ಕೋಲಾರ: ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾ ಅಕ್ರಮ ಬಯಲು, ಹಣ ಪಡೆದು ಮಾಸ್ ಕಾಪಿಗೆ ಬಿಟ್ಟ ಇನ್ವಿಜಿಲೇಟರ್‌ಗಳ ವಿಡಿಯೋ ವೈರಲ್! – Kannada News | KSOU Exam Scam Exposed in Kolar: Invigilators Caught on Camera Taking Bribes for Mass Copying in Degree Exams
ಕೋಲಾರ, ಮೇ 26: ಕೋಲಾರದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಕಚೇರಿಯ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದ್ದ ಭಾರಿ ಪರೀಕ್ಷಾ ಅಕ್ರಮವೊಂದು ಬಯಲಿಗೆ ಬಂದಿದೆ. ಕೋಲಾರದ ಟಮಕಾ ಬಳಿಯಿರುವ ಮುಕ್ತ ವಿವಿಯ ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿ ಬಿಎ, ಬಿಕಾಂ, ಬಿಸ್ಸಿ ಮತ್ತು ಬಿಬಿಎ ಸೇರಿದಂತೆ ಪ್ರಮುಖ ಪದವಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ನಕಲು ಮಾಡಲು ಮುಕ್ತ ಅವಕಾಶ ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ. ಖಾಸಗಿಯಾಗಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಇಲ್ಲಿನ ಪರೀಕ್ಷಾ ಮೇಲ್ವಿಚಾರಕರು (ಇನ್ವಿಜಿಲೇಟರ್‌ಗಳು)…