ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್ – Kannada News | Know the difference of good debt, bad debt, learn the smart ways for wealth creation
ಪ್ರತಿಯೊಬ್ಬರೂ ಸಂಪೂರ್ಣ ಸಾಲಮುಕ್ತರಾಗಲು (Debt-free) ಬಯಸುತ್ತಾರೆ. ಆದರೆ ಶತಾಯಗತಾಯ ಯಾವುದೇ ಸಾಲವಿಲ್ಲದೆ ಬದುಕುತ್ತೇನೆ ಎಂದು ಹಠ ಹಿಡಿಯುವುದು ಸರಿಯಾದ ನಿರ್ಧಾರವಾಗದು ಎಂದು ಹಲವು ಪರಿಣಿತರು ಹೇಳುವುದುಂಟು. ಯಾವಾಗ ಸಾಲ ಮಾಡಬೇಕು, ಯಾಕೆ ಸಾಲ ಮಾಡಬೇಕು ಎನ್ನುವ ವಿವೇಚನೆ ಇರಬೇಕು. ಸಂಪೂರ್ಣ ಸಾಲ ರಹಿತರಾಗುವುದು ಕೆಲವು ಸಂದರ್ಭಗಳಲ್ಲಿ ನಿಮ್ಮ ಆಸ್ತಿ ಹಾಗೂ ಸಂಪತ್ತು ವೃದ್ಧಿಗೆ ಅಡ್ಡಿಯಾಗಬಹುದು. ಸಾಲರಹಿತವಾಗಿ ಬದುಕುತ್ತೇನೆ ಎನ್ನುವ ಬದಲು ಸಾಲವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವ ಪ್ರಮುಖ ಹಣಕಾಸು ತಂತ್ರಗಳನ್ನು ತಿಳಿದಿರುವುದು ಉತ್ತಮ. ‘ಒಳ್ಳೆಯ ಸಾಲ’ ಮತ್ತು ‘ಕೆಟ್ಟ…