Headlines

ಯೋಗೀಶ್ ಗೌಡ ಕೊಲೆ ಕೇಸ್: ಯಾರಿಗೆ ಜೀವಾವಧಿ? ಯಾರಿಗೆ ರಿಯಾಯಿತಿ? ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಫೈನಲ್ – Kannada News | Yogesh Gowda Murder Verdict: Vinay Kulkarni and 16 Others Await Sentencing Tomorrow

ಬೆಂಗಳೂರು, ಏ.16: ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ (ಏ.16) ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. 17 ಜನರನ್ನು ಅಪರಾಧಿ ಎಂದು ಕೋರ್ಟ್​​​ ಘೋಷಣೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಏ.16) 17 ಶಿಕ್ಷೆ ಪ್ರಮಾಣ ನಿರ್ಧಾರವಾಗಬೇಕಿತ್ತು, ಆದರೆ ಇದೀಗ ಶಿಕ್ಷೆ ಪ್ರಮಾಣವನ್ನು ನಾಳೆ (ಏ.17) ತಿಳಿಸಲಾಗುವುದು ಎಂದು ಕೋರ್ಟ್​​ ಹೇಳಿದೆ. ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಧಾರವಾಡದ ಯೋಗೀಶ್ ಗೌಡ ಹತ್ಯೆ ಪ್ರಕರಣದ ಅಂತಿಮ ಘಟ್ಟ…

Read More

ಬುಮ್ರಾಗೆ ಬೌಲಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದೇ ನಾನು: ಪಾಕ್ ಮೂಲದ ವೇಗಿ

ಪಾಕಿಸ್ತಾನ್ ಮೂಲದ ಯುಎಇ ಕ್ರಿಕೆಟಿಗ ಝಹೂರ್ ಖಾನ್ (Zahoor Khan) ಇತ್ತೀಚೆಗೆ ನೀಡಿದ ಹೇಳಿಕೆಯೊಂದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಭಾರತದ ಸ್ಟಾರ್ ಬೌಲರ್ ಜಸ್​ಪ್ರೀತ್ ಬುಮ್ರಾ ಅವರ ಪ್ರಸಿದ್ಧ ‘ಸ್ಲೋವರ್ ಬಾಲ್’ (Slower ball) ತಂತ್ರವನ್ನು ತಾನೇ ಕಲಿಸಿಕೊಟ್ಟಿದ್ದು ಎಂದು ಅವರು ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಝಹೂರ್ ಖಾನ್,  ಜಸ್​ಪ್ರೀತ್ ಬುಮ್ರಾ ಇತ್ತೀಚೆಗೆ ಸ್ಲೋವರ್ ಎಸೆತಗಳನ್ನು ಎಸೆಯುತ್ತಿದ್ದಾರೆ. ಈ ಎಸೆತಗಳನ್ನು ಹೇಳಿಕೆ ಕೊಟ್ಟಿದ್ದು ನಾನು. ಇದಾದ ಬಳಿಕ ಬುಮ್ರಾ ನಿಧಾನಗತಿಯ ಎಸೆತಗಳ ಮೂಲಕ ಯಶಸ್ಸು…

Read More

ಈ ಆರೋಗ್ಯ ಸಮಸ್ಯೆ ಇರುವವರು ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ವಾಕಿಂಗ್ ಹೋಗಬಾರದು! – Kannada News | Protect Your Heart: Avoid Early Morning Walks in Winter

ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಅನಿವಾರ್ಯವಾಗುತ್ತದೆ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಕೂಡ ಜೀವಕ್ಕೆ ಅಪಾಯ ಉಂಟುಮಾಡಬಹುದು. ಅದಲ್ಲದೆ ಚಳಿಗಾಲದಲ್ಲಿ ಬೆಳಗಿನ ನಡಿಗೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು ಎಂದರೆ ನಂಬುತ್ತೀರಾ.. ಹೌದು, ಮಾಲಿನ್ಯ, ಮಂಜು ಮತ್ತು ಚಳಿ ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಬೆಳಿಗ್ಗೆ ವಾಕಿಂಗ್ (Walk) ಹೋಗುವುದು ಅತ್ಯಂತ ಅಪಾಯಕಾರಿ ಎಂದು ಆರೋಗ್ಯ…

Read More

ಕೊನೆಗೂ ಎಚ್ಚೆತ್ತ ಸರ್ಕಾರ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ದೂರ – Kannada News | Tumakuru: water crisis facing Siddaganga Mutt has been resolved; KIADB Clears BESCOM Dues

ತುಮಕೂರು, ಜನವರಿ 29: ಪಂಪ್ ಹೌಸ್​ನ ವಿದ್ಯುತ್ ಬಿಲ್ (Electricity bill) ಪಾವತಿಸದ ಪರಿಣಾಮ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರಿನ ಸಂಪರ್ಕವನ್ನು ಕೆಐಎಡಿಬಿ ಅಧಿಕಾರಿಗಳು ಕಡಿತಗೊಳಿಸಿದ್ದರು. ಹೀಗಾಗಿ ಸಿದ್ಧಗಂಗಾ ಮಠಕ್ಕೆ ನೀರಿನ (Water) ಸಮಸ್ಯೆ ಆಗುವ ಆತಂಕ ಎದುರಾಗಿತ್ತು. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಚರ್ಚೆ, ಟೀಕೆ ನಡೆದಿತ್ತು. ಟಿವಿ9 ವರದಿ ಕೂಡ ಮಾಡಿತ್ತು. ಇದೀಗ ವರದಿ ಬೆನ್ನಲ್ಲೇ ಬಾಕಿ ಉಳಿದಿದ್ದ ಸುಮಾರು 1.96 ಕೋಟಿ ರೂ ಹಣವನ್ನು ಬೆಸ್ಕಾಂಗೆ ಕೆಐಎಡಿಬಿ ಪಾವತಿಸಿದೆ. ಆ…

Read More

Guru Sanchara Rashi Phala 2026: ಗುರು ಸಂಚಾರ ಮೇಷ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Aries Horoscope 2026: Jupiter Transit Predictions by Dr. Basavaraj Guruji

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಪ್ರಪ್ರಥಮವಾಗಿ ಮೇಷ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಮೇಷರಾಶಿಯ ನಾಲ್ಕನೇ ಮನೆಯಲ್ಲಿ ಗುರುವು (ಸುಖಸ್ಥಾನ) ಸಂಚಾರ ಮಾಡಲಿದ್ದಾನೆ. ಈ ಸಂಚಾರವು ಇವರ ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಈ ಅವಧಿಯಲ್ಲಿ, ಮೇಷ ರಾಶಿಯವರಿಗೆ ಮನೆ ಕಟ್ಟುವ, ನಿವೇಶನ ಅಥವಾ ಭೂಮಿ ಖರೀದಿಸುವ ಯೋಗ ಬಲಗೊಳ್ಳಲಿದೆ. ವಾಹನ ಯೋಗವೂ ಚೆನ್ನಾಗಿದ್ದು, ಉದ್ಯೋಗದಲ್ಲಿ ಬಡ್ತಿ…

Read More

ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನ ನಲಪಾಡ್​ಗೆ ಕುತ್ತು ತಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ – Kannada News | ED Continues Raid on Bitcoin Scam Kingpin Srikis Residence; Nalapads Financial Links Under Scrutiny

ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು ಬಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿImage Credit source: tv9 ಬೆಂಗಳೂರು, ಏಪ್ರಿಲ್ 21: ಬಿಟ್ ಕಾಯಿನ್ ಹಗರಣಕ್ಕೆ (Bitcoin Scam) ಸಂಬಂಧಿಸಿದಂತೆ ಕಿಂಗ್ ಪಿನ್ ಶ್ರೀಕಿ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಏಪ್ರಿಲ್ 21 ರಂದೂ ಮುಂದುವರಿದಿದೆ. ಬೆಂಗಳೂರಿನ ಜಯನಗರದಲ್ಲಿರುವ ಶ್ರೀಕಿ ಮನೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಶೋಧ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ (Congress) ಶಾಸಕ ಎನ್.ಎ. ಹ್ಯಾರಿಸ್ (NA Haris) ಮಗ ನಲಪಾಡ್ ಮತ್ತು ಶ್ರೀಕಿ…

Read More

ಗ್ರಹಚಾರ ಎಂದರೆ ಇದೇ ನೋಡಿ; ಸೋಫಾದಿಂದ ಏಳುವಾಗ ಆಕಸ್ಮಿಕವಾಗಿ ಗುಂಡು ಹಾರಿ ಎನ್​ಆರ್​ಐ ಸಾವು – Kannada News | NRI dies in Punjab as gun goes off while getting up from sofa cctv video viral

ಫಿರೋಜ್‌ಪುರ, ಡಿಸೆಂಬರ್ 31: ಪಂಜಾಬ್‌ನ ಫಿರೋಜ್‌ಪುರದಲ್ಲಿ ಸೋಫಾದಿಂದ ಎದ್ದೇಳುವಾಗ ಸೊಂಟದಲ್ಲಿ ತುಂಬಿದ್ದ ಲೋಡ್ ಮಾಡಿದ ಪಿಸ್ತೂಲ್​ನಿಂದ ಗುಂಡು ಹಾರಿ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹರ್ಪಿಂದರ್ ಸಿಂಗ್ ಎಂಬ ವ್ಯಕ್ತಿ ಧನಿ ಸುಚಾ ಸಿಂಗ್ ಗ್ರಾಮದಲ್ಲಿ ಇತ್ತೀಚೆಗೆ ನೆಲೆಸಿದ್ದ ಅನಿವಾಸಿ ಭಾರತೀಯ. ಸೋಮವಾರ ಈ ಘಟನೆ ನಡೆದಿದೆ. ಮನೆಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ಸೆರೆಯಾಗಿದೆ. ಹರ್ಪಿಂದರ್ ಸಿಂಗ್ ಅವರು ತಮ್ಮ ಸಂಬಂಧಿಕರೊಂದಿಗೆ ಸೋಫಾದಲ್ಲಿ ಕುಳಿತಿದ್ದವರು ಎದ್ದು ನಿಂತಿದ್ದಾರೆ. ಆಗ ಆಕಸ್ಮಿಕವಾಗಿ ಪಿಸ್ತೂಲ್ ಸಿಡಿದು, ಗುಂಡು…

Read More

ಪ್ರತಿಭಟನೆ ವೇಳೆ ಪಿಎಸ್​​ಐಗೆ ಸ್ವಾಮೀಜಿಯಿಂದ ಕಪಾಳಮೋಕ್ಷ: ಅಷ್ಟಕ್ಕೂ ಆಗಿದ್ದೇನು? – Kannada News | Vijayapura Protest: Swamiji Slaps PSI Over Medical College Row

ವಿಜಯಪುರ, ಜನವರಿ 01: ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮಫ್ತಿಯಲ್ಲಿದ್ದ ಪಿಎಸ್​ಐಗೆ ಸ್ವಾಮೀಜಿ ಕಪಾಳಮೋಕ್ಷ ಮಾಡಿರುವ ಘಟನೆ ವಿಜಯಪುರ- ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ. ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್​​ ನಿವಾಸಕ್ಕೆ ಮುತ್ತಿಗೆ ಯತ್ನ ನಡೆಸಿದ್ದು, ಈ ವೇಳೆ ಪೊಲೀಸರು ಸ್ವಾಮೀಜಿ ಬೊಬೈಲ್​​ ಕಸಿದುಕೊಂಡಿದ್ದಾರೆ. ಇದರಿಂದ ಸಿಟ್ಟಾದ ಅವರು ಪೊಲೀಸ್​​ ಅಧಿಕಾರಿ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ. ಘಟನೆ ಏನು? ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ಸ್ಥಾಪನೆಗೆ ವಿರೋಧಿಸಿ…

Read More

ಇರಾನ್ ಜೊತೆ ಮಾತುಕತೆಗೆ ಅಮೆರಿಕ ಒಪ್ಪಿಗೆ, ಕದನ ವಿರಾಮ ಅಂತ್ಯ!; ಟ್ರಂಪ್ ಘೋಷಣೆ – Kannada News | Donald Trump Says US Agreed To Iran Talks But Ceasefire Is Over

ವಾಷಿಂಗ್ಟನ್, ಜುಲೈ 10: ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ವಾಣಿಜ್ಯ ಹಡಗಿನ ಮೇಲಿನ ದಾಳಿಯ ನಂತರ ಇರಾನ್ ಮತ್ತು ಅಮೆರಿಕದ ನಡುವೆ ಮತ್ತೆ ಸಂಘರ್ಷ ಶುರುವಾಗಿತ್ತು. ಉಭಯ ದೇಶಗಳ ನಡುವೆ ಸರಣಿ ಪ್ರತಿದಾಳಿಗಳು ನಡೆದು ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ, ಇರಾನ್ ಮಾಡಿಕೊಂಡ ಮನವಿಯ ಮೇರೆಗೆ ಅದರೊಂದಿಗೆ ಮಾತುಕತೆ ನಡೆಸಲು ಅಮೆರಿಕ ಒಪ್ಪಿಕೊಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ. ಆದರೆ, ಮಾತುಕತೆಗೆ ಸಿದ್ಧವಿದ್ದರೂ ಈಗಾಗಲೇ ಕದನವಿರಾಮ ಅಂತ್ಯವಾಗಿದೆ ಎಂದಿದ್ದಾರೆ….

Read More

Video: ಬ್ರೆಜಿಲ್​ನ ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ, ಮೂವರು ಸಾವು – Kannada News | Small Aircraft Crashes into Building in Belo Horizonte, Three Dead

ಬ್ರೆಜಿಲ್, ಮೇ 05: ಐದು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು ಆಗ್ನೇಯ ಬ್ರೆಜಿಲ್‌ನ ಬೆಲೊ ಹೊರಿಜಾಂಟೆಯಲ್ಲಿ ಸೋಮವಾರ ವಸತಿ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ಮೂವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿಮಾನವು ಕಟ್ಟಡಕ್ಕೆ ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿ ಕಟ್ಟಡದೊಳಗಿನ ಮೆಟ್ಟಿಲುಗಳ ಮೇಲೆ ಕುಳಿತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು.ನಗರ ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಪಂಪುಲ್ಹಾ ವಿಮಾನ ನಿಲ್ದಾಣದಿಂದ ವಿಮಾನ ಹಾರಿದ ಸ್ವಲ್ಪ ಸಮಯದ ನಂತರ ಈ…

Read More