ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ? – Kannada News | India Semiconductor Mission 2.0: 12 Year Plan to Boost Chip Manufacturing & MSMEs
ನವದೆಹಲಿ, ಮೇ 21: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ದೇಶದ ಮಹತ್ವಾಕಾಂಕ್ಷೆಯ ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ (ISM- India Semiconductor Mission)) ಯೋಜನೆಯ ಎರಡನೇ ಹಂತವನ್ನು (ISM 2.0) ಬರೋಬ್ಬರಿ 12 ವರ್ಷಗಳ ದೀರ್ಘಾವಧಿಗೆ ವಿಸ್ತರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಈ ಹಿಂದೆ ಇಂತಹ ಯೋಜನೆಗಳ ಅವಧಿ ಕೇವಲ 5 ವರ್ಷಗಳಾಗಿರುತ್ತಿದ್ದವು. ಚಿಪ್ ಉತ್ಪಾದನಾ ವಲಯದಲ್ಲಿ ಹೂಡಿಕೆ ಮತ್ತು ಉತ್ಪಾದನೆಗೆ ದೀರ್ಘಾವಧಿ ಬೇಕಾಗುವುದರಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಬೃಹತ್ ಆರ್ಥಿಕ…