Headlines

ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್ – Kannada News | Ram Charan Bodyguard Kevin Kunta workout video goes viral On Social Media

ಟಾಲಿವುಡ್ ಮೆಗಾಸ್ಟಾರ್ ರಾಮ್ ಚರಣ್ ಎಲ್ಲೇ ಹೋದರೂ ಅವರ ನೆರಳಿನಂತೆ ರಕ್ಷಣೆ ನೀಡುವ ಬಾಡಿಗಾರ್ಡ್ ಕೆವಿನ್ ಕುಂಟ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಿಂದಲೇ ಗಮನ ಸೆಳೆಯುತ್ತಾ ಇದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೆವಿನ್ ಕುಂಟ ಅವರು ತಮ್ಮ ತರಬೇತುದಾರರ ಸಮ್ಮುಖದಲ್ಲಿ ತೀವ್ರ ಹಂತದ ಬಾಕ್ಸಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಪಂಚ್ ಪ್ಯಾಡ್‌ಗಳಿಗೆ ಅವರು ಸತತವಾಗಿ ಆಕ್ರಮಣಕಾರಿ ಪಂಚ್‌ಗಳನ್ನು ನೀಡುತ್ತಾ ತಮ್ಮ ವೇಗ ಮತ್ತು ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಎಕ್ಸಸೈಸ್ ಮಾಡುವ ಮೂಲಕ ತಮ್ಮ ಅದ್ಭುತ…

Read More

Vastu for Electronics: ಮನೆಯಲ್ಲಿ ಪದೇ ಪದೇ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗುತ್ತಿದೆಯೇ? ವಾಸ್ತು ಶಾಸ್ತ್ರ ಹೇಳುವುದೇನು ಗೊತ್ತಾ? – Kannada News | Vastu for Electronics: Solve Malfunctions and Rahu Dosha in Your Home

ಮನೆಯಲ್ಲಿನ ಶಕ್ತಿಯ ಅಸಮತೋಲನವು ಮನೆಯಲ್ಲಿರುವ ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಎಲೆಕ್ಟ್ರಾನಿಕ್ ಸಾಧನಗಳು ಅಗ್ನಿ ಅಂಶಕ್ಕೆ ಸಂಬಂಧಿಸಿವೆ, ಆದ್ದರಿಂದ ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸದಿದ್ದರೆ, ಮನೆಯ ಶಕ್ತಿಯ ಸಮತೋಲನವು ತೊಂದರೆಗೊಳಗಾಗುತ್ತದೆ. ಮನೆಯಲ್ಲಿ ಅಸ್ತವ್ಯಸ್ತವಾಗಿರುವ ರೀತಿಯಲ್ಲಿ ಇರಿಸಲಾಗಿರುವ ಎಲೆಕ್ಟ್ರಾನಿಕ್ ವಸ್ತುಗಳು, ಫ್ರಿಡ್ಜ್, ಟಿವಿ, ಆರ್‌ಒ, ಮಿಕ್ಸರ್, ದೀಪಗಳು, ಫ್ಯಾನ್‌ಗಳು ದೋಷಗಳಿಗೆ ಕಾರಣ ಮತ್ತು ರಾಹು ದುರ್ಬಲ ಸ್ಥಾನದಲ್ಲಿರುವುದೇ ಕಾರಣ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ, ಅಗ್ನಿ ಅಂಶವು ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ…

Read More

‘ಸಮಂತಾ ತಾಯಿ ಆಗುತ್ತಿರುವುದು ನಿಜ’; ಕೊನೆಗೂ ಸಿಕ್ತು ಗುಡ್ ನ್ಯೂಸ್ – Kannada News | Samantha Ruth Prabhu Pregnant! Maa Inti Bangaram Director Confirms Big Good News

ಸಮಂತಾ ‘ಮಾ ಇಂಟಿ ಬಂಗಾರಂ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಮೂರೇ ದಿನಕ್ಕೆ 40+ ಕೋಟಿ ರೂಪಾಯಿ ಗಳಿಕೆ ಮಾಡಿ ಬೀಗಿದೆ. ಈ ಸಿನಿಮಾ ಗೆದ್ದ ಖುಷಿಯಲ್ಲಿ ಸಮಂತಾ ಮಾತನಾಡುವಾಗ ಎಲ್ಲರ ಗಮನ ಅವರ ಹೊಟ್ಟೆಯ ಮೇಲೆ ನೆಟ್ಟಿತ್ತು. ಅವರು ತಾಯಿ ಆಗುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಈಗ ಈ ಊಹೆ ಸರಿಯಾಗಿದೆ. ಸಮಂತಾ ತಾಯಿ ಆಗುತ್ತಿರುವ ವಿಷಯವನ್ನು ಅವರ ಆಪ್ತರೇ ಖಚಿತಪಡಿಸಿದ್ದಾರೆ. ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಳಿಕ ರಾಜ್ ನಿಧಿಮೋರು ಅವರನ್ನು…

Read More

ಎಐ ಬಳಸಿ ಯುವತಿಯ ಅಶ್ಲೀಲ ವಿಡಿಯೋ, ಹಣಕ್ಕೆ ಡಿಮ್ಯಾಂಡ್​​: ಇಬ್ಬರು ಆರೋಪಿಗಳು ಅಂದರ್​​ – Kannada News | Deepfake Blackmail Case: Two Arrested for Extorting Girl’s Family in Chikkamagaluru

ಚಿಕ್ಕಮಗಳೂರು, ಜೂನ್​​ 12: ಯುವತಿಯೋರ್ವಳ ಫೋಟೋವನ್ನು ಪೇಸ್​​ಬುಕ್​ನಿಂದ ಪಡೆದು ಅದನ್ನು ಬಳಸಿ ಅಶ್ಲೀಲ ವಿಡಿಯೋ ಕ್ರಿಯೇಟ್ ಮಾಡಿ ಹಣಕ್ಕೆ ಬ್ಲ್ಯಾಕ್​​ಮೇಲ್​​ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ. AI, ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಬಳಸಿ ಮಾಡಿದ ವಿಡಿಯೋವನ್ನು ಯುವತಿಯ ತಾಯಿಗೆ ಕಳುಹಿಸಿದ್ದ ಆರೋಪಿಗಳು, ದುಡ್ಡಿಗಾಗಿ ಪೀಡಿಸಿದ್ದರು. ಹಣ ನೀಡದಿದ್ದರೆ ಜಾಲತಾಣದಲ್ಲಿ ವಿಡಿಯೋ ಹಾಕುವುದಾಗಿ ಬೆದರಿಕೆ ಹಾಕಿದ್ದರು. ನೊಂದ ಯುವತಿಯ ಕಡೆಯವರು ಲಕ್ಕವಳ್ಳಿ ಪೊಲೀಸರಿಗೆ ನೀಡಿದ್ದ ದೂರಿನ ಅಧಾರದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಅಕ್ಷಯ್…

Read More

ಭಾರತದ ಇನ್ಯಾವ ಸಂಗೀತ ನಿರ್ದೇಶಕನಿಗೂ ಸಿಗದಷ್ಟು ಸಂಭಾವನೆ ಪಡೆದ ಎಆರ್ ರೆಹಮಾನ್

ಭಾರತೀಯ ಸಿನಿಮಾಗಳಲ್ಲಿ (Indian Cinema) ಸ್ಟಾರ್ ನಟರಿಗೆ ಸಿಕ್ಕಷ್ಟು ಸಂಭಾವನೆ, ಮಾನ್ಯತೆ ಸಿನಿಮಾದ ಇನ್ಯಾವುದೇ ವಿಭಾಗದ ಇನ್ಯಾವುದೇ ತಂತ್ರಜ್ಞರಿಗೆ ದೊರೆಯುವುದಿಲ್ಲ. ಸಂಗೀತ ನಿರ್ದೇಶಕರನ್ನಂತೂ ಕೇಳುವವರೇ ಇಲ್ಲ. ಎಷ್ಟೋ ಬಾರಿ ಕೇವಲ ಸಂಗೀತದಿಂದಲೇ ಸಿನಿಮಾಗಳು ಗೆದ್ದಿರುವುದುಂಟು. ಆದರೂ ಸಹ ಸಂಗೀತ ನಿರ್ದೇಶಕರಿಗೆ ಅವರ ಪ್ರತಿಭೆಗೆ ತಕ್ಕಷ್ಟು ಸೂಕ್ತ ಸಂಭಾವನೆ ದೊರೆಯುವುದಿಲ್ಲ. ಇದೀಗ ಎಆರ್ ರೆಹಮಾನ್ ಅವರಿಗೆ ಭಾರಿ ಮೊತ್ತದ ಸಂಭಾವನೆ ದೊರೆತಿದ್ದು, ಭಾರತದ ಇನ್ಯಾವ ಸಂಗೀತ ನಿರ್ದೇಶಕನಿಗೂ ಇಷ್ಟು ದೊಡ್ಡ ಸಂಭಾವನೆ ದೊರೆತಿಲ್ಲ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ‘ರಾಮಾಯಣ’…

Read More

ರಾಂಚಿಯ ಆರ್‌ಎಸ್‌ಎಸ್ ಕಚೇರಿಯ ದಾಳಿಗೆ ಐಎಸ್‌ಐ ನಂಟು; ಭಯೋತ್ಪಾದನಾ ಕೃತ್ಯಕ್ಕೆ ಪಾಕಿಸ್ತಾನದಿಂದ ಫಂಡಿಂಗ್ – Kannada News | Sources say arrested men in RSS Ranchi office attack Case linked to ISI Funded TTH

ರಾಂಚಿ, ಜೂನ್ 19: ಜಾರ್ಖಂಡ್‌ನ ರಾಂಚಿಯಲ್ಲಿ ಜೂನ್ 16ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಚೇರಿ ಮೇಲೆ ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರೂ ಆರೋಪಿಗಳು ಪಾಕಿಸ್ತಾನದ ಐಎಸ್‌ಐ (ISI) ಫಂಡಿಂಗ್ ಮಾಡುತ್ತಿರುವ ‘ತೆಹ್ರೀಕ್-ಎ-ತಾಲಿಬಾನ್ ಹಿಂದೂಸ್ತಾನ್’ (TTH) ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ರಾಂಚಿ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಜಂಟಿಯಾಗಿ ನಡೆಸಿದ ತನಿಖೆಯ ವೇಳೆ, ಆರ್‌ಎಸ್‌ಎಸ್ ಕಚೇರಿಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯು ಕೇವಲ ಸ್ಥಳೀಯ ಘಟನೆಯಲ್ಲ,…

Read More

ದಿನ ಭವಿಷ್ಯ: ಇಂದು ಈ ರಾಶಿಯವರನ್ನು ಹಣಕಾಸಿನ ಲಾಭಕ್ಕೆ ಒತ್ತಾಯಿಸುವರು – Kannada News | Horoscope 18 Wednesday 2026; Dina Rashi Bhavishya Today, Checkout the details here

ಮೇಷ ರಾಶಿ: ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಯಾರೂ ನಿಮ್ಮ ಬಗ್ಗೆ ಹೇಳದಿದ್ದಾಗ ಆತ್ಮ ಪ್ರಶಂಸೆಯನ್ನು ಮಾಡಿಕೊಳ್ಳುವಿರಿ. ಗೌಪ್ಯತೆಯ ವಿಚಾರದಲ್ಲಿ ವರ್ತನೆಯು ಎಲ್ಲರೂ ಮೆಚ್ಚುವಂಥದ್ದಾಗಿರಲಿದೆ. ನಿಮ್ಮ ಬಗ್ಗೆ‌ ನಿಮಗೇ ಬೇಕೆಂದು ಏನಾದರೂ ಹೇಳಿಯಾರು. ಕೃತಜ್ಞತೆಯನ್ನು ನೀವು ರೂಢಿಸಿಕೊಳ್ಳಬೇಕಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ವೃಷಭ ರಾಶಿ: ಸದುಪಯೋಗವಾಗುವಂತಹ ಕೆಲಸದ ಕಡೆ ಗಮನವಿರಲಿ. ಸರಕಿನ ಆಮದು ಮಾಡಿಕೊಳ್ಳಲು ತೊಂದರೆ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸುವಿರಿ. ಖರೀದಿಯ ವಸ್ತುಗಳು…

Read More

ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು – Kannada News | Kolar Land Grab: Shivarapattana 80 Cr Zero Bin Zero Scam Exposed

ಕೋಲಾರ, ಫೆಬ್ರವರಿ 02: ಅದು ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೈಗಾರಿಕಾ ಪ್ರದೇಶ. ಅಲ್ಲಿ ಭೂಮಿಗೆ (Land) ಬಂಗಾರದ ಬೆಲೆ ಇದೆ. ಅಂಥ ಜಾಗದಲ್ಲಿ ಯಾರೂ ವಾರಸುದಾರರಿಲ್ಲದ ಭೂಮಿ ಇದೆ ಎಂದಾಗ ಭೂಗಳ್ಳರು, ಪ್ರಭಾವಿಗಳು ಸುಮ್ಮನೆ ಬಿಡುತ್ತಾರಾ, ಸಾಧ್ಯವೇ ಇಲ್ಲ. ಇಂಥಾದೊಂದು ಜಾಗ ಇದೇ ಅಂಥ ಗೊತ್ತಾಗಿದ್ದೇ ನೋಡಿ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಕೋಟ್ಯಂತರ ರೂ. ಭೂಮಿಯನ್ನು ತಿಂದು ತೇಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣ ಶಿಲ್ಪಿಗಳ ತವರೂರು. ಇದಕ್ಕೆ ಇಂಥದೊಂದು ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಶಿವಾರಪಟ್ಟಣ…

Read More

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬಿಜೆಪಿ ಮುಖಂಡನಿಗೆ ರಾಜ್ಯ ಸಚಿವ ಸ್ಥಾನಮಾನ!: ‘ಕೈ’ ಕಾರ್ಯಕರ್ತರ ಕಿಡಿ – Kannada News | Karnataka Government Grants Minister Status to 54 Corp Heads; BJP Leader Inclusion Fuels Congress Outrage

ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್​​Image Credit source: Tv9 Kannada ಬೆಂಗಳೂರು, ಫೆಬ್ರವರಿ 10: ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಾಗಿರುವ ಒಟ್ಟು 54 ಮಂದಿಗೆ ಸಚಿವ ಸ್ಥಾನಮಾನ ನೀಡಿ ರಾಜ್ಯಸರ್ಕಾರ ಮೊನ್ನೆಯಷ್ಟೇ ಆದೇಶಿಸಿದ್ದು, ಶಿಕಾರಿಪುರದ ಬಿಜೆಪಿ ಮುಖಂಡನಿಗೂ ರಾಜ್ಯ ಸಚಿವ ಸ್ಥಾನಮಾನ ನೀಡಿರೋದೀಗ ಕಾಂಗ್ರೆಸ್​ ಪಾಳಯದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಪಕ್ಷದ ನಾಯಕರ ನಿರ್ಧಾರದ ವಿರುದ್ಧ ‘ಕೈ’ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರೀ ಅಸಮಾಧಾನ ಹೊರಹಾಕಿದ್ದಾರೆ. 54 ಮಂದಿ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಕರ್ನಾಟಕ…

Read More

ಕಾಂಗ್ರೆಸ್ ಮುಖಂಡನ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾರವಾರ, ಮಾರ್ಚ್ 25: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿ ಬಳಿ ಕಾಂಗ್ರೆಸ್ (Congress) ಮುಖಂಡ ಗೋಪಾಲಕೃಷ್ಣ ನಾಯ್ಕ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗೋಪಾಲಕೃಷ್ಣ ನಾಯ್ಕ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಗೋವಾ ನೋಂದಣಿಯ ಫೋರ್ಡ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಮೊದಲು ರಾಡ್‌ನಿಂದ ಹಲ್ಲೆ ನಡೆಸಿದ ಬಳಿಕ, ಚಾಕುವಿನಿಂದ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಸದ್ಯ, ಗಂಭೀರ ಗಾಯಗೊಂಡಿರುವ ಗೋಪಾಲಕೃಷ್ಣ ನಾಯ್ಕರನ್ನು ಅಂಕೋಲದ…

Read More