BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸಿ ಹಣ ಪೀಕುತ್ತಿದ್ದ ನಾಲ್ವರು ಕಂಡಕ್ಟರ್ ಸಸ್ಪೆಂಡ್ – Kannada News | BMTC suspends four conductors for misusing UPI ticketing system In Bengaluru
ಬೆಂಗಳೂರು, (ಜನವರಿ 20): ಚಿಲ್ಲರೆ ಸಮಸ್ಯೆ ತಪ್ಪಿಸಲು ಪ್ರಯಾಣಿರಿಗೆ ಅನುಕೂಲವಾಗಲಿ ಎಂದು ಬಿಎಂಟಿಸಿ ಕೂಡ ಬಸ್ಗಳಲ್ಲಿ (BMTC Bus) ಕ್ಯೂರ್ ಕೋಡ್ ಅಳವಡಿಸಿದೆ. ಆದ್ರೆ, ಇದು ಪ್ರಯಾಣಿಕರಿಗೆ ಉಪಯೋಗವಾದ್ರೆ, ಕಂಡಕ್ಟರ್ಗಳು ಮಾತ್ರ ದುರುಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹೌದು.. ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಬಿಎಂಟಿಸಿ ನಿಗಮ ಯುಪಿಐ ಸ್ಕ್ಯಾನರ್ ಗಳನ್ನು ಹಾಕಿದೆ. ಆದರೆ ಕೆಲ ಕಿಲಾಡಿ ಕಂಡಕ್ಟರ್ ಗಳು ಬಿಎಂಟಿಸಿ ಬಸ್ ನಲ್ಲಿರುವ ಯುಪಿಐ ಸ್ಕ್ಯಾನರ್ ಗಳನ್ನು ಕಿತ್ತು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್…