಯ ಬಾಲಕಿಯರಿಗೆ ಲೈಂಗಿಕ ಕಿರುಕುಳ; ಶಾಲೆ ನಡೆಸುತ್ತಿದ್ದ ದಂಪತಿ ಮೇಲೆ ಪೋಕ್ಸೋ ಕೇಸ್! – Kannada News | Devanahalli POCSO: Residential School Owner Booked for Physical Harassment of Girls

ವಸತಿ ಶಾಲೆಯ ಬಾಲಕಿಯರಿಗೆ ಲೈಂಗಿಕ ಕಿರುಕುಳ; ಶಾಲೆ ನಡೆಸುತ್ತಿದ್ದ ದಂಪತಿ ಮೇಲೆ ಪೋಕ್ಸೋ ಕೇಸ್! ದೇವನಹಳ್ಳಿ, ಫೆಬ್ರವರಿ 28: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ಪಟ್ಟಣದಲ್ಲಿರುವ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ವಸತಿ ಶಾಲೆಯ ಮಾಲೀಕ ಧನಂಜಯ್ (A1) ಮತ್ತು ಅವರ ಪತ್ನಿ ಶೈಲಜಾ (A2) ವಿರುದ್ಧ ಪೋಕ್ಸೋ ಕಾಯ್ದೆಯಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡನ ವಿಕೃತಿಗೆ ಹೆಂಡತಿ ಸಾಥ್! ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದ…

Read More

IPL 2026: ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡ ಸೇರಿಕೊಂಡ ಪ್ಯಾಟ್ ಕಮ್ಮಿನ್ಸ್; ಆದರೆ..?

2026 ರ ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ಬೆಂಗಳೂರಿನಲ್ಲಿ ಮುಖಾಮುಖಿಯಾಗುತ್ತಿವೆ. ಆದಾಗ್ಯೂ ಈ ಪಂದ್ಯಕ್ಕೂ ಮುನ್ನ ಸನ್‌ರೈಸರ್ಸ್ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಟೂರ್ನಿ ಆರಂಭಕ್ಕೂ ಮುನ್ನ ತಂಡವನ್ನು ಕೂಡಿಕೊಂಡಿದ್ದಾರೆ. ವಾಸ್ತವವಾಗಿ ಇಂಜುರಿಯಿಂದ ಬಳಲುತ್ತಿದ್ದ ಪ್ಯಾಟ್ ಕಮ್ಮಿನ್ಸ್, ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು. ಅದರಂತೆ ಫ್ರಾಂಚೈಸಿ ಕೂಡ ಇಶಾನ್ ಕಿಶನ್​​ಗೆ ತಂಡದ…

Read More

ಸಿಲಿಂಡರ್ ಹೊರಗಿಡಿ, ತಾಜಾ ಎಣ್ಣೆ ಬಳಸಿ: ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ – Kannada News | Veerappas Bagalkote Inspection: Food Hygiene and LPG Safety in Bakeries Under Scrutiny

ಬೆಂಗಳೂರು, ಜು.23: ಉಪಲೋಕಾಯುಕ್ತ ಬಿ. ವೀರಪ್ಪ ಅವರು ಬಾಗಲಕೋಟೆಗೆ ಭೇಟಿ ನೀಡಿ ಬೆಳ್ಳಂಬೆಳಗ್ಗೆ ವಿವಿಧ ಬೇಕರಿಗಳಿಗೆ ದಿಢೀರ್ ತಪಾಸಣೆ ನಡೆಸಿದರು. ಈ ವೇಳೆ ಆಹಾರ ತಿನಿಸುಗಳ ಗುಣಮಟ್ಟ, ಸುರಕ್ಷತೆ ಹಾಗೂ ನೈರ್ಮಲ್ಯದ ಕುರಿತು ಕೂಲಂಕಷ ಪರಿಶೀಲನೆ ನಡೆಸಲಾಯಿತು. ತಪಾಸಣೆಯ ಸಂದರ್ಭದಲ್ಲಿ, ಬೇಕರಿ ಮಾಲೀಕರಿಗೆ ಎಫ್‌ಎಸ್‌ಎಸ್‌ಎಐ (FSSAI) ಪ್ರಮಾಣಪತ್ರದ ಲಭ್ಯತೆ ಕುರಿತು ಉಪಲೋಕಾಯುಕ್ತರು ಪ್ರಶ್ನಿಸಿದರು. ಅಲ್ಲದೆ, ಬೇಕರಿಯ ಒಳಗಿದ್ದ ಎಲ್‌ಪಿಜಿ ಸಿಲಿಂಡರ್ ಸುರಕ್ಷಿತವಲ್ಲ ಎಂದು ಗಮನಿಸಿ, “ಸಿಲಿಂಡರ್ ಅನ್ನು ಹೊರಗೆ ಇಡಿ, ಇದು ಅಪಾಯಕಾರಿ. ಅಗತ್ಯವಿದ್ದರೆ ಒಳಗೆ ದೀಪ…

Read More