ಬಲ್ಡೋಟಾ ಕಾರ್ಖಾನೆ ಕೆರೆ ವಿವಾದ: ರಾತ್ರೋರಾತ್ರಿ ಗೇಟ್ ಮರುನಿರ್ಮಾಣ; ಮತ್ತೆ ಸಿಡಿದೆದ್ದ ರೈತರು – Kannada News | Baldota Factory Lake Dispute: Farmers Threaten Fresh Demolition After Koppal Gate Rebuilt
ಕೊಪ್ಪಳ, ಜುಲೈ 29: ಬಲ್ಡೋಟಾ ಕಾರ್ಖಾನೆ (Baldota Factory) ಆವರಣದಲ್ಲಿರವ ಕೆರೆ (lake) ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ರೈತ ಹುತಾತ್ಮ ದಿನಾಚರಣೆ ವೇಳೆ ಧ್ವಂಸಗೊಂಡಿದ್ದ ಕಾರ್ಖಾನೆಯ ಗೇಟ್ ಮತ್ತು ಕಾಂಪೌಂಡ್ ಅನ್ನು ಆಡಳಿತ ಮಂಡಳಿ ರಾತ್ರೋರಾತ್ರಿ ಮರುನಿರ್ಮಾಣ ಮಾಡಿರುವುದು ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೆರೆಯನ್ನು ಸಾರ್ವಜನಿಕರಿಗೆ ನೀಡದಿದ್ದರೆ ಮತ್ತೆ ಗೇಟ್ ಒಡೆಯುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಬಲ್ಡೋಟಾ ಕಾರ್ಖಾನೆ ಆವರಣದಲ್ಲಿರವ ಕೆರೆ ವಿವಾದ: ಉದ್ವಿಗ್ನ ವಾತಾವರಣ ಕೊಪ್ಪಳ ತಾಲೂಕಿನ ಬಸಾಪೂರ…