Headlines

ಕಪ್ಪೆ ಚಿಪ್ಪುಗಾಗಿ ಹೋದವರು ಜಲಸಮಾಧಿ, ಸಾವಿನ ಸಂಖ್ಯೆ 10ಕ್ಕೆ ಏರಿಕೆ – Kannada News | Death toll rises to 10 In Bhatkal Hakkalu River Tragedy

ಕಾರವಾರ, (ಮೇ 24): ಕಪ್ಪೆ ಚಿಪ್ಪು ಹೆಕ್ಕಲು ನದಿಗೆ ಹೋದವರು ವಾಪಸ್ ಬಾರಲೇ ಇಲ್ಲ. ನೀರಿನ ಹರಿವು ತಿಳಿಯದೇ ಆಳಕ್ಕಿಳಿದವರು ಮೇಲೇಳಲೇ ಇಲ್ಲ. ಒಬ್ಬರಲ್ಲ ಇಬ್ಬರಲ್ಲ ಇಡೀ ಕುಟುಂಬವೇ ಜಲಸಮಾಧಿಯಾಗಿದೆ. ಉತ್ತರ ಕನ್ನಡದ ಭಟ್ಕಳ (Bhatkal) ತಟ್ಟೆ ಹಕ್ಕಲು ನದಿಯಲ್ಲಿ ಘನಘೋರ ದುರಂತ (Hakkalu River Tragedy) ನಡೆದುಹೋಗಿದ್ದು, ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರು ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಹೌದು..ಉತ್ತರ ಕನ್ನಡ ಜಿಲ್ಲೆ ಭಟ್ಕಳ ಬಳಿಯ ತಟ್ಟೆಹಕಲ್ಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಪಡುಶಿರಾಲಿ ಶಾರದಹೊಳೆಯ 14 ಜನ ನದಿಗೆ…

Read More

ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ – Kannada News | Delicious coffee can also be made from jackfruit seeds

ಬೇಸಿಗೆಯಲ್ಲಿ ಹೇರಳವಾಗಿ ಹಲಸಿನ ಹಣ್ಣು ಲಭ್ಯವಿರುತ್ತವೆ. ಸಾಮಾನ್ಯವಾಗಿ ಈ ಹಣ್ಣನ್ನು ತಿಂದ ಬಳಿಕ ಅದರ ಬೀಜವನ್ನು ಎಸೆದು ಬಿಡುತ್ತಾರೆ. ಇವುಗಳಲ್ಲಿಯೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹೌದು  ಹಲಸಿನ ಬೀಜಗಳು (jackfruit seeds) ಉತ್ಕರ್ಷಣ ನಿರೋಧಕಗಳು, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಎ ಯಿಂದ ಸಮೃದ್ಧವಾಗಿರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಲು, ಚರ್ಮ, ಕೂದಲಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ಈ ಬೀಜದಿಂದ ಸಾರು, ಪಲ್ಯ, ವಡೆ ಇತ್ಯಾದಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ಇದರಿಂದ ರುಚಿಕರವಾಗಿರುವ ಕಾಫಿಯನ್ನು ಕೂಡ ತಯಾರಿಸಬಹುದು….

Read More

ಅಪರೂಪದ ಮೇಕೆಯನ್ನು ಸಲ್ಮಾನ್ ಖಾನ್​ಗೆ ಮಾರುವಾಸೆ, ಬೆಲೆ ಎಷ್ಟು ಲಕ್ಷ ಗೊತ್ತೆ? – Kannada News | Farmer Dhanaji wants to sell his goat to Salman Khan for 15 lakh rs

ಸಿನಿಮಾ (Cinema) ನಟರನ್ನು ಭೇಟಿಯಾಗುವುದು, ಅವರಿಂದ ಉಡುಗೊರೆ ಪಡೆಯುವುದು, ಉಡುಗೊರೆ ನೀಡುವುದು, ಸೆಲ್ಫಿ ತೆಗೆಸಿಕೊಳ್ಳುವುದು ಅಭಿಮಾನಿಗಳ ಆಸೆ. ಆದರೆ ಇಲ್ಲೊಬ್ಬ ರೈತನಿಗೆ ತಾನು ಸಾಕಿರುವ ಅಪರೂಪದ ಆಡನ್ನು ಸಲ್ಮಾನ್ ಖಾನ್​​ಗೆ ಮಾರಾಟ ಮಾಡಬೇಕು ಎಂಬ ಆಸೆಯಂತೆ. ಅದೂ ಕಡಿಮೆ ಮೊತ್ತಕ್ಕಲ್ಲ ಬರೋಬ್ಬರಿ 15 ಲಕ್ಷ ರೂಪಾಯಿಗಳಿಗೆ. ಮಹಾರಾಷ್ಟ್ರದ ರೈತ ಧನಾಜಿ ವಿರ್ಕರ್ ಈ ರೀತಿಯ ವಿಚಿತ್ರ ಆಸೆಯನ್ನು ಹೊಂದಿರುವ ರೈತ. ಅಷ್ಟಕ್ಕೂ ಆತ ಸಾಕಿರುವ ಆಡಿನ ವಿಶೇಷತೆಯೇನು? ಮಹಾರಾಷ್ಟ್ರದ ಸತಾರಾ ಜಿಲ್ಲೆಯ ರೈತ ಧನಾಜಿ ವಿರ್ಕರ್ ಅಪರೂಪದ…

Read More

MI vs RR: ಮುಂಬೈ ಮಣಿಸಿ 4ನೇ ತಂಡವಾಗಿ ಪ್ಲೇಆಫ್‌ಗೇರಿದ ರಾಜಸ್ಥಾನ್

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದು ಲೀಗ್‌ ಹಂತದಲ್ಲಿ ಎರಡು ತಂಡಗಳ ಕೊನೆಯ ಪಂದ್ಯವಾಗಿತ್ತು. ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ರಾಜಸ್ಥಾನ್​ಗೆ ಬಹಳ ಮುಖ್ಯವಾಗಿತ್ತು. ಇಂದಿನ ಪಂದ್ಯದಲ್ಲಿ ಗೆದ್ದರಷ್ಟೇ ರಾಜಸ್ಥಾನ್ ಪ್ಲೇಆಫ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತಿತ್ತು. ಅದರಂತೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ರಾಜಸ್ಥಾನ್ ರಾಯಲ್ಸ್ ತಂಡ 4ನೇ ತಂಡವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ರಾಜಸ್ಥಾನ್ ಗೆಲುವಿನಿಂದ…

Read More

ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ, ಸಂಕಷ್ಟದಲ್ಲಿ ಸಿಲುಕಿದ್ಯಾ ಗ್ಯಾರಂಟಿ ಯೋಜನೆ? – Kannada News | Beneficiaries faces Problems for Free Rice Under Anna Bhagya Scheme, what happened?

ಬೆಂಗಳೂರು, (ಮೇ 24): ಅನ್ನಭಾಗ್ಯ ಯೋಜನೆ (Anna Bhagya Scheme). ಸಿಎಂ ಸಿದ್ದರಾಮಯ್ಯಗೆ ಅನ್ನರಾಮಯ್ಯ ಅನ್ನೋ ಕೀರ್ತಿ ತಂದು ಕೊಟ್ಟ ಮಹತ್ವದ ಯೋಜನೆ. ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಅನ್ನೋ ಧೇಯೋದ್ದೇಶದಿಂದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಆದ್ರೆ ಇದೇ ಯೋಜನೆ ಹಲವು ಗೊಂದಲಗಳಿಗೆ ಕಾರಣವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ, ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುತ್ತೆ. ಅಂದ್ರೆ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ, ರಾಜ್ಯ ಸರ್ಕಾರದಿಂದ 5…

Read More

ಫ್ಯಾಟಿ ಲಿವರ್ ಅನ್ನು ನೈಸರ್ಗಿಕವಾಗಿ ಮತ್ತೆ ಮೊದಲಿನ ಸ್ಥಿತಿಗೆ ತರಬೇಕೇ? ಹಾಗಿದ್ರೆ ತಪ್ಪದೆ ಈ ಕೆಲಸಗಳನ್ನು ಮಾಡಿ – Kannada News | How To Reverse Fatty Liver Naturally

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅನೇಕ ವರದಿಗಳ ಪ್ರಕಾರ, ಪ್ರತಿ ಮೂವರಲ್ಲಿ ಒಬ್ಬರಿಗೆ ಫ್ಯಾಟಿ ಲಿವರ್ ಸಮಸ್ಯೆ ಕಾಣಿಸುತ್ತಿದೆ. ಅಸ್ವಸ್ಥ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಅತಿಯಾದ ತೂಕ ಮತ್ತು ಮದ್ಯಪಾನದ ಅಭ್ಯಾಸಗಳು ಇದರ ಪ್ರಮುಖ ಕಾರಣಗಳಾಗಿವೆ. ಆದರೆ ತಜ್ಞರ ಪ್ರಕಾರ, ಆರಂಭಿಕ ಹಂತದಲ್ಲೇ ಗಮನಿಸಿದರೆ ಫ್ಯಾಟಿ ಲಿವರ್ ಅನ್ನು ಬಹುಮಟ್ಟಿಗೆ ರಿವರ್ಸ್ ಮಾಡಬಹುದು. ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಮನೀಷ್ ಹೇಳುವ ಪ್ರಕಾರ, ಲಿವರ್‌ನಲ್ಲಿ ಫೈಬ್ರೋಸಿಸ್ ಉಂಟಾಗುವ ಮುನ್ನವೇ ಸರಿಯಾದ ಜೀವನಶೈಲಿ…

Read More

ಇದೆಂಥಾ ದುರ್ದೈವ! ಕ್ರಿಕೆಟ್ ಆಡುತ್ತಿರುವಾಗಲೇ ಕುಸಿದು ಬಿದ್ದು ಆಟಗಾರ ಸಾವು – Kannada News | Tragedy at KSCA League Match as Ranji Cricketer Dies of Heart Attack

ಬೆಂಗಳೂರು, ಮೇ 24: ರಾಜಧಾನಿಯಲ್ಲಿ ಭಾನುವಾರ ಅತ್ಯಂತ ದಾರುಣ ಘಟನೆಯೊಂದು ಸಂಭವಿಸಿದೆ. ಕೆಎಸ್​ಸಿಎ (KSCA) ಲೀಗ್ ಪಂದ್ಯಾವಳಿ ವೇಳೆ ರಣಜಿ ಅನುಭವಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ (Heart Attack) ಮೃತಪಟ್ಟಿರುವಂತಹ ಘಟನೆ ಬೆಂಗಳೂರಿನ ಬೊಮ್ಮಸಂದ್ರದ ಎಸ್​​ಎಲ್​​ಎಸ್​ ಮೈದಾನದಲ್ಲಿ ನಡೆದಿದೆ. ಎಸ್.ಎಲ್. ಅಕ್ಷಯ್ (36) ಮೃತ ಕ್ರಿಕೆಟ್ ಆಟಗಾರ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಾಂಶಗಳು KSCA ಲೀಗ್ ಪಂದ್ಯದ ವೇಳೆ ಆಘಾತಕಾರಿ ಘಟನೆ ಶಿವಮೊಗ್ಗ ಮೂಲದ ಕ್ರಿಕೆಟ್​​ ಆಟಗಾರನಿಗೆ ಹೃದಯಾಘಾತ ಆವಲಹಳ್ಳಿ ಪೊಲೀಸ್ ಠಾಣಾ…

Read More

ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗ ಬಳಿಕ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ ಜಾಹ್ನವಿ

ಬೆಂಗಳೂರು, (ಮೇ 24): ಕನ್ನಡ ಬಿಗ್ ಬಾಸ್ ಮೂಲಕ ಜನಪ್ರಿಯರಾದ ನಿರೂಪಕಿ ಜಾಹ್ನವಿ ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೌದು… ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗದಿಂದ ಇದೀಗ ಜಾಹ್ನವಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಿಗ್ ಬಾಸ್ ರಿಯಾಲಿ ಶೋಗಳಿಂದ ಜನಪ್ರಿಯತೆ ಗಳಿಸಿರುವ ಜಾಹ್ನವಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇಂದು (ಮೇ 24) ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜಾಹ್ನವಿ ಅಧಿಕೃತವಾಗಿ ಜೆಡಿಎಸ್​ ಸೇರ್ಪಡೆಯಾದರು.ಈ ಮೂಲಕ ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ…

Read More

ದೇಹದಲ್ಲಿ ಈ ರೀತಿ ಬದಲಾವಣೆ ಕಂಡು ಬಂದ್ರೆ ತಡಮಾಡದೆಯೇ ವೈದ್ಯರನ್ನು ಭೇಟಿ ಮಾಡಿ – Kannada News | Ebola Virus Symptoms: Early Warning Signs & Expert Prevention Tips From WHO

ಇತ್ತೀಚಿನ ದಿನಗಳಲ್ಲಿ ಇಬೋಲಾ (Ebola) ವೈರಸ್‌ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ಇದು ಅತ್ಯಂತ ಅಪಾಯಕಾರಿ ವೈರಲ್ ಸೋಂಕುಗಳಲ್ಲಿ ಒಂದಾಗಿ ಪರಿಗಣಿಸಲಾಗಿದ್ದು, ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಆರಂಭದಲ್ಲಿ ಸಾಮಾನ್ಯ ಜ್ವರದ ಲಕ್ಷಣಗಳಂತೆ ಕಾಣುವ ಕಾರಣ, ಅನೇಕರು ಇದನ್ನು ನಿರ್ಲಕ್ಷಿಸುವ ಸಾಧ್ಯತೆ ಇದೆ. ಆದರೆ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಈ ಸೋಂಕು ಗಂಭೀರ ರೂಪ ಪಡೆಯಬಹುದು. ತಜ್ಞರ ಪ್ರಕಾರ, ಇಬೋಲಾ ವೈರಸ್‌ನ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಮತ್ತು ಸೂಕ್ತ ಮುನ್ನೆಚ್ಚರಿಕೆ…

Read More

IPL 2026: ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ಕೆಕೆಆರ್​ ತೊರೆದ 18 ಕೋಟಿಯ ಬೌಲರ್ – Kannada News | IPL 2026: KKR’s Do or Die vs DC; matheesha pathirana Injured, Luvnith Sisodia Joins Squad

ಐಪಿಎಲ್ 2026 (IPL 2026) ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಿದೆ. ಲೀಗ್ ಹಂತದಲ್ಲಿ ಅಂತಿಮ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿರುವ ಕೆಕೆಆರ್ ಈ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕು. ಆಗ ಮಾತ್ರ ಪ್ಲೇಆಫ್​ಗೇರುವ ಅವಕಾಶ ಹೊಂದಿರುತ್ತದೆ. ಹೀಗಿರುವಾಗ ಕೆಕೆಆರ್ ಬಲಿಷ್ಠ ಪ್ಲೇಯಿಂಗ್ 11 ಕಟ್ಟಿಕೊಂಡು ಕಣಕ್ಕಿಳಿಯಬೇಕಾಗುತ್ತದೆ. ಆದರೆ ಈ ಪಂದ್ಯಕ್ಕೂ ಮುನ್ನ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ವೇಗಿ ಮಥಿಶಾ ಪತಿರಾನ ಮಂಡಿರಜ್ಜು ಗಾಯದಿಂದಾಗಿ…

Read More