Headlines

ಹುಬ್ಬಳ್ಳಿ ಮರ್ಯಾದಾ ಹತ್ಯೆ ಬೆನ್ನಲ್ಲೇ ಹೊಸ ಕಾನೂನು ತರಲು ಮುಂದಾದ ಸರ್ಕಾರ – Kannada News | Karnataka Government moves to bring new law in wake of Hubballi honor killing

ಹುಬ್ಬಳ್ಳಿ, ಡಿಸೆಂಬರ್​ 29: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ (Hubballi) ಸ್ವತ ತಂದೆಯೇ ಆರು ತಿಂಗಳ ಗರ್ಭಿಣಿ ಮಗಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ರಾಜ್ಯದಲ್ಲಿ ಮರ್ಯಾದಾ ಹತ್ಯೆ (honor killing) ತಡೆ ಸಂಬಂಧ ಕಾನೂನು ಜಾರಿಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಕಳೆದ ರಾತ್ರಿ ಗ್ರಾಮದಲ್ಲಿ ಜಿಲ್ಲಾಡಳಿತ ಶಾಂತಿ ಸಭೆ ಕೂಡ ಮಾಡಿದೆ. ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೊಳಿಸಲು ಚಿಂತನೆ: ಸಿಎಂ…

Read More

ಪ್ರವಾಸಿ ಪ್ರಿಯರಿಗೆ ಶಾಕ್​​: ಹೊಸ ವರ್ಷದ ಹಿನ್ನೆಲೆ ಈ ಸ್ಥಳಗಳಿಗೆ ಇರಲಿದೆ ನಿರ್ಬಂಧ – Kannada News | Karnataka new year restrictions nandi hills mullayanagiri and seetalayyanagiri closed on december 31

ಬೆಂಗಳೂರು/ಚಿಕ್ಕಮಗಳೂರು, ಡಿಸೆಂಬರ್​​ 29: ಹೊಸ ವರ್ಷದ ಹಿನ್ನಲೆ ಫ್ಯಾಮಿಲಿ, ಸ್ನೇಹಿತರ ಜೊತೆ ಟೂರ್​​ ಹೋಗೋರ ಸಂಖ್ಯೆ ಅತ್ಯಧಿಕವಾಗಿರುತ್ತೆ. ನೀವು ಕೂಡ ಎಲ್ಲಾದರೂ ಪ್ರವಾಸಕ್ಕೆ ಹೋಗೋಣ ಎಂದುಕೊಂಡಿದ್ರೆ ಆ ಸ್ಥಳಗಳು ಅಂದು ಓಪನ್​​ ಇರುತ್ತಾ ಅಥವಾ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದ್ಯಾ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ. ಯಾಕೆಂದ್ರೆ ಬೆಂಗಳೂರು ಸಮೀಪದ ನಂದಿಗಿರಿಧಾಮ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿ ವಿವಿಧ ಪ್ರವಾಸಿ ತಾಣಗಳಿಗೆ ಟೂರಿಸ್ಟ್​​ಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ನಂದಿಗಿರಿಧಾಮಕ್ಕಿಲ್ಲ ಪ್ರವೇಶ ಹೊಸ ವರ್ಷಾಚರಣೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿತಾಣ ನಂದಿಗಿರಿಧಾಮಕ್ಕೆ…

Read More

ಲಕ್ಷ್ಮಣ ಸವದಿ ಕಣ್ಣೆದುರಲ್ಲೇ ಹಾರ್ಟ್ ಅಟ್ಯಾಕ್! ಶಾಸಕನ ಮುಂದೇ ಪ್ರಾಣಬಿಟ್ಟ ಆಪ್ತ – Kannada News | Lakshman Savadi Close Friend dies from Heart attack infront of him

ಬೆಳಗಾವಿ, ಏಪ್ರಿಲ್ 25: ಜಿಲ್ಲೆಯ ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಮನಕಲಕುವ ಘಟನೆಯೊಂದು ಸಂಭವಿಸಿದೆ. ಶಾಸಕ ಲಕ್ಷ್ಮಣ ಸವದಿ ಅವರ ಆತ್ಮೀಯ ಬೆಂಬಲಿಗರಾದ ರಾವಸಾಬ ಬೇವನೂರ (65) ಅವರು ಶಾಸಕರ ಕಣ್ಣೆದುರಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗ್ರಾಮದಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶಾಸಕರು ತೆರಳಿದ್ದರು. ಈ ಸಂದರ್ಭದಲ್ಲಿ ರಾವಸಾಬ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಶಾಸಕರೇ ಮುತುವರ್ಜಿ ವಹಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರೂ ಸಹ, ಚಿಕಿತ್ಸೆ ಫಲಕಾರಿಯಾಗದೆ…

Read More

ಶೀಘ್ರವೇ ಬರಲಿದೆ ಡೆಂಗ್ಯೂ ಲಸಿಕೆ! ಏನಿದರ ವಿಶೇಷತೆ? ಹೇಗೆ ಕಾರ್ಯನಿರ್ವಹಿಸುತ್ತೆ ತಿಳಿದುಕೊಳ್ಳಿ

ಭಾರತದಲ್ಲಿ ಪ್ರತಿವರ್ಷ ಡೆಂಗ್ಯೂ (Dengue) ಪ್ರಕರಣಗಳು ಹೆಚ್ಚುತ್ತಿದ್ದು, ಅನೇಕ ಮಂದಿ ಇದರ ಪರಿಣಾಮವಾಗಿ ಸಾವನ್ನಪ್ಪುತ್ತಿದ್ದಾರೆ. ಇದುವರೆಗೆ ಡೆಂಗ್ಯೂಗೆ ನಿರ್ದಿಷ್ಟ ಲಸಿಕೆ ಲಭ್ಯವಿರಲಿಲ್ಲ. ಆದರೆ ಈಗ ದೇಶದಲ್ಲಿ ಶೀಘ್ರದಲ್ಲೇ ಡೆಂಗ್ಯೂ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಹೌದು, ‘Qdenga’ ಲಸಿಕೆಯ ಅಂತಿಮ ಹಂತದ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಲಸಿಕೆಯನ್ನು ಜಪಾನ್‌ನ ಪ್ರಸಿದ್ಧ ಔಷಧ ಕಂಪನಿ ಟಕೆಡಾ ಫಾರ್ಮಾಸ್ಯುಟಿಕಲ್ಸ್ (Takeda Pharmaceutical Company) ಅಭಿವೃದ್ಧಿಪಡಿಸಿದ್ದು, ಹೈದರಾಬಾದ್‌ನ ಬಯೋಲಾಜಿಕಲ್ ಇ (Biological E) ಸಂಸ್ಥೆಯೊಂದಿಗೆ ಸಹಭಾಗಿತ್ವದಲ್ಲಿ…

Read More

Shigella Infection: ಏನಿದು ಶಿಗೆಲ್ಲೋಸಿಸ್ ಸೋಂಕು? ಕೇರಳದಲ್ಲಿ ಹೊಸ ವೈರಲ್ ಸೋಂಕಿಗೆ ಜನ ಹೆದರುತ್ತಿರುವುದಕ್ಕೆ ಕಾರಣವೇನು? – Kannada News

ಕೇರಳದಲ್ಲಿ ಶಿಗೆಲ್ಲೋಸಿಸ್ (Shigellosis) ಎಂಬ ಅತಿಸಾರ ಸಂಬಂಧಿತ ಬ್ಯಾಕ್ಟೀರಿಯಾ ಸೋಂಕಿನ ಪ್ರಕರಣಗಳ ಜೊತೆಗೆ ವೆಸ್ಟ್ ನೈಲ್ ಜ್ವರ ಕೂಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸಿದೆ. ಈ ಎರಡೂ ಕಾಯಿಲೆಗಳಿಗೆ ಪರಸ್ಪರ ಸಂಬಂಧವಿಲ್ಲವಾದರೂ ಜನರು ಜಾಗರೂಕರಾಗಿರಬೇಕು ಎಂದು ತಜ್ಞರು ಹೇಳಿದ್ದಾರೆ. ಅದರಲ್ಲಿಯೂ ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು ಅತ್ಯಂತ ವೇಗವಾಗಿ ಹರಡುವ ಗುಣ ಹೊಂದಿದ್ದು ಕಲುಷಿತ ಆಹಾರ, ನೀರು ಹಾಗೂ ಅಸ್ವಚ್ಛತೆಯ ಮೂಲಕ ಸೋಂಕು ಹರಡಬಹುದಾಗಿದೆ. ಹಾಗಾಗಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ….

Read More

Bheemanna Khandre passes away: ಬೀದರ್: ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ‌ ನಿಧನ – Kannada News | Veteran Congress Leader and Former Minister Bheemanna Khandre Passes Away at 102 in Bidar

ಬೀದರ್, ಜನವರಿ 17: ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ (102) (Bheemanna Khandre) ವಯೋಸಹಜ ಅನಾರೋಗ್ಯದಿಂದ ಬೀದರ್​​ನ (Bidar) ಸ್ವಗೃಹದಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ವಯೋ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಮಲ್ಸಿ ಸ್ಪೆಷಾಲಿಟಿ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಕೆಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಸೋಮವಾರ ಅವರನ್ನು ಮನೆಗೆ ಕರೆದೊಯ್ದು ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ…

Read More

ಗ್ಲಾಮರ್ ಲೋಕದಿಂದ ಅಧ್ಯಾತ್ಮದತ್ತ ಮಮತಾ ಕುಲಕರ್ಣಿ: ವಿವಾದಗಳ ಸುಳಿಯಲ್ಲೇ ಕಳೆದುಹೋದ ನಟಿಯ ಕಥೆ – Kannada News | From Bollywood Diva to Sanyasini: The Turbulent Life of Mamta Kulkarni

90ರ ದಶಕದಲ್ಲಿ ಬಾಲಿವುಡ್‌ನ ಟಾಪ್ ನಟಿಯಾಗಿ ಮೆರೆದವರು ಮಮತಾ ಕುಲಕರ್ಣಿ. ಸಲ್ಮಾನ್ ಖಾನ್, ಶಾರುಖ್ ಖಾನ್ ಅವರಂತಹ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದ ಈ ನಟಿ, ತಮ್ಮ ಸೌಂದರ್ಯ ಮತ್ತು ಧೈರ್ಯವಂತ ನಿರ್ಧಾರಗಳಿಂದಲೇ ಸುದ್ದಿಯಲ್ಲಿದ್ದರು. ಆದರೆ, ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ಮಾಯವಾದ ಮಮತಾ, ದಶಕಗಳ ಕಾಲ ವಿದೇಶದಲ್ಲಿ ನೆಲೆಸಿದ್ದರು. ಅಧ್ಯಾತ್ಮದ ಹಾದಿ ಮತ್ತು ಮಹಾಕುಂಭ ಮೇಳದ ಸಂಚಲನ: 2025ರಲ್ಲಿ ಭಾರತಕ್ಕೆ ಮರಳಿದ ಮಮತಾ ಕುಲಕರ್ಣಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದು ತಮ್ಮ ಬದಲಾದ ಜೀವನಶೈಲಿಯಿಂದ. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ…

Read More

ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ – Kannada News | Anchor Anushree Come up with Little Girl Avatar In Saregamapa

‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ವೇದಿಕೆಯೆಂದರೆ ಅಲ್ಲಿ ಹಾಡುಗಳ ಜೊತೆಗೆ ಮನರಂಜನೆಗೂ ಕೊರತೆಯಿರುವುದಿಲ್ಲ. ಇತ್ತೀಚೆಗೆ ನಡೆದ ವಿಶೇಷ ಸಂಚಿಕೆಯಲ್ಲಿ ಮೆಂಟರ್‌ಗಳೆಲ್ಲರೂ ಶಾಲಾ ಮಕ್ಕಳ ವೇಷ ಧರಿಸಿ ಬಂದು ಶಿಶುಗೀತೆಗಳನ್ನು ಹಾಡುವ ಮೂಲಕ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದರು. ಆದರೆ, ಈ ಇಡೀ ಸಂಚಿಕೆಯಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ನಿರೂಪಕಿ ಅನುಶ್ರೀ ಅವರ ಮೇಲೆ. ಯಾವಾಗಲೂ ಸೀರೆ ಅಥವಾ ಮಾಡರ್ನ್ ಉಡುಗೆಗಳಲ್ಲಿ ಕಂಗೊಳಿಸುತ್ತಿದ್ದ ಅನುಶ್ರೀ, ಈ ಬಾರಿ ಕಾರ್ಯಕ್ರಮದ ಥೀಮ್‌ಗೆ ತಕ್ಕಂತೆ ಕ್ಯೂಟ್…

Read More

Ranji Trophy 2025-26: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​​ ಪಂದ್ಯ; ರಾಜ್ ನಗರ ಸ್ಟೇಡಿಯಂ ಬಗ್ಗೆ ನಿಮಗೆಷ್ಟು ಗೊತ್ತು? – Kannada News | Historic Ranji Final in Hubballi: KSCA Stadium Prepares for Karnataka vs Jammu and Kashmir Battle

ರಣಜಿ ಫೈನಲ್​​ ಪಂದ್ಯಕ್ಕೆ ನಡೆಯುತ್ತಿರುವ ತಯಾರಿImage Credit source: Tv9 Kannada ಹುಬ್ಬಳ್ಳಿ, ಫೆಬ್ರವರಿ 20: ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವೆ ರಣಜಿ ಪೈನಲ್ ಪಂದ್ಯ ರಾಜ್ಯದಲ್ಲಿ ನಡೆಯಲಿದ್ದು, ಫೆ. 24ರಂದು ಹುಬ್ಬಳ್ಳಿ ನಗರದ ರಾಜ್ ನಗರದಲ್ಲಿರೋ KSCA ಮೈದಾನದಲ್ಲಿ ಉಭಯ ತಂಡಗಳು ಸೆಣೆಸಾಡಲಿವೆ. ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಮಾದರಿಯಲ್ಲೇ ಹುಬ್ಬಳ್ಳಿ ನಗರದ ರಾಜ್ ನಗರದಲ್ಲಿ ಕೆಎಸ್​​ಸಿಎ ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಹೊಂದಿದ್ದು, 2012ರಲ್ಲಿ ಇದರ ಉದ್ಘಾಟನೆ ಆಗಿದೆ. ಜಹೀರ್ ಖಾನ್, ಚೇತೇಶ್ವರ ಪೂಜಾರ್…

Read More

ಬ್ಯಾರಿಕೇಡ್ ಮುರಿದು ಪೊಲೀಸ್ ವಾಹನಕ್ಕೆ ಗುದ್ದಿದ ಥಾರ್, ನಿತೀಶ್ ಕುಮಾರ್ ನಿವಾಸದ ಬಳಿ ಘಟನೆ – Kannada News | SUV Smashes Barricade, Collides With Police Vehicle Near CM Residence

ಪಾಟ್ನಾ, ಫೆಬ್ರವರಿ 15: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ನಿವಾಸದ ಬಳಿ ಥಾರ್ ಬ್ಯಾರಿಕೇಡ್ ಮುರಿದು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಪಾಟ್ನಾ ಪೊಲೀಸರ ಶಕ್ತಿ ಸುರಕ್ಷಾ ತಂಡಕ್ಕೆ ಸೇರಿದ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಅಪಘಾತದ ನಂತರ, ಎರಡೂ ವಾಹನಗಳ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿತ್ತು. ಗಸ್ತು ವಾಹನದೊಳಗಿದ್ದ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದು ಸಂಚಾರ ವಿಭಾಗದ ಡಿಎಸ್‌ಪಿ ಅಜಿತ್…

Read More