ಪಾಕಿಸ್ತಾನ್ ತಂಡದ ‘ಆಯ್ಕೆ ಮತ್ತು ವೇತನ’ ವ್ಯವಸ್ಥೆಯೇ ಬದಲು..! – Kannada News | PCB’s New Format Based Contract System
ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತನ್ನ ಆಟಗಾರರ ಆಯ್ಕೆ ಮತ್ತು ಸೆಂಟ್ರಲ್ ಕಾಂಟ್ರಾಕ್ಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಇದುವರೆಗೆ ಚಾಲ್ತಿಯಲ್ಲಿದ್ದ ಸಾಂಪ್ರದಾಯಿಕ ‘A ಇಂದ D ಗ್ರೇಡ್’ ಶ್ರೇಣೀಕೃತ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಅದರ ಜಾಗದಲ್ಲಿ ಆಟಗಾರರು ಆಡುವ ಕ್ರಿಕೆಟ್ ಸ್ವರೂಪಗಳನ್ನು ಆಧರಿಸಿದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕ್ರಿಕೆಟ್‌ನಲ್ಲಿ ಹೆಚ್ಚುತ್ತಿರುವ ಟಿ20 ಫ್ರಾಂಚೈಸಿ ಲೀಗ್‌ಗಳ ಹಾವಳಿ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಉಂಟಾಗುತ್ತಿರುವ ಹಿನ್ನಡೆಯನ್ನು ತಡೆಯಲು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಮಹತ್ವದ ನಿರ್ಧಾರ…