Video: ಪೋಷಕರೆದುರೇ ಜಿಪ್ ಲೈನ್ ರೈಡ್ ವೇಳೆ ಬಿದ್ದು ಪ್ರಾಣಬಿಟ್ಟ ಬಾಲಕ – Kannada News | Teen Dies After Zipline Accident in Agra, Incident Caught on Video
ಆಗ್ರಾ, ಮೇ 25: ಮನರಂಜನೆ ಮತ್ತು ಸಾಹಸದ ಆಟ(Game)ವೊಂದು ಹದಿನೈದು ವರ್ಷದ ಬಾಲಕನ ಪಾಲಿಗೆ ಯಮಪಾಶವಾದ ಅತ್ಯಂತ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ. ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ‘ಆಗ್ರಾ ಚೌಪಟ್ಟಿ’ಯಲ್ಲಿ ಜಿಪ್‌ಲೈನಿಂಗ್ ಸವಾರಿಯ ವೇಳೆ ಬಾಲಕನೊಬ್ಬ ಎತ್ತರದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ. ಈ ಹೃದಯವಿದ್ರಾವಕ ಘಟನೆಯ ಲೈವ್ ವೀಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ನಡೆದಿದ್ದೇನು? ವರದಿಗಳ ಪ್ರಕಾರ, 15 ವರ್ಷದ ಹದಿಹರೆಯದ…