ICC ODI Rankings: ವಾರದೊಳಗೆ ಅಗ್ರಸ್ಥಾನ ಕಳೆದುಕೊಂಡ ವಿರಾಟ್ ಕೊಹ್ಲಿ
ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿದೆ. ತಂಡದ ಸರಣಿ ಸೋಲಿಗೆ ಪ್ರಮುಖ ಆಟಗಾರರ ಕಳಪೆ ಪ್ರದರ್ಶನವೇ ಕಾರಣವಾಗಿತ್ತು. ಆದಾಗ್ಯೂ ಈ ಸರಣಿಯಲ್ಲಿ ಕಿಂಗ್ ಕೊಹ್ಲಿಯ ಪ್ರದರ್ಶನ ಅಮೋಘವಾಗಿತ್ತು. ಹೀಗಾಗಿ ಸರಣಿಯ ನಡುವೆ ಅವರಿಗೆ ಐಸಿಸಿ ಕಡೆಯಿಂದ ನಂಬರ್ 1 ಸ್ಥಾನದ ಬಹುಮಾನವೂ ಸಿಕ್ಕಿತ್ತು. ವಾಸ್ತವವಾಗಿ ಕಳೆದ ವಾರದ ಐಸಿಸಿ ಏಕದಿನ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿ ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ್ದರು. ಆದರೆ ಈ ವಾರದ ರ್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್…